ಗುಮ್ಮನಹಳ್ಳಿ ಗ್ರಾಮದ ಡೇರಿ ಸಂಘವು ಆರ್ಥಿಕವಾಗಿ ಸದೃಢವಾಗಿ ಸಂಘದ ಎಲ್ಲಾ ಆಡಳಿತ ಮಂಡಳಿಯವರು ಸೇರಿ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಒಕ್ಕೂಟದಿಂದ ದೊರೆಯುವ ಅನುದಾನವನ್ನು ಪ್ರಾಮಾಣಿಕವಾಗಿ ದೊರಕಿಸಿಕೊಡುವ ಕೆಲಸ ಮಾಡುತ್ತೇನೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಗುಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಗ್ರಾಮದ ಡೇರಿ ಸಂಘವು ಆರ್ಥಿಕವಾಗಿ ಸದೃಢವಾಗಿ ಸಂಘದ ಎಲ್ಲಾ ಆಡಳಿತ ಮಂಡಳಿಯವರು ಸೇರಿ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಒಕ್ಕೂಟದಿಂದ ದೊರೆಯುವ ಅನುದಾನವನ್ನು ಪ್ರಾಮಾಣಿಕವಾಗಿ ದೊರಕಿಸಿಕೊಡುವ ಕೆಲಸ ಮಾಡುತ್ತೇನೆ ಎಂದರು.
ಸಂಘದ ಅಧ್ಯಕ್ಷ ಜಿ.ಎಸ್.ಪುರುಷೋತ್ತಮ್ ಮಾತನಾಡಿ, ಮನ್ಮುಲ್ ನಿರ್ದೇಶಕರು, ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕು, ಜೊತೆಗೆ ಸಂಘಕ್ಕೆ ಬಿಎಂಸಿ ಕೇಂದ್ರ ಮಂಜೂರು ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.ಈ ವೇಳೆ ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರ್ಣಾಧಿಕಾರಿ ನಾಗೇಂದ್ರಕುಮಾರ್, ಡೇರಿ ಅಧ್ಯಕ್ಷ ಜಿ.ಎಸ್.ಪುರುಷೋತ್ತಮ್, ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್, ನಿರ್ದೇಶಕರಾದ ಎನ್.ಜಗದೀಶ್, ಶ್ರೀನಿವಾಸೇಗೌಡ, ಮೀನಾಕ್ಷಿ, ಜಯಮ್ಮ, ನಾಗೇಂದ್ರ ಜಿ.ಎಸ್, ಚಂದ್ರ, ಮಧುಸೂದನ್, ಶೀಲಾ, ಅನುಸೂಯ, ಸುವರ್ಣ, ಕಾರ್ಯದರ್ಶಿ ಅಪ್ಪಾಜಿ ಹೆಗ್ಗಡೆ ಜಿ.ಡಿ., ಪರೀಕ್ಷ ರವೀಂದ್ರ, ಸಿಬ್ಬಂದಿ ಕೆಂಡಪ್ಪ, ಚೆನ್ನಮ್ಮ, ಗ್ರಾಪಂ ಸದಸ್ಯ ಶ್ರೀನಿವಾಸ್, ಅಶ್ವಿನಿ ಜಿ., ಎಸ್‌ಡಿಎಂಸಿ ಅಧ್ಯಕ್ಷ ಕುಮಾರ್, ಮುಖಂಡರಾದ ಶ್ಯಾಮ್ ಶೆಟ್ಟಿ, ಶ್ರೀಕಂಠೇಗೌಡ, ನೀಲಕಂಠೇಗೌಡ, ಜಿ.ಕೆ.ಕುಮಾರ್, ರವಿಣ್ಣ, ಮಂಜುನಾಥ್, ಪ್ರಕಾಶ್, ಕುಮಾರ್, ಬಲರಾಮ್, ಎನ್.ಪ್ರಕಾಶ್, ಕಾಯಿಪ್ರಕಾಶ್, ಕಾಂತರಾಜ್, ಎಂ.ಕುಮಾರ್ ಸೇರಿದಂತೆ ಹಲವು ಮುಖಂಡರು, ಗ್ರಾಮಸ್ಥರು ಇದ್ದರು.
ಪರಿಸರಕ್ಕೆ ಜೀವ ನೀಡಿದ ಸಾಲು ಮರದ ತಿಮ್ಮಕ್ಕ: ಜೇನುಗೂಡು ಮಹೇಶ್ಕಿಕ್ಕೇರಿ:
ಅಕ್ಷರ ಜ್ಞಾನವಿಲ್ಲದ ತಿಮ್ಮಕ್ಕ ಸಾಲು ಸಾಲು ಗಿಡ ನೆಟ್ಟು ಮರವಾಗಿಸಿ ಪ್ರಾಣಿ, ಪಕ್ಷಿ, ಪರಿಸರಕ್ಕೆ ಜೀವ ನೀಡಿದ ಮಾಹಾ ಮಾತೆಯಾಗಿದ್ದಾರೆ ಎಂದು ಸಾಹಿತಿ ಜೇನುಗೂಡು ಮಹೇಶ್ ತಿಳಿಸಿದರು.ಊಗಿನಹಳ್ಳಿಯಲ್ಲಿ ಕುರುಹಿನಶೆಟ್ಟಿ ಸಮಾಜದಿಂದ ಹಮ್ಮಿಕೊಂಡಿದ್ದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಸ್ಮರಣೆಯಲ್ಲಿ ಮಾತನಾಡಿ, ಓದು ಬರಹ ಬಾರದ ತಿಮ್ಮಕ್ಕ ನಾಡಿನ ಉಸಿರಾಗಿ ಮರಗಿಡ ಬೆಳೆಸಿ ಸಕಲ ಜೀವಿಗಳಿಗೆ ಶುದ್ಧ ಗಾಳಿ ನೀಡಿದ ಆರೋಗ್ಯ ಮಾತೆಯಾದರು. ಮೂಢತ್ಮೆಯಾದ ತಿಮ್ಮಕ್ಕ ಶತಾಯುಷಿಯಾಗಿ ಬದುಕಿ ಇವರ ಉಸಿರು ಪ್ರಕೃತಿಯಲ್ಲಿ ಶಾಶ್ವತವಾಗಿದೆ ಎಂದು ನೆನೆದರು.
ಬಾಲ್ಯದಲ್ಲಿಯೇ ವಿವಾಹವಾಗಿ ತನ್ನ ಪತಿ ಕಳೆದುಕೊಂಡರೂ ಬದುಕನ್ನು ಧೈರ್ಯದಿಂದ ಎದುರಿಸಿದರು. ಒಂಟಿಜೀವನ ಮರೆತು ಗಟ್ಟಿಯಾಗಿ ನಿಂತರು. ಹೆಣ್ಣು ಅಬಲೆಯಲ್ಲ ಸಬಲೆ ಎಂದು ಗಿಡಮರಗಳನ್ನು ಬೆಳೆಸಿ ಮಕ್ಕಳೆಂದು ತಿಳಿಸಿ ಆನಂದಿಸಿದರು.ಕೆಇಬಿ ತಿಮ್ಮಶೆಟ್ಟಿ ಮಾತನಾಡಿ, ಹಸಿರೇ ಉಸಿರಾಗಬೇಕಿದೆ. ಅಕ್ಷರ ಜ್ಞಾನವಿಲ್ಲದ ತಿಮ್ಮಕ್ಕ ಸಮಾಜಕ್ಕಾಗಿ ಗಿಡ ಮರ ಬಿಟ್ಟು ಹೋಗಿದ್ದಾರೆ. ಇವರಂತೆ ಮುಂದಿನ ಪೀಳಿಗೆ ಮರಗಿಡ ಬೆಳಸಬೇಕಿದೆ. ಒಂದು ಮರ ಕಡಿದರೆ ಹತ್ತು ಮರ ಬೆಳೆಸುವ ಸಂಕಲ್ಪತೊಡಬೇಕು ಎಂದು ನುಡಿದರು.
ಪರಿಸರ ಪ್ರೇಮಿ ವೆಂಕಟೇಶ್ ಮಾತನಾಡಿದರು. ವಿವಿಧ ಗಿಡಗಳನ್ನು ವಿತರಿಸಿ ಮರ ಬೆಳೆಸಲು ಪ್ರತಿಜ್ಞೆ ಮಾಡಲಾಯಿತು.ಮುರುಳಿ, ನ್ಯಾಯಬೆಲೆ ತಿಮ್ಮಶೆಟ್ಟಿ, ಜಯರಾಂ, ಪ್ರೀತಂ, ರವಿ, ಭಾರತಿ, ಕಮಲಮ್ಮ ಮತ್ತಿತರರಿದ್ದರು.