ತಾಲೂಕಿನ ವಿಠ್ಠಲಾಪುರ ಹಾಗೂ ಶಿರಹಟ್ಟಿ ತಾಲೂಕಿನ ತೊಳಲಿ, ಹೊಳೆ ಇಟಗಿ ಗ್ರಾಮಗಳ ವ್ಯಾಪ್ತಿಯಲ್ಲಿ 11 ರೈತರು ಅಳವಡಿಸಿದ್ದ ನೀರೆತ್ತುವ ಮೋಟರ್ ಪಂಪಸೆಟ್‌ಗಳನ್ನು ಕಳ್ಳತನ ಮಾಡಿದ್ದರು.

ಮುಂಡರಗಿ: ತಾಲೂಕಿನ ವಿವಿಧೆಡೆ ರೈತರ ಜಮೀನುಗಳಲ್ಲಿ ನೀರೆತ್ತುವ ಮೋಟರ್ ಪಂಪ್‌ಸೆಟ್‌ಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ₹9.30 ಲಕ್ಷ ಮೌಲ್ಯದ 11 ಮೋಟರ್ ಪಂಪ್‌ಸೆಟ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.ಮರಿಯಪ್ಪ ಅಲಿಯಾಸ್ ಮುತ್ತು ದುರ್ಗೇಶ ಚವಡಾಳ(22 ), ಮರಿಯಪ್ಪ ಹನುಮಂತಪ್ಪ ಚವಡಾಳ(20), ವಿನಾಯಕ ಹಾಲಪ್ಪ ಮಡಿವಾಳರ(26), ಪ್ರಕಾಶ ಈರಪ್ಪ ಕಾಕಡೆ (36) ಎಂಬವರೇ ಬಂಧಿತ ಆರೋಪಿಗಳು.

ತಾಲೂಕಿನ ವಿಠ್ಠಲಾಪುರ ಹಾಗೂ ಶಿರಹಟ್ಟಿ ತಾಲೂಕಿನ ತೊಳಲಿ, ಹೊಳೆ ಇಟಗಿ ಗ್ರಾಮಗಳ ವ್ಯಾಪ್ತಿಯಲ್ಲಿ 11 ರೈತರು ಅಳವಡಿಸಿದ್ದ ನೀರೆತ್ತುವ ಮೋಟರ್ ಪಂಪಸೆಟ್‌ಗಳನ್ನು ಕಳ್ಳತನ ಮಾಡಿದ್ದರು.

2026ರ ಆ. 13ರಂದು ಮುಂಡರಗಿ ಪೊಲೀಸ್ ಠಾಣೆಯಲ್ಲಿ ನೀರೆತ್ತುವ ಮೋಟ‌ರ್ ಪಂಪ್‌ಸೆಟ್ ಕಳ್ಳತನದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚನೆ ಮಾಡಿದ್ದು, ನರಗುಂದ ಉಪವಿಭಾಗದ ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ, ಮುಂಡರಗಿ ಪೊಲೀಸ್ ಇನ್‌ಸ್ಪೆಕ್ಟರ್ ಅಯ್ಯನಗೌಡ ಪಾಟೀಲ, ಸಬ್ ಇನ್‌ಸ್ಪೆಕ್ಟರ್ ಬಿ.ಎಸ್. ಯಳವತ್ತಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಪತ್ತೆಗೆ ಶ್ರಮಿಸಿದ ಪೊಲೀಸ್ ಇನ್ಸಪೆಕ್ಟರ್ ಅಯ್ಯನಗೌಡ ಪಾಟೀಲ, ಸಬ್ ಇನ್ಸಪೆಕ್ಟರ್ ಬಿ.ಎನ್. ಯಳವತ್ತಿ ಹಾಗೂ ಸಿಬ್ಬಂದಿಗಳಾಗ ಜೆ.ಐ. ಬಚ್ಚೇರಿ, ಅಶೋಕ ಬೂದಿಹಾಳ, ಮಂಜುನಾಥ ಅಗಸಿಮನಿ, ವೀರೇಶ ಮೂರಶಿಳ್ಳಿ, ಎಚ್.ಕೆ. ನದಾಫ್, ಆನಂದ ಲಮಾಣಿ, ಅಣ್ಣಪ್ಪ ಕವಲೂರ ಮತ್ತು ನಾಗರಾಜು ಹರಪನಹಳ್ಳಿ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆ.