ಸಾರಾಂಶ
ಮಾಜಿ ವಿಧಾನ ಪರಿಷತ್ ಸದಸ್ಯ ನರೇಂದ್ರ ಖೇಣಿ (89) ಅಕ್ಟೋಬರ್ 8 ರಂದು ನಿಧನ ಹೊಂದಿದ್ದಾರೆ. ನರೇಂದ್ರ ಖೇಣಿಯವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಅವರ ಅಂತ್ಯಕ್ರಿಯೆ ಅವರ ಸ್ವ ಗ್ರಾಮ ರಂಜೋಳ ಖೇಣಿ ಗ್ರಾಮದಲ್ಲಿ ಅಕ್ಟೋಬರ್ 10 ರಂದು ಮಧ್ಯಾಹ್ನ 2 ಗಂಟೆಗೆ ನೆರವೇರಿಸಲು ಕುಟುಂಬ ವರ್ಗದವರು ನಿರ್ಧರಿಸಿದ್ದಾರೆ. ಮೃತರು ಮಕ್ಕಳಾದ ರಾಜೇಶ್ ಖೇಣಿ, ಮಹೇಶ್ ಖೇಣಿ. ಶರ್ಮಿಳಾ, ಖೇಣಿ ಕುಟುಂಬ ವರ್ಗ ಮತ್ತು ಬಂಧು ಮಿತ್ರರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಕನ್ನಡಪ್ರಭ ವಾರ್ತೆ ಬೀದರ್ಮಾಜಿ ವಿಧಾನ ಪರಿಷತ್ ಸದಸ್ಯ ನರೇಂದ್ರ ಖೇಣಿ (89) ಅಕ್ಟೋಬರ್ 8 ರಂದು ನಿಧನ ಹೊಂದಿದ್ದಾರೆ. ನರೇಂದ್ರ ಖೇಣಿಯವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಅವರ ಅಂತ್ಯಕ್ರಿಯೆ ಅವರ ಸ್ವ ಗ್ರಾಮ ರಂಜೋಳ ಖೇಣಿ ಗ್ರಾಮದಲ್ಲಿ ಅಕ್ಟೋಬರ್ 10 ರಂದು ಮಧ್ಯಾಹ್ನ 2 ಗಂಟೆಗೆ ನೆರವೇರಿಸಲು ಕುಟುಂಬ ವರ್ಗದವರು ನಿರ್ಧರಿಸಿದ್ದಾರೆ. ಮೃತರು ಮಕ್ಕಳಾದ ರಾಜೇಶ್ ಖೇಣಿ, ಮಹೇಶ್ ಖೇಣಿ. ಶರ್ಮಿಳಾ, ಖೇಣಿ ಕುಟುಂಬ ವರ್ಗ ಮತ್ತು ಬಂಧು ಮಿತ್ರರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ನರೇಂದ್ರ ಖೇಣಿ ರಾಜಕೀಯ ಬದುಕುನರೇಂದ್ರ ಖೇಣಿಯವರು ರಂಜೋಳ ಖೇಣಿಯ ಮಹಾರುದ್ರಪ್ಪ ಖೇಣಿಯವರ ಮೊಮ್ಮಗ ಹಾಗು ಮಡಿವಾಳಪ್ಪ ಖೇಣಿ ಅವರ ಕಿರಿಯ ಮಗನಾಗಿ 1ಅಕ್ಟೋಬರ್ 1935 ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೈದ್ರಾಬಾದ್ ನಲ್ಲಿ ಪಡೆದು ನಂತರದ ದಿನಗಳಲ್ಲಿ ಸಮಾಜ ಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು 1961 ರಲ್ಲಿ ರಂಜೋಳ ಖೇಣಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.1963 ರಿಂದ 1964 ರ ವರೆಗೆ ಹುಮನಾಬಾದ್ ತಾಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ, ನಂತರ ದಿನಗಳಲ್ಲಿ, ಬೀದರ್ ಜಿಲ್ಲೆಯಿಂದ 1968 ಮತ್ತು 1980 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರು ರಾಜಕೀಯ, ಸಾಮಾಜಿಕವಾಗಿ ಮಾಡಿರುವ ಕಾರ್ಯಗಳನ್ನು ಇಂದಿಗೂ ಜನರು ಮರೆತಿಲ್ಲ. ದಿವಂಗತ ದೇವರಾಜು ಅರಸು ಮತ್ತು ವೀರೇಂದ್ರ ಪಾಟೀಲ್ ಅವರ ಜತೆ ಉತ್ತಮ ಒಡನಾಟ ಹೊಂದಿದ್ದರು.