ದಸರಾ ಪುಸ್ತಕ ಮೇಳದಲ್ಲಿ ನಾಲ್ಕು ಪುಸ್ತಕಗಳ ಬಿಡುಗಡೆ

| Published : Sep 29 2025, 01:02 AM IST

ಸಾರಾಂಶ

ಅಶೋಕ ಪಿ. ಮಣಿ ಅವರ ಅಮೃತ ಸಿಂಚನ, ಪ್ರಮೋದ ಕರಣಂ ಅವರ ಹುಟ್ಟು ಸಾವುಗಳ ನಡುವೆ, ಜ್ಯೋತಿ ಬದಾಮಿ ಅವರ ಕುಂಬಳಕಾಯಿ ಕಳ್ಳ ಅಂದ್ರೆ... ಹಾಗೂ ಕೆ.ಎಲ್. ವಿನೋದ್ ಅವರ ತುಪಾಕಿಯ ಪಿಸು ಮಾತುಗಳು ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಫೋಟೋ- 28ಎಂವೈಎಸ್31

----

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿಯು ಆಯೋಜಿಸಿರುವ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳದಲ್ಲಿ ಭಾನುವಾರ 4 ಪುಸ್ತಕಗಳನ್ನು ಎಂ.ಕೆ. ಹರಿಚರಣ ತಿಲಕ್ ಬಿಡುಗಡೆ ಮಾಡಿದರು.

ಅಶೋಕ ಪಿ. ಮಣಿ ಅವರ ಅಮೃತ ಸಿಂಚನ, ಪ್ರಮೋದ ಕರಣಂ ಅವರ ಹುಟ್ಟು ಸಾವುಗಳ ನಡುವೆ, ಜ್ಯೋತಿ ಬದಾಮಿ ಅವರ ಕುಂಬಳಕಾಯಿ ಕಳ್ಳ ಅಂದ್ರೆ... ಹಾಗೂ ಕೆ.ಎಲ್. ವಿನೋದ್ ಅವರ ತುಪಾಕಿಯ ಪಿಸು ಮಾತುಗಳು ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಈ ವೇಳೆ ಕೃತಿಯ ಲೇಖಕರಾದ ಅಶೋಕ ಪಿ. ಮಣಿ, ಜ್ಯೋತಿ ಬದಾಮಿ, ಪ್ರಮೋದ ಕರಣಂ ಹಾಗೂ ಕೆ.ಎಲ್. ವಿನೋದ್ ಅವರು ಪಾಲ್ಗೊಂಡು ಮಾತನಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅಧ್ಯಕ್ಷತೆ ವಹಿಸಿದ್ದರು.

ಉಪಸಮಿತಿ ಸದಸ್ಯರಾದ ರಾಜಶೇಖರ ಕದಂಬ, ಸುಚಿತ್ರಾ ಹೆಗಡೆ, ಡಾ.ಸಿ.ಡಿ. ಪರಶುರಾಮ್, ಎಂ. ಚಂದ್ರಶೇಖರ್, ಡಾ.ಎಂ. ಮಹೇಶ್‌ ಚಿಕ್ಕಲ್ಲೂರು ಮೊದಲಾದವರು ಇದ್ದರು.