ಶರಣ ಸಂಸ್ಕೃತಿ ರೂಢಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಿ

| Published : Sep 05 2024, 02:16 AM IST

ಶರಣ ಸಂಸ್ಕೃತಿ ರೂಢಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಯುವಜನಾಂಗ ಮೊಬೈಲ್ ಗೀಳಿಗೆ ಸಿಲುಕಿ ತಮ್ಮ ಸುಂದರ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾಧನಿಯ. ಕೆಟ್ಟ ಸಂಸ್ಕೃತಿ ಬೆಳೆಸಿಕೊಳ್ಳದೇ ಶರಣ ಸಂಸ್ಕೃತಿ ರೂಢಿಸಿಕೊಂಡು ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡರೇ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಯುವಜನಾಂಗ ಮೊಬೈಲ್ ಗೀಳಿಗೆ ಸಿಲುಕಿ ತಮ್ಮ ಸುಂದರ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾಧನಿಯ. ಕೆಟ್ಟ ಸಂಸ್ಕೃತಿ ಬೆಳೆಸಿಕೊಳ್ಳದೇ ಶರಣ ಸಂಸ್ಕೃತಿ ರೂಢಿಸಿಕೊಂಡು ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡರೇ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಹೇಳಿದರು.

ತಾಲೂಕಿನ ಇಂಗಳೇಶ್ವರ ಗ್ರಾಮದ ಮಾದಲಾಂಬಿಕೆ ಸ್ಮಾರಕ ಭವನದಲ್ಲಿ ಮಂಗಳವಾರ ಶ್ರಾವಣ ಮಾಸದಂಗವಾಗಿ ಹನ್ನೊಂದು ದಿನಗಳ ಕಾಲ ಹಮ್ಮಿಕೊಂಡಿದ್ದ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮನದ ಮೈಲಿಗೆಯನ್ನು ಹೋಗಲಾಡಿಸಿಕೊಳ್ಳಲು ಶರಣರ ವಚನಾಮೃತ ಆಲಿಸಿ ಪ್ರತಿಯೊಬ್ಬರೂ ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸುವ ಮೂಲಕ ಎಲ್ಲ ಸಮುದಾಯದ ಶರಣರನ್ನು ಒಂದೆಡೆ ಸೇರಿಸಿ ಸಮಾನತೆಯನ್ನು ತಂದರು. ಮಾನವರಲ್ಲಿ ಮೇಲು ಕೀಳು ಎಂಬುವುದಿಲ್ಲ. ಹುಟ್ಟಿನಿಂದ ಯಾರು ಜಾತಿಯನ್ನು ಪಡೆದುಕೊಂಡು ಬಂದಿಲ್ಲ. ಕಾಯಕದ ಆಧಾರದ ಮೇಲೆ ಜಾತಿಗಳು ಹುಟ್ಟಿಕೊಂಡಿವೆ ಎಂದರು.ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂಗಳೇಶ್ವರ ಗ್ರಾಮದಲ್ಲಿ ಹಲವಾರು ಶರಣರು ಜನಿಸಿದ್ದಾರೆ. ಇಂತಹ ಪವಿತ್ರ ಭೂಮಿಯಲ್ಲಿ ದಿನನಿತ್ಯ ಶರಣರ ಚಿಂತನೆ ನಡೆಸುವದು ಅಗತ್ಯವಿದೆ ಎಂದು ತಿಳಿಸಿದರು.ಹನ್ನೊಂದು ದಿನಗಳ ಕಾಲ ಪ್ರವಚನ ನೀಡಿದ ಕರಿಭಂಟನಾಳದ ಶಿವಕುಮಾರ ಸ್ವಾಮೀಜಿ, ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮಾಡಳಿತಾಧಿಕಾರಿ ಸಂತೊಷ ಕುಂಟೋಜಿ, ಪ್ರಭು ಡಿಗ್ಗಾವಿ, ಬಸಯ್ಯ ಹಿರೇಮಠ, ಮಲ್ಲಪ್ಪ ತಕ್ಕೋಡ, ಅಪ್ಪು ಪತಂಗೆ, ಶ್ರೀಶೈಲ ಬಿ ತಾಳಿಕೋಟಿ ಸುಭಾಸ ಜುಮನಾಳ ಮುತ್ತು ಕುಲಕರ್ಣಿ, ಸಿದ್ರಾಮಪ್ಪ ಬಾಗೇವಾಡಿ, ಬಸಯ್ಯ ಮಠ, ಈರಣ್ಣ ಬೇಕಿನಾಳ, ಅಪ್ಪಾಸಾಹೇಬ ಕುಲಕರ್ಣಿ ಇದ್ದರು.

ಚಂದ್ರಶೇಖರ ಮೇಲಿನಮನಿ ಸ್ವಾಗತಿಸಿದರು. ಶಂಕರ ಹದಿಮೂರು ನಿರೂಪಿಸಿದರು. ಕಾರ್ಯಕ್ರಮದ ಮುಕ್ತಾಯದ ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಹಾಗೂ ಪಿ.ಐ.ಗುರುಶಾಂತ ದಾಶ್ಯಾಳ ಅವರು ಸ್ಮಾರಕಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಅವರನ್ನು ಸನ್ಮಾನಿಸಿದರು.