ನಿಧಿ ಲ್ಯಾಂಡ್‌ನ ಐಷಾರಾಮಿ ವಸತಿ ಸಮುಚ್ಚಯ ‘ಸ್ಕೈ ಗಾರ್ಡನ್‌’, ‘ಪೂರ್ವಜ್‌’ಗೆ ಶಿಲಾನ್ಯಾಸ

| Published : May 01 2025, 12:51 AM IST

ನಿಧಿ ಲ್ಯಾಂಡ್‌ನ ಐಷಾರಾಮಿ ವಸತಿ ಸಮುಚ್ಚಯ ‘ಸ್ಕೈ ಗಾರ್ಡನ್‌’, ‘ಪೂರ್ವಜ್‌’ಗೆ ಶಿಲಾನ್ಯಾಸ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಪ್ರಖ್ಯಾತ ನಿರ್ಮಾಣ ಸಂಸ್ಥೆ ನಿಧಿ ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್‌ ಇಂಡಿಯಾ ಪ್ರೈ.ಲಿ.ನ ಎರಡು ನೂತನ ಐಶಾರಾಮಿ ವಸತಿ ಸಮುಚ್ಚಯಗಳಾದ ಸ್ಕೈ ಗಾರ್ಡನ್ ಮತ್ತು ಪೂರ್ವಜ್ ಶಿಲಾನ್ಯಾಸ ಸಮಾರಂಭ ಬುಧವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಪ್ರಖ್ಯಾತ ನಿರ್ಮಾಣ ಸಂಸ್ಥೆ ನಿಧಿ ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್‌ ಇಂಡಿಯಾ ಪ್ರೈ.ಲಿ.ನ ಎರಡು ನೂತನ ಐಶಾರಾಮಿ ವಸತಿ ಸಮುಚ್ಚಯಗಳಾದ ಸ್ಕೈ ಗಾರ್ಡನ್ ಮತ್ತು ಪೂರ್ವಜ್ ಶಿಲಾನ್ಯಾಸ ಸಮಾರಂಭ ಬುಧವಾರ ನಡೆಯಿತು.ಸ್ಕೈ ಗಾರ್ಡನ್ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್, ಮಾಜಿ ಕಾರ್ಪೊರೇಟರ್ ಭಾಸ್ಕರ್ ಮೊಯ್ಲಿ, ಮಂಗಳೂರಿನ ಬ್ರಹ್ಮಕುಮಾರಿ ಕೇಂದ್ರದ ಉಸ್ತುವಾರಿ ಬಿ.ಕೆ. ವಿಶ್ವೇಶ್ವರಿ, ಡಿ.ಬಿ. ಮೆಹ್ತಾ, ಧರ್ಮರಾಜ್, ಜಾಗದ ಮಾಲೀಕ ನೋಯೆಲ್ ಎಫ್.ಸಿ. ಪಿಂಟೋ, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೋ ಇದ್ದರು. ಸ್ಕೈ ಗಾರ್ಡನ್ ಸೈಟ್‌ನಲ್ಲಿ ಕೃಷ್ಣ ಭಟ್ ಮತ್ತು ಲೇಡಿಹಿಲ್‌ ಚರ್ಚ್‌ನ ಫಾ. ಲ್ಯಾನ್ಸನ್ ಪಿಂಟೋ ಅವರು ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.ಪೂರ್ವಜ್ ವಸತಿ ಸಮುಚ್ಚಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮುಖಂಡರಾದ ಪ್ರಕಾಶ್ ಸಾಲಿಯಾನ್, ನಿಶಾಂತ್ ಶೇಟ್, ಶಶಿಧರ್ ಹೆಗ್ಡೆ, ಲೋಟಸ್ ಪ್ರಾಪರ್ಟೀಸ್‌ನ ಜಿತೇಂದ್ರ ಕೊಟ್ಟಾರಿ, ಸಿಎ ಶಾಂತಾರಾಮ ಶೆಟ್ಟಿ, ಶಾಸಕ ವೇದವ್ಯಾಸ ಕಾಮತ್, ನಿಧಿ ಲ್ಯಾಂಡ್ ಎಂಡಿ ಪ್ರಶಾಂತ್ ಸನಿಲ್, ನವೀನ್ ಆರ್. ಡಿಸೋಜ, ಮಂಗಳೂರಿನ ಬ್ರಹ್ಮಕುಮಾರಿ ಕೇಂದ್ರದ ಉಸ್ತುವಾರಿ ಬಿ.ಕೆ. ವಿಶ್ವೇಶ್ವರಿ ಇದ್ದರು. ಉಪ್ಪುಂದ ಗಣೇಶ್ ಭಟ್ ಮತ್ತು ಸೇಂಟ್ ಆಗ್ನೆಸ್ ಕಾನ್ವೆಂಟ್‌ನ ಸಿಸ್ಟರ್ ಮರಿಯಾ ರೂಪ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಮಾಜಿ ಸಚಿವ ರಮಾನಾಥ್ ರೈ ಮತ್ತು ಸತೀಶ್ ಕುಂಪಲ ಇದ್ದರು.