ಮಾನ್ಸೂನ್ ಮ್ಯಾರಥಾನ್ ಓಟಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ

| Published : Jul 14 2024, 01:31 AM IST

ಸಾರಾಂಶ

ಚಿನಕುರಳಿ ಎಸ್‌ಟಿಜಿ ಶಿಕ್ಷಣ ಸಂಸ್ಥೆ ಆವರಣದಿಂದ ಹೊರಟ ಮಾನ್ಸೂನ್ ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಶಾಲೆಯ 700ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಓಡುವ ಸ್ಥಳಗಳಲ್ಲಿ ಮಕ್ಕಳ ರಕ್ಷಣೆಗಾಗಿ ಪೊಲೀಸರು ಹಾಗೂ ಶಾಲಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿನಕುರಳಿ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಸಣ್ಣತಮ್ಮೇಗೌಡ ಹಾಗೂ ಅಂಕಮ್ಮ ಅವರ ನೆನಪಿನ ಅರ್ಪಣೆ ಕಾರ್‍ಯಕ್ರಮದ ಅಂಗವಾಗಿ ನಡೆದ ಮಾನ್ಸೂನ್ ಮ್ಯಾರಥಾನ್ ಓಟಕ್ಕೆ ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು.

ಚಿನಕುರಳಿ ಎಸ್‌ಟಿಜಿ ಶಿಕ್ಷಣ ಸಂಸ್ಥೆ ಆವರಣದಿಂದ ಹೊರಟ ಮಾನ್ಸೂನ್ ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಶಾಲೆಯ 700ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಓಡುವ ಸ್ಥಳಗಳಲ್ಲಿ ಮಕ್ಕಳ ರಕ್ಷಣೆಗಾಗಿ ಪೊಲೀಸರು ಹಾಗೂ ಶಾಲಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಮ್ಯಾರಥಾನ್ ಓಟದಲ್ಲಿ ವಿದ್ಯಾರ್ಥಿಗಳಿಗೆ 3 ಕಿಮೀವರೆಗೆ ಅಂತರ ನಿಗದಿ ಪಡಿಸಲಾಗಿತ್ತು. ಸೀನಿಯರ್, ಸಬ್ ಸೀನಿಯರ್ ಹಾಗೂ ಜ್ಯೂನಿಯರ್ ವಿಭಾಗದಲ್ಲಿ ಮಕ್ಕಳನ್ನು ಸ್ಪರ್ಧೆಗೆ ಇಳಿಸಿದ್ದು, ಗಂಡು ಮಕ್ಕಳು ಹಾಗೂ ಹೆಣ್ಣುಮಕ್ಕಳಿಗೆ ಪ್ರತ್ಯೇಕವಾಗಿ ಓಟಕ್ಕೆ ಬಿಡಲಾಯಿತು.

ಎಸ್‌ಟಿಜಿ ಶಾಲೆ ಆವರಣದಿಂದ ಹೊರಟ ವಿದ್ಯಾರ್ಥಿಗಳು ಪಾಂಡವಪುರ- ಕೆ.ಆರ್.ಪೇಟೆ ಮುಖ್ಯರಸ್ತೆಯ ಮಾರ್ಗವಾಗಿ ಹೊರಟು ಬಿಜಿಎಸ್ ಮುಖ್ಯದ್ವಾರದ ಮೂಲಕ ಬಿಜಿಎಸ್ ಶಾಲೆ, ಶ್ರೀರಾಮೇಶ್ವರ ದೇವಸ್ಥಾನದ ಬಳಿ ಮಾರ್ಗವಾಗಿ ಮತ್ತೆ ಗ್ರಾಮದ ರಂಗದ ರಸ್ತೆ ಮಾರ್ಗವಾಗಿ ಮತ್ತೆ ಶಾಲೆ ತಲುಪಿದರು. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ವೈದ್ಯರು ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನಮ್ಮ ತಂದೆ-ತಾಯಿ ಸಣ್ಣತಮ್ಮೇಗೌಡರು ಹಾಗೂ ಅಂಕಮ್ಮರ ನೆನಪಿನ ಅರ್ಪಣೆ ಅಂಗವಾಗಿ ಮಾನ್ಸೂನ್ ಮ್ಯಾರಥಾನ್ ಸ್ಪರ್ಧೆ ಆಯೋಜಿಸಿದ್ದು, ಎಲ್ಲಾ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ದೈಹಿಕ ಸಾಮರ್ಥ್ಯದ ಜತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಸೀನಿಯರ್ ವಿಭಾಗ:

ರಾಹುಲ್ ಎಸ್.ಗೌಡ(ಪ್ರಥಮ), ವಿಕಾಶ್.ಪಿ(ದ್ವಿತೀಯ), ರಾಕೇಶ್.ಎನ್.(ತೃತೀಯ), ನಿರಂಜನ್‌ ಕುಮಾರ್(ನಾಲ್ಕನೇ), ಚಿದಂಬರ್(ಐದು),

ಹೆಣ್ಣು ಮಕ್ಕಳ ವಿಭಾಗ:- ಪೂಜಾಶ್ರೀ.ಡಿ.ವಿ.(ಪ್ರಥಮ), ಇಂಪನ(ದ್ವಿತೀಯ), ನಮಿಷ.ಸಿ.ವೈ(ತೃತೀಯ), ನವ್ಯ(ನಾಲ್ಕನೇ), ಲೇಖನ.ಎಲ್.ಡಿ(ಐದು).

ಸಬ್ ಜ್ಯೂನಿಯರ್ ವಿಭಾಗ:

ಗಂಡು ಮಕ್ಕಳು: ಸಿ.ಎಂ.ನಿತಿನ್‌ಗೌಡ (ಪ್ರಥಮ), ಜೆ.ನಿತಿನ್‌ಗೌಡ (ದ್ವಿತೀಯ), ಪ್ರಜ್ವಲ್(ತೃತೀಯ), ದೀನಾ(ನಾಲ್ಕು), ಸುಜಿತ್(ಐದು).

ಹೆಣ್ಣುಮಕ್ಕಳು:- ಲಕ್ಷ್ಮಿ(ಪ್ರ), ಸಾತ್ವಿಕನಾಗೇಶ್(ದ್ವಿ), ರಕ್ಷಾ ಸಿ.ಎಲ್.(ತೃ), ಯಶಿತಾ.ಜಿ(ನಾಲ್ಕು), ಮಾನ್ವಿ(ಐದು).

ಜ್ಯೂನಿಯರ್ ವಿಭಾಗ: ಗಂಡು ಮಕ್ಕಳು:- ಧುವನ್(ಪ್ರಥಮ), ಸಮರ್ಥಗೌಡ(ದ್ವಿತೀಯ), ಚಿರಂತ್.ಎಂ.(ತೃತೀಯ), ಪ್ರಜ್ವಲ್(ನಾಲ್ಕನೇ), ಪುಣ್ಯಚರಣ್(ಐದು).,

ಹೆಣ್ಣುಮಕ್ಕಳ ವಿಭಾಗ:- ಅಧಿತಿ ಸಿ.ಕೆ.(ಪ್ರಥಮ), ಹರ್ಷಿತಾ.ಜಿ.ಎಂ.(ದ್ವಿತೀಯ), ನವ್ಯಶ್ರೀ(ತೃತೀಯ), ಯಶಸ್ವಿ ಸಿ.ವೈ(ನಾಲ್ಕು), ಕುಶಾ.ಸಿ.ಎಂ.(ಐದು) ಸ್ಥಾನಗಳಿಸಿದರು.

ಈ ವೇಳೆ ಮುಖ್ಯಶಿಕ್ಷಕಿ ಮಾಚಮ್ಮ, ಆಡಳಿತಾಧಿಕಾರಿ ನಿವೇದಿತನಾಗೇಶ್ ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಬಂದಿಗಳು ಹಾಜರಿದ್ದರು.