ಚನ್ನಪಟ್ಟಣ: ತಾಲೂಕಿನ ನೇರಳೂರು ಗ್ರಾಮದ ಕಬ್ಬಿನಗದ್ದೆಯಲ್ಲಿ ನಾಲ್ಕು ಚಿರತೆ ಮರಿ ಪತ್ತೆಯಾಗಿವೆ. ಗ್ರಾಮದ ರೈತ ನಾಗೇಶ್‌ಗೆ ಸೇರಿದ ಕಬ್ಬಿನಗದ್ದೆಯಲ್ಲಿ ಕಾರ್ಮಿಕರು ಕಬ್ಬು ಕಟಾವು ಮಾಡುವಾಗ ನಾಲ್ಕು ಚಿರತೆ ಮರಿ ಕಂಡುಬಂದಿವೆ
ಚನ್ನಪಟ್ಟಣ: ತಾಲೂಕಿನ ನೇರಳೂರು ಗ್ರಾಮದ ಕಬ್ಬಿನಗದ್ದೆಯಲ್ಲಿ ನಾಲ್ಕು ಚಿರತೆ ಮರಿ ಪತ್ತೆಯಾಗಿವೆ. ಗ್ರಾಮದ ರೈತ ನಾಗೇಶ್‌ಗೆ ಸೇರಿದ ಕಬ್ಬಿನಗದ್ದೆಯಲ್ಲಿ ಕಾರ್ಮಿಕರು ಕಬ್ಬು ಕಟಾವು ಮಾಡುವಾಗ ನಾಲ್ಕು ಚಿರತೆ ಮರಿ ಕಂಡುಬಂದಿವೆ. ತಾಯಿ ಚಿರತೆಯೂ ಹತ್ತಿರದಲ್ಲೇ ಇದ್ದು, ಕಾರ್ಮಿಕರು ತೋಟದ ಮಾಲೀಕರಿಗೆ ವಿಚಾರ ಮುಟ್ಟಿಸಿದ್ದು, ತಕ್ಷಣ ಮಾಲೀಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಮರಿಗಳನ್ನು ರಕ್ಷಿಸಿದ್ದಾರೆ. ತಾಯಿ ಚಿರತೆಗಾಗಿ ಸುತ್ತ ಮುತ್ತ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ನಾಲ್ಕು ಮರಿಗಳು ನಾಲ್ಕೈದು ದಿನಗಳ ಹಿಂದೆ ಜನಿಸಿವೆ. ತಾಯಿ ಚಿರತೆ ಸೆರೆಹಿಡಿಯಲು ಬೋನು ಅಳವಡಿಸಲಾಗಿದೆ.
ಪೊಟೋ೨೭ಸಿಪಿಟಿ೧:ಚನ್ನಪಟ್ಟಣ ತಾಲೂಕಿನ ನೇರಳೂರು ಗ್ರಾಮದ ಕಬ್ಬಿನಗದ್ದೆಯಲ್ಲಿ ಪತ್ತೆಯಾದ ಚಿರತೆ ಮರಿಗಳು.