ನಾಪೋಕ್ಲು: ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಹಾಕಿ ಮೈದಾನಕ್ಕೆ ಶಂಕುಸ್ಥಾಪನೆ

| Published : May 19 2025, 12:14 AM IST

ನಾಪೋಕ್ಲು: ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಹಾಕಿ ಮೈದಾನಕ್ಕೆ ಶಂಕುಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಂಡ್ಯೋಳಂಡ ಕುಟುಂಬಸ್ಥರು ಯಶಸ್ವಿಯಾಗಿ 24ನೇ ಕೌಟುಂಬಿಕ ಹಾಕಿ ಉತ್ಸವ ಆಯೋಜಿಸಿದ್ದು ಅದರ ಸವಿನೆನಪಿಗಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೂತನ ಹಾಕಿ ಮೈದಾನ ನಿರ್ಮಿಸಲಾಗುತ್ತದೆ ಎಂದು ಹಾಕಿ ಹಬ್ಬದ ಅಧ್ಯಕ್ಷ ಕುಂಡ್ಯೋಳಂಡ ರಮೇಶ್‌ ಮುದ್ದಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕುಂಡ್ಯೋಳಂಡ ಕುಟುಂಬಸ್ಥರು ಯಶಸ್ವಿಯಾಗಿ 24ನೇ ಕೌಟುಂಬಿಕ ಹಾಕಿ ಉತ್ಸವವನ್ನು 2024 ರಲ್ಲಿ ಆಯೋಜಿಸಿದ್ದು ಅದರ ಸವಿನೆನಪಿಗಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೂತನ ಹಾಕಿ ಮೈದಾನ ಒಂದನ್ನು ನಿರ್ಮಿಸಲಾಗುತ್ತಿದೆ ಎಂದು ಹಾಕಿ ಹಬ್ಬದ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಹೇಳಿದರು.

ನಾಪೋಕ್ಲುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಆಟದ ಮೈದಾನ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯು, ಕಾಲೇಜು ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಕುಂಡ್ಯೋಳಂಡ ಕುಟುಂಬಸ್ಥರು ಈ ಕಾರ್ಯಕ್ಕೆ ಮುಂದಾಗಿದ್ದೇವೆ. 2024ರಲ್ಲಿ ನಾಪೋಕ್ಲುವಿನಲ್ಲಿ ನಡೆಸಲಾದ ಕೊಡವ ಕೌಟುಂಬಿಕ ಹಾಕಿ ಹಬ್ಬದ ಸ್ಮರಣಾರ್ಥವಾಗಿ ಕಾಲೇಜಿನಲ್ಲಿ ಸುಮಾರು 110 ಮೀಟರ್ ಉದ್ದ, 65 ಮೀಟರ್ ಅಗಲದ ನೂತನ ಆಟದ ಮೈದಾನ ನಿರ್ಮಿಸಲು ಶಂಕು ಸ್ಥಾಪನೆಯನ್ನು ನೆರವೇರಿಸಲಾಗಿದೆ ಎಂದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಕುಂಡ್ಯೋಳಂಡ ಕುಟುಂಬದ ಹಾಕಿ ಹಬ್ಬದ ಖಜಾಂಚಿ ವಿಶು ಪೂವಯ್ಯ, ಕಾರ್ಯದರ್ಶಿ ಬಿಪಿನ್ ಬೆಳ್ಳಿಯಪ್ಪ, ಕುಟುಂಬಸ್ಥರಾದ

ಪ್ರಫುಲ್ ಪೊನ್ನಪ್ಪ, ಕವಿತ ಮುತ್ತಣ್ಣ, ಹಾಗೂ ಕಾಲೇಜು ಪ್ರಾಂಶುಪಾಲರಾದ ಮನೋಜ್ ಕುಮಾರ್ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.