ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿದ್ದ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರ 109 ನೇ ಜನ್ಮ ದಿನೋತ್ಸವ

ಕನ್ನಡಪ್ರಭ ವಾರ್ತೆ, ತುಮಕೂರುಬ್ಯಾಂಕುಗಳ ರಾಷ್ಟೀಕರಣ, ಉಳುವವನೇ ಭೂಮಿಯ ಒಡೆಯ, ಜೀತಪದ್ದತಿ ನಿರ್ಮೂಲನೆಯಂತಹ ಕಾಯ್ದೆಗಳು ಭಾರತದಲ್ಲಿ ಶೋಷಿತ ಸಮುದಾಯಗಳು ಇತರರಂತೆ ತಲೆ ಎತ್ತಿ ನಿಲ್ಲಲು ಸಹಾಯಕವಾಗಿದ್ದು, ಇದಕ್ಕೆ ಕಾರಣರಾದ ಇಂದಿರಾಗಾಂಧಿ ಭಾರತೀಯರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಇದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಚಂದ್ರಶೇಖರಗೌಡ ತಿಳಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿದ್ದ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರ 109 ನೇ ಜನ್ಮ ದಿನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಕ್ಷ ಸಂಘಟನೆಯ ಉದ್ದೇಶದಿಂದ ನವೆಂಬರ್ 23 ರಂದು ತುರುವೇಕೆರೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಸಭೆ ನಡೆಯಲಿದೆ. ಹಾಗೆಯೇ ನವೆಂಬರ್ 24 ರಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ದೀಪ್ತಿ ವರ್ಗೀಸ್‌ಅವರ ಮುಖಂಡತ್ವದಲ್ಲಿ ಮತಗಳ್ಳತನ ತಡೆಯಿರಿ, ದೇಶ ರಕ್ಷಿಸಿ ಎಂಬ ಕಾರ್ಯಕ್ರಮವನ್ನು ತುಮಕೂರಿನಲ್ಲಿ ಆಯೋಜಿಸಲಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್‌ಅಹಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ, ಎಚ್.ಸಿ.ಹನುಮಂತಯ್ಯ, ಷಣ್ಮುಗಪ್ಪ, ಸೌಭಾಗ್ಯಮ್ಮ,ಕೆಂಪಣ್ಣ, ಶಿವಾಜಿ , ಮಾಜಿ ಶಾಸಕ ಗಂಗಹನುಮಯ್ಯ, ಮಹೇಶ್, ಫೈಯಾಜ್,ಇನಾಯತ್, ಇರ್ಪಾನ್, ಕೈದಾಳ ರಮೇಶ್, ಆದಿಲ್,ಕೆಂಪರಾಜು, ಸುಕನ್ಯ, ಸುಜಾತ, ಹಿಲಾಯಿ ಸಿಕಂದರ್, ಅಂಬರೀಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.