ಸಾರಾಂಶ
ನಗರದ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲ ರಚನೆ ಮತ್ತು ಹೂಡಿಕೆ ಸಮಾರಂಭ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲ ರಚನೆ ಮತ್ತು ಹೂಡಿಕೆ ಸಮಾರಂಭ ನಡೆಯಿತು.ಮುಖ್ಯ ಅತಿಥಿಗಳಾಗಿ ದೇವರಾಜ ಪೊಲೀಸ್ ಠಾಣೆಯ ಎಸಿಪಿ ಶಾಂತಮಲ್ಲಪ್ಪ ಭಾಗವಹಿಸಿದ್ದರು.ರೋಟರಿ ಪಶ್ಚಿಮ ಸಂಸ್ಥೆಯ ಅಧ್ಯಕ್ಷ ಡಾ.ಬಿ. ಚಂದ್ರ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಪಶ್ಚಿಮ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ಎ. ಮೋಹನ್ ಕೃಷ್ಣ, ಖಜಾಂಚಿ ಪಿ. ಗಂಗಾಧರ ಗೌಡ, ಚುನಾಯಿತ ಅಧ್ಯಕ್ಷರಾದ ಡಾ. ರಾಘವೇಂದ್ರ ಪ್ರಸಾದ್, ಡಾ.ಸಿ.ಜಿ. ರಾಮಚಂದ್ರ, ಸದಸ್ಯರಾದ ಛಾಯಾ ವೆಂಕಟೇಶ್, ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ವೆಸ್ಟ್ನ ಅಧ್ಯಕ್ಷೆ ಶಶಿಕಲಾ, ಕಾರ್ಯದರ್ಶಿಗಳಾದ ಭವಾನಿ, ಚಂದ್ರ, ಸದಸ್ಯರಾದ ನೂತನ್ ಅಜಿತ್ ಮತ್ತು ರೋಟರಿ ಪಶ್ಚಿಮ ಶಾಲೆ ಸರಸ್ವತಿಪುರಂನ ಪ್ರಾಂಶುಪಾಲೆ ಕೆ.ಎಸ್. ಪೂರ್ಣಿಮಾ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.