ಸಾರಾಂಶ
ಕುಡಚಿ ಮತ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ, ಮತದಾರರೇ ನನ್ನ ದೇವರು. ಎಲ್ಲರೂ ಪಕ್ಷಭೇದ ಮರೆತು ಕ್ಷೇತ್ರದ ಅಭಿವೃದ್ಧಿಗೋಸ್ಕರ ನನನ್ನೊಂದಿಗೆ ಕೈಜೋಡಿಸಿ. ಕ್ಷೇತ್ರವನ್ನು ಅಭಿವೃದ್ಧಿಪಡಿಸೋಣ ಎಂದು ಕುಡಚಿ ಮತಕ್ಷೇತ್ರ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಕನ್ನಡಪ್ರಭ ವಾರ್ತೆ ಪಾಲಬಾವಿ
ಕುಡಚಿ ಮತ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ, ಮತದಾರರೇ ನನ್ನ ದೇವರು. ಎಲ್ಲರೂ ಪಕ್ಷಭೇದ ಮರೆತು ಕ್ಷೇತ್ರದ ಅಭಿವೃದ್ಧಿಗೋಸ್ಕರ ನನನ್ನೊಂದಿಗೆ ಕೈಜೋಡಿಸಿ. ಕ್ಷೇತ್ರವನ್ನು ಅಭಿವೃದ್ಧಿಪಡಿಸೋಣ ಎಂದು ಕುಡಚಿ ಮತಕ್ಷೇತ್ರ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.ತಾಲೂಕಿನ ಪಾಲಬಾವಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು,
ಕುಡಚಿ ಮತಕ್ಷೇತ್ರದಲ್ಲಿ ₹39 ಕೋಟಿಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಹಾರೂಗೇರಿಯಿಂದ - ರಾಯಬಾಗ ಕೊಡುವ ಮುಖ್ಯ ರಸ್ತೆ, ಕುಡಚಿಯಿಂದ -ತೇರದಾಳ ಕೂಡುವ ಮುಖ್ಯರಸ್ತೆಗೆ ಆಯ್ದ ಭಾಗಗಳಲ್ಲಿ ರಸ್ತೆ ಅಗಲೀಕರಣ, ವಿವಿಧ ಗ್ರಾಮಗಳ ತೋಟದ ರಸ್ತೆಗಳ ಡಾಂಬರೀಕರಣ, ಹೊಸ ಅಂಗನವಾಡಿಗಳ ಭೂಮಿ ಪೂಜೆ, ತೋಟದ ರಸ್ತೆಗಳ ಡಾಂಬರೀಕರಣ ಪೂಜೆ, ಹಳ್ಳದ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣ, ವಿವಿಧ ದೇವಸ್ಥಾನಗಳಿಗೆ ಫೇವರ್ಸ್ ಬ್ಲಾಕ್ ಅಳವಡಿಕೆ, ಸಾರ್ವಜನಿಕ ಶೌಚಾಲಯಗಳ ಉದ್ಘಾಟನೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್, ನಿರಂತರ ಜ್ಯೋತಿ ಸೇರಿ ಮುಗಳಖೋಡ ಪಟ್ಟಣಲ್ಲಿ ನಗರೋತ್ಥಾನದಲ್ಲಿ ವಿವಿಧ ಗ್ರಾಮಗಳಲ್ಲಿ ಮನೆಗಳ ಹಕ್ಕುಪತ್ರ ವಿತರಣೆ ಸೇರಿದಂತೆ ₹39 ಕೋಟಿಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಹೆಮ್ಮೆ ನನಗಿದೆ ಎಂದು ಶಾಸಕರು ಹೇಳಿದರು.ಈ ಸಂದರ್ಭದಲ್ಲಿ, ಡಾ:ಸಿ.ಬಿ.ಕುಲಿಗೋಡ, ಪುರಸಭೆ ಸದಸ್ಯ ರಮೇಶ ಯಡವಣ್ಣವರ, ಪರಪ್ಪಗೌಡ ಖೇತಗೌಡರ, ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ, ಎಂಜಿನಿಯರ್ ಚೌಗಲಾ, ಬಿಇಒ ಬಸವರಾಜಪ್ಪ.ಆರ್, ಸಿಡಿಪಿಒ ಭಾರತಿ ದೊಡಮನಿ, ಪಿಡಬ್ಲ್ಯೂಡಿ ಎಇ ಜಿ.ಎಂ.ಗೂಳಪ್ಪನವರ, ತಾಪಂ ಮಾಜಿ ಅಧ್ಯಕ್ಷ ರವಿಶಂಕರ ನರಗಟ್ಟಿ, ಪಿಕೆಪಿಎಸ್ ಉಪಾಧ್ಯಕ್ಷ ಹನುಮಾಸಾಬ ನಾಯಿಕ, ಗ್ರಾಪಂ ಅಧ್ಯಕ್ಷ ಶೋಭಾ ಕುರಬೆಟ್ಟಿ, ಇಲಾಯಿ ಕಾಗವಾಡ, ಗಿರೆಪ್ಪ ಬಳಗಾರ, ಲಕ್ಷ್ಮಣ ಮೇತ್ರಿ, ಪಿಡಿಒ ಶ್ರೀಕಾಂತ ಪಾಟೀಲ, ಕೆಂಪಣ್ಣ ಕುರನಿಂಗ, ಪ್ರಭು ಕರೋಶಿ, ಗುರುಪಾದ ಚೌಗಲಾ, ಅಶೋಕ ಚೌಗಲಾ, ರಾಜು ಹುಕ್ಕೇರಿ, ದುಂಡೇಶ ಪಾಟೀಲ, ಪುಟ್ಟಗೌಡ ನಾಯಿಕ, ಲಕ್ಷ್ಮಣ ಕೂಡಲಗಿ, ಬರಮಪ್ಪ ಬಾಗೋಜಿ, ಪಿಡಿಒ ಬಿ.ಎಸ್.ನಾಗನೂರ, ರವಿ ಹಿಡಕಲ್ಲ, ಪಿಡಿಒ ರಾಮನಗೌಡ ಪಾಟೀಲ ಇತರರು ಇದ್ದರು.