ಸಾರಾಂಶ
ಬ್ಯಾಂಕ್ ಆಫ್ ಬರೋಡ ಉತ್ತಮ ಸೇವೆ ನೀಡುತ್ತಿದೆ. 100 ಕೋಟಿ ರು. ಗೂ ಅಧಿಕ ವ್ಯವಹಾರ ನಡೆಸುತ್ತಿದೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಬ್ಯಾಂಕ್ ಆಫ್ ಬರೋಡದ ಗದ್ದೆಹಳ್ಳ ಶಾಖೆ ವತಿಯಿಂದ ಬ್ಯಾಂಕಿನ 117ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.ಸುಂಟಿಕೊಪ್ಪ ಶಾಖಾ ಕಚೇರಿಯಲ್ಲಿ ಶನಿವಾರದಂದು ಸಂಸ್ಥಾಪನ ದಿನದ ಅಂಗವಾಗಿ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ಸೀಲಂ ಸ್ವರೂಪ್ ಬ್ಯಾಂಕ್ ಆಫ್ ಬರೋಡವು ದೇಶ ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ. ಗ್ರಾಹಕರ ಸಹಕಾರದಿಂದ 100 ಕೋಟಿ ರು.ಗೂ ಅಧಿಕ ವ್ಯವಹಾರವನ್ನು ನಡೆಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎ. ಲೋಕೇಶ್‌ಕುಮಾರ್ ಮಾತನಾಡಿ, ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಆಪ್ ಬರೋಡ ಉತ್ತಮವಾಗಿ ಕಾರ್ಯನಿರ್ವಹಿಸಿ ಅಧಿಕ ವ್ಯವಹಾರವನ್ನು ನಡೆಸಿ ಸಾರ್ವಜನಿಕರಲ್ಲಿ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದೆ. ಮುಂದಿನ ದಿನಗಳಲ್ಲಿ ಅಭಿವೃಧ್ದಿಯತ್ತ ಸಾಗಲಿ ಎಂದರು.ಇದೇ ಸಂದರ್ಭ ಗ್ರಾಹಕರಿಗೆ ಸಿಹಿಯನ್ನು ವಿತರಿಸಿದರು. ಇದೇ ಸಂದರ್ಭ ಬ್ಯಾಂಕಿನ ಅಧಿಕಾರಿಗಳಾದ ಚಂದ್ರಶೇಖರ್ ರೆಡ್ಡಿ, ಚಿನ್ನಬಾಬು, ಸಿಬ್ಬಂದಿ ಸಂತೋಷ್, ಎ.ಚೆನ್ನಮ್ಮ, ಪುಷ್ಪಾವತಿ ಶಾಂತಪ್ಪ ಹಾಗೂ ಕಾಫಿ ಬೆಳೆಗಾರರಾದ ಎಸ್.ಬಿ. ಜಯರಾಜ್, ಜೆ.ಸಂಜಯ್, ವ್ಯಾಪಾರಸ್ಥರಾದ ಮುರಳಿಧರ್ ಕಾಮತ್, ರವಿ, ಜೋಸೆಫ್, ಗ್ರಾಹಕರು ಹಾಜರಿದ್ದರು.