ರಾಜ್ಯದಲ್ಲಿ ಹೊಸ ಮಾದರಿ ಸರ್ಕಾರ ರಚನೆ: ಶಾಸಕರ ಬಾಂಬ್

| Published : May 24 2024, 12:57 AM IST / Updated: May 24 2024, 01:42 PM IST

Vidhana Soudha
ರಾಜ್ಯದಲ್ಲಿ ಹೊಸ ಮಾದರಿ ಸರ್ಕಾರ ರಚನೆ: ಶಾಸಕರ ಬಾಂಬ್
Share this Article
  • FB
  • TW
  • Linkdin
  • Email

ಸಾರಾಂಶ

20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರೇ ಸರ್ಕಾರ ಬದಲಾವಣೆ ಬಗ್ಗೆ ಹೇಳಿದ್ದಾರೆ ಎಂದು ಶಾಸಕ ಅಭಯ ಹೇಳಿದರು.

  ಬೆಳಗಾವಿ : ಹೊಸ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ರಚನೆಯಾಗಲಿದೆ. ಕಾಂಗ್ರೆಸ್ ಪತನ ಆಗುತ್ತೋ ಇಲ್ಲವೋ ಗೊತ್ತಿಲ್ಲ, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ ಎಂದು ಶಾಸಕ ಅಭಯ ಪಾಟೀಲ ಬಾಂಬ್‌ ಸಿಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಸರ್ಕಾರ ಉಳಿಯಲ್ಲ ಎಂದು ಕಾಂಗ್ರೆಸ್‌ ಶಾಸಕರೇ ಹೇಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಹೊಸ ಮಾದರಿಯಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ತಿಳಿಸಿದರು.

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ ಚರ್ಚೆ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಹಾರಾಷ್ಟ್ರ, ಗೋವಾ ಸಿಎಂ ಯಾಕೆ, ಸರ್ಕಾರ ಉಳಿಯಲ್ಲ ಎಂದು 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರೇ ಈ ಬಗ್ಗೆ ಹೇಳಿದ್ದಾರೆ ಎಂದರು.

ಶಾಸಕರಿಗೆ ಅನುದಾನ ಬಿಡುಗಡೆಯಾಗದ ವಿಚಾರವಾಗಿ ಪ್ರತಿಕ್ರಿಯಿಸಿ, 2019ರಲ್ಲಿ ಒಂದೇ ವರ್ಷದಲ್ಲಿ ₹300 ಕೋಟಿ ಅನುದಾನ

ಅನೇಕ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದೆ. ಆದರೇ ಈ ಒಂದು ವರ್ಷದಲ್ಲಿ ₹11 ಕೆಲಸಕ್ಕೂ ಚಾಲನೆ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದ ಅವರು, ಸರ್ಕಾರ ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರ ಅನುದಾನರಹಿತ ಸರ್ಕಾರ. ಸರ್ಕಾರ ಇದ್ದಷ್ಟು ದಿನ ನಮಗೆ ನಷ್ಟ ಇದೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಇದೇ ರೀತಿ 6 ತಿಂಗಳು ಮುಂದುವರಿದರೆ ಜನ ನಮ್ಮನ್ನು ಗ್ರಾಮಗಳಿಗೆ ಬರುವುದಕ್ಕೂ ಬಿಡುವುದಿಲ್ಲ. ಅವರು ಬಳಸುವ ಶಬ್ಧ ನಾನು ಬಳಸೋಕೆ ಬರಲ್ಲ ಎಂದು ವಿವರಿಸಿದರು.

ತೆಲಂಗಾಣದಲ್ಲಿ 17 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ 10ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಈ ಮೂಲಕ ರೇವಂತ ರೆಡ್ಡಿ ಸರ್ಕಾರ ಮನೆಗೆ ಹಾದಿ ಹಿಡಿಯೋ ಪ್ರಕ್ರಿಯೆ ಆರಂಭವಾಗಲಿದೆ ಎಂದ ಅವರು, ತೆಲಂಗಾಣ ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಬಣಗಳಿವೆ. ಚುನಾವಣೆಯಲ್ಲಿ ಸೋತರೆ ನೈತಿಕ ಹೊಣೆಯನ್ನು ಸಿಎಂ ರೇವಂತ ರೆಡ್ಡಿ ಅವರೇ ಹೊರಬೇಕು, ಅಷ್ಟೇ ಅಲ್ಲದೇ ಸಿಎಂ ರಾಜೀನಾಮೆ ನೀಡಬೇಕು ಎಂದು ಅನೇಕರು ಹೇಳಿದ್ದಾರೆ ಎಂದು ತಿಳಿಸಿದರು.

ನಾನು ಪ್ರಭಾರಿಯಾಗಿ 40 ದಿನ ಕೆಲಸ ಮಾಡಿದ್ದು, 11 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ಈ ಚುನಾವಣೆಯಲ್ಲಿ ಓವೈಸಿ ಕಥೆ ಮುಗಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.