ಸಾರಾಂಶ
ಕನ್ನಡಪ್ರಭವಾರ್ತೆ ಮೂಲ್ಕಿ
ಮೂಲ್ಕಿ ಬಂಟರ ಸಂಘದ ನವೀಕರಣಗೊಳ್ಳಲಿರುವ ನೂತನ ಭೋಜನ ಶಾಲೆಯ ಶಿಲಾನ್ಯಾಸವನ್ನು ಮೂಲ್ಕಿಯ ಕಾರ್ನಾಡ್ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಮ್ ಎಚ್ ಅರವಿಂದ ಪೂಂಜಾ ನೆರವೇರಿಸಿದರು.ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು ದೆಪ್ಪುಣಿಗುತ್ತು ಗುತ್ತಿನಾರ್ ಸುಧಾಕರ ಶೆಟ್ಟಿ ಪ್ರಾರ್ಥನೆ ಸಲ್ಲಿಸಿದರು .ಸಂಘದ ಗೌರವಾಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಸಂತೋಷ್ ಕುಮಾರ್ ಹೆಗ್ಡೆ, ಉಪಾಧ್ಯಕ್ಷ ಜೀವನ್ ಶೆಟ್ಟಿ ಕಾರ್ನಾಡ್, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ, ಜೊತೆ ಕೋಶಾಧಿಕಾರಿ ಶರತ್ ಶೆಟ್ಟಿ, ಮಹಿಳಾ ಅಧ್ಯಕ್ಷೆ ರೋಹಿಣಿ ಶೆಟ್ಟಿ, ಮಾಜಿ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ ಹಿರಿಯರಾದ ಮುರಳಿಧರ ಭಂಡಾರಿ, ಸಂಘದ ಪದಾಧಿಕಾರಿಗಳಾದ ಗಂಗಾಧರ ಶೆಟ್ಟಿ ಬರ್ಕೆ ತೋಟ, ಮಹಿಮ್ ಹೆಗ್ಡೆ, ಕಿಶೋರ್ ಶೆಟ್ಟಿ ಬಪ್ಪನಾಡು, ರಾಜೇಶ್ ಶೆಟ್ಟಿ ಮಾನಾಂಪಾಡಿ, ಭಾನುಮತಿ ಶೆಟ್ಟಿ ಕಕ್ವಗುತ್ತು, ರಂಗನಾಥ ಶೆಟ್ಟಿ, ಶ್ರೀಶ ಸರಾಫ್ ಐಕಳ, ದೇವಿಪ್ರಸಾದ್ ಶೆಟ್ಟಿ ಐಕಳ, ಸತೀಶ್ಚಂದ್ರ ಹೆಗ್ಡೆ, ಕೃಷ್ಣ ಶೆಟ್ಟಿ ಕುಬೆವೂರು, ಹರ್ಷರಾಜ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ ಆಧಿಧನ್, ಹರೀಶ್ಚಂದ್ರ ಶೆಟ್ಟಿ ಕರ್ನಿರೆ, ಪುಷ್ಪರಾಜ ಚೌಟ, ಪುರುಷೋತ್ತಮ ಶೆಟ್ಟಿ ಕಿನ್ನಿಗೋಳಿ, ದಾಮೋದರ ಶೆಟ್ಟಿ ಕೊಡೆತ್ತೂರು, ನಿಶಾಂತ್ ಶೆಟ್ಟಿ ಕಿಲೆಂಜೂರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಾಯಿನಾಥ್ ಶೆಟ್ಟಿ, ಸ್ವಾಗತಿಸಿ ನಿರೂಪಿಸಿದರು.