ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪತ್ರಿಕಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಜಿಲ್ಲೆಯ ನಾಲ್ವರು ಪತ್ರಕರ್ತರನ್ನು ಹಾಗೂ ಓರ್ವ ಪತ್ರಿಕಾ ವಿತರಿಕರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ 2026ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜುಲೈ 31ರಂದು ನಡೆಯುವ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.ದಿ.ಶ್ರೀಶೈಲ ಅಂಗಡಿ ಇವರ ಸ್ಮರಣಾರ್ಥ ಕೊಡಮಾಡುವ ''''''''ಸಂಜೆದರ್ಶನ'''''''' ಪ್ರಶಸ್ತಿಗೆ ಸಂಯುಕ್ತ ಕರ್ನಾಟಕ ವರದಿಗಾರ ಅಭಯ ಮನಗೂಳಿ(ಬಾಗಲಕೋಟೆ), ದಿ.ಶರಣಬಸವರಾಜ ಎಸ್.ಜಿಗಜಿನ್ನಿ ಇವರ ಸ್ಮರಣಾರ್ಥ ನೀಡುವ ''''''''ಸತ್ಯಾಶ್ರಯ'''''''' ಪ್ರಶಸ್ತಿಗೆ ವಿಜಯ ಕರ್ನಾಟಕ ವರದಿಗಾರ ಲಿಂಗರಾಜ ಚಿನಿವಾಲರ(ಬಾದಾಮಿ) ದಿ.ರಾಮ ಮನಗೂಳಿ ಇವರ ಸ್ಮರಣಾರ್ಥ ಉಮೇಶ ಪೂಜಾರಿಯವರು ಕೊಡಮಾಡಿದ ''''''''ಸವಿನುಡಿ'''''''' ಪ್ರಶಸ್ತಿಗೆ ಉದಯವಾಣಿ ವರದಿಗಾರ ಶ್ರೀಶೈಲ ಬಿರಾದಾರ್, (ಬಾಗಲಕೋಟೆ) ದಿ.ಎನ್.ಎಚ್.ಶಾಲಗಾರ ಇವರ ಸ್ಮರಣಾರ್ಥ ಕೊಡಮಾಡುವ ''''''''ಸಮಾಜವೀರ'''''''' ಪ್ರಶಸ್ತಿಗೆ ಸುದಿನ ಪತ್ರಿಕೆ ಸಂಪಾದಕ ಸುಭಾಸ ಹೊದ್ಲೂರ (ಬಾಗಲಕೋಟೆ) ಅವರನ್ನು ಆಯ್ಕೆ ಮಾಡಲಾಗಿದೆ. ಈ ವರ್ಷದಿಂದ ಪತ್ರಿಕಾ ವಿತರಕರೊಬ್ಬರಿಗೆ ಮಾತೋಶ್ರೀ ದಿ.ತಾಯಮ್ಮ ಕಲ್ಲಪ್ಪಗೌಡ ಬಿರಾದಾರ್ ಇವರ ಸ್ಮರಣಾರ್ಥ ಕೊಡಮಾಡಿದ ''''''''ಕಾಯಕ ಪ್ರಶಸ್ತಿ''''''''ಗೆ ಶಿರೂರಿನ ಸಂಗನಬಸವ್ವ ಬಸಪ್ಪ ಡಾವಣಗೆರೆ ಅವರನ್ನು ಆಯ್ಕೆ ಮಾಡಲಾಗಿದೆ. ಜು31ರಂದು ಪ್ರಶಸ್ತಿ ಪುರಷ್ಕೃತರಿಗೆ ಸನ್ಮಾನ, ಪ್ರಶಸ್ತಿ ಪತ್ರ, ನಗದು ನೀಡಿ ಗೌರವಿಸಲಾಗುವುದು ಎಂದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಜಗದೀಶ ಎಂ.ಗಾಣಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.