ಮಾಜಿ ಸಚಿವ ರಾಜಾ ಶ್ರೀ ರಂಗದೇವರಾಯಲು ಪ್ರಥಮ ಪುಣ್ಯಸ್ಮರಣೋತ್ಸವ

| Published : Aug 11 2024, 01:30 AM IST

ಸಾರಾಂಶ

ಗಂಗಾವತಿ ನಗರದ ಆನೆಗೊಂದಿ ರಸ್ತೆಯಲ್ಲಿರುವ ಶ್ರೀರಂಗದೇವರಾಯಲು ನಿವಾಸದಲ್ಲಿ ಮಾಜಿ ಸಚಿವ ಹಾಗೂ ರಾಜವಂಶಸ್ಥ ಶ್ರೀರಂಗದೇವರಾಯಲು ಪ್ರಥಮ ಪುಣ್ಯಸ್ಮರಣೋತ್ಸವ ಜರುಗಿತು.

ಗಂಗಾವತಿ: ನಗರದ ಆನೆಗೊಂದಿ ರಸ್ತೆಯಲ್ಲಿರುವ ಶ್ರೀರಂಗದೇವರಾಯಲು ನಿವಾಸದಲ್ಲಿ ಮಾಜಿ ಸಚಿವ ಹಾಗೂ ರಾಜವಂಶಸ್ಥ ಶ್ರೀರಂಗದೇವರಾಯಲು ಪ್ರಥಮ ಪುಣ್ಯಸ್ಮರಣೋತ್ಸವ ಜರುಗಿತು.

ರೈತ ಮುಖಂಡ ಟಿ. ಸತ್ಯನಾರಾಯಣ ಮಾತನಾಡಿ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯಗಳನ್ನು ಕಲ್ಪಿಸಲು ಕಳೆದ 30 ವರ್ಷಗಳ ಹಿಂದೆ ರಾಜಾ ಶ್ರೀರಂಗದೇವರಾಯಲು ಬುನಾದಿ ಹಾಕಿದ್ದರಿಂದ ಪ್ರಸ್ತುತ ಈಗಿನ ಜನಪ್ರತಿನಿಧಿಗಳಿಗೆ ಸಹಕಾರಿಯಾಗಿದೆ ಎಂದು ಸ್ಮರಿಸಿದರು.

ಎಡದಂಡೆಯ ಕಾಲುವೆ ನೀರಾವರಿ, ಗ್ರಾಮೀಣ ಜನರಿಗೆ ನಿವೇಶನ, ಮನೆ, ಕುಡಿಯುವ ನೀರು, ರಸ್ತೆ, ಕೆರೆಗಳ ನಿರ್ಮಾಣ, ಬಸ್ ಡಿಪೋ, ಅಗ್ನಿಶಾಮಕದಳ, ಪದವಿ ಕಾಲೇಜು, ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಬಸ್ ನಿಲ್ದಾಣ, ಕಡೆಬಾಗಿಲು ಸೇತುವೆ ಕಲ್ಪನೆ, ವಿಜಯನಗರ ಕಾಲುವೆಗಳ ಆಧುನೀಕರಣ, ಆನೆಗೊಂದಿ ಉತ್ಸವ ಆಚರಣೆ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಬೇರೆಯವರು ಉಪಟಳ ನೀಡಿದರೂ ಸೇಡಿನ ರಾಜಕಾರಣ ಮಾಡದ ಅಪರೂಪದ ವ್ಯಕ್ತಿಯಾಗಿದ್ದರು. ಇಂದಿನ ರಾಜಕಾರಣಿಗಳು ಶ್ರೀರಂಗದೇವರಾಯಲು ಮಾರ್ಗದಲ್ಲಿ ನಡೆಯುವುದು ಅವಶ್ಯಕವಾಗಿದೆ ಎಂದರು.

ಲಲಿತಾರಾಣಿ ಶ್ರೀರಂಗದೇವರಾಯಲು, ರಾಜಾ ನರಸಿಂಹದೇವರಾಯಲು, ಕುಪ್ಪರಾಜು, ಡಾ. ರಾಯಲು, ಕೃಷ್ಣದೇವರಾಯಲು, ಹಿರಿಯ ಪತ್ರಕರ್ತರಾದ ಕೆ. ಮಲ್ಲಿಕಾರ್ಜುನ ಸಾಣಾಪೂರ, ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ, ಬಳ್ಳಾರಿ ಮಹಾನಗರಪಾಲಿಕೆ ಸದಸ್ಯ ಕೆ. ವೆಂಕಟೇಶ, ಜಿಪಂ ಮಾಜಿ ಸದಸ್ಯ ಬಿಜೆಪಿ ಮುಖಂಡ ಎಚ್.ಎಂ. ಸಿದ್ದರಾಮಸ್ವಾಮಿ, ಕಲ್ಯಾಣಂ ನಾಗೇಶರಾವ್, ಟಿ. ರಾಮಚಂದ್ರ, ಬಾಳೆಕಾಯಿ ತಿಮ್ಮಪ್ಪ, ಗಾಂಧಿಬಾಬು, ಗಾಂಧಿರಾಜು ವಿಶ್ವನಾಥರಾಜು, ಕಾಂಗ್ರೆಸ್ ಯುವ ಮುಖಂಡ ವಿಷ್ಣು ಜೋಶಿ, ತಿರುಕಪ್ಪ, ವೈ. ರಮೇಶ, ನಾಗಮುನಿರೆಡ್ಡಿ, ವೆಂಕಟರಾವ್, ಜನಾದ್ರಿ ದೊಡ್ಡಯ್ಯ, ಬಾಲಯ್ಯ, ಶ್ರೀನಿವಾಸ ಸಿರಿಗೇರಿ, ಶಂಕರನಾಯ್ಕ್, ವೆಂಕಟರಮಣರಾವ್ ಸೇರಿ ಅನೇಕರಿದ್ದರು.