ಚಾಮರಾಜನಗರದಲ್ಲಿ 4ನೇ ಬಿರ್ಲಾ ಓಪಸ್ ಬಣ್ಣದ ಕಾರ್ಖಾನೆ ಕಾರ್ಯಾರಂಭ

| Published : Nov 20 2024, 12:31 AM IST

ಸಾರಾಂಶ

ಬಿರ್ಲಾ ಓಪಸ್ ಪೇಂಟ್ಸ್ ಫೆಬ್ರವರಿ ೨೦೨೪ ರಲ್ಲಿ ಭಾರತದ ಅಲಂಕಾರಿಕ ಬಣ್ಣಗಳ ಮಾರುಕಟ್ಟೆಯನ್ನು ಗಣನೀಯ ಹೂಡಿಕೆಯೊಂದಿಗೆ ಪ್ರವೇಶಿಸಿತು ಎಂದು ಪೇಂಟ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಕ್ಷಿತ್ ಹರ್ಗಾವೆ ತಿಳಿಸಿದರು. ಚಾಮರಾಜನಗರದಲ್ಲಿ ಬಿರ್ಲಾ ಓಪಸ್ ಬಣ್ಣದ ಕಾರ್ಖಾನೆ ಮಂಗಳವಾರ ಅಧಿಕೃತವಾಗಿ ಕಾರ್ಯಾರಂಭಗೊಂಡ ನಂತರ ಕಾರ್ಖಾನೆಯ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಿರ್ಲಾ ಓಪಸ್ ಪೇಂಟ್ಸ್ ಫೆಬ್ರವರಿ ೨೦೨೪ ರಲ್ಲಿ ಭಾರತದ ಅಲಂಕಾರಿಕ ಬಣ್ಣಗಳ ಮಾರುಕಟ್ಟೆಯನ್ನು ಗಣನೀಯ ಹೂಡಿಕೆಯೊಂದಿಗೆ ಪ್ರವೇಶಿಸಿತು, ೧೦,೦೦೦ ಕೋಟಿ ರು.ಗಳ ಮುಂಗಡ ಬದ್ಧತೆಯೊಂದಿಗೆ ವಲಯವನ್ನು ಕ್ರಾಂತಿಗೊಳಿಸುವ ಗುರಿಯನ್ನು ಹೊಂದಿದೆ ಎಂದು ಆದಿತ್ಯ ಬಿರ್ಲಾ ಓಪಸ್ ಪೇಂಟ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಕ್ಷಿತ್ ಹರ್ಗಾವೆ ತಿಳಿಸಿದರು.ನಗರದ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ವಲಯದಲ್ಲಿ ಅತ್ಯಾಧುನಿಕ ಬಿರ್ಲಾ ಓಪಸ್ ಬಣ್ಣದ ಕಾರ್ಖಾನೆ ಮಂಗಳವಾರ ಅಧಿಕೃತವಾಗಿ ಕಾರ್ಯಾರಂಭಗೊಂಡ ನಂತರ ಕಾರ್ಖಾನೆಯ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಚಾಮರಾಜನಗರದಲ್ಲಿ ಬಿರ್ಲಾ ಓಪಸ್ ಪೇಂಟ್ಸ್‌ನ ನಾಲ್ಕನೇ ಕಾರ್ಖಾನೆ ಉದ್ಘಾಟನೆಗೊಂಡಿದೆ ಎಂದರು.ಬಿರ್ಲಾ ಓಪಸ್ ಪೇಂಟ್ಸ್ ತನ್ನ ವಿಸ್ತರಣಾ ಯೋಜನೆಯಲ್ಲಿ ವೇಗವಾಗಿ ಮುನ್ನಡೆಯುತ್ತಿದೆ, 6 ಅತ್ಯಾಧುನಿಕ, ಸ್ವಯಂಚಾಲಿತ ಉತ್ಪಾದನಾ ಘಟಕಗಳಲ್ಲಿ 3 ಭಾರತದಾದ್ಯಂತ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ ಈಗ 4ನೇಯದು ಚಾಮರಾಜನಗರದಲ್ಲಿ ಮಂಗಳವಾರ ಕಾರ್ಯಾರಂಭ ಮಾಡಿದೆ ಎಂದರು. ಚಾಮರಾಜನಗರದ ಸಕಲ ಸೌಲಭ್ಯದೊಂದಿಗೆ, ಪ್ರಸಕ್ತ ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ಬಿರ್ಲಾ ಒಪಸ್ ಪೇಂಟ್ಸ್ ತನ್ನ ಉತ್ಪಾದನಾ ಸಾಮರ್ಥ್ಯವನ್ನು ೮೬೦+ ಒಐPಂ ಗೆ ಹೆಚ್ಚಿಸುವ ನಿರೀಕ್ಷೆಯಿದೆ. ಈ ಘಟಕವು ನೀರು ಆಧಾರಿತ ಬಣ್ಣಗಳನ್ನು ಮತ್ತು ಎನಾಮೆಲ್‌ಗಳು, ವುಡ್ ಫಿನಿಶ್‌ನಂತಹ ದ್ರಾವಕ ಆಧಾರಿತ ಬಣ್ಣಗಳನ್ನು ಉತ್ಪಾದಿಸುತ್ತದೆ ಎಂದರು.

ಕಾರ್ಖಾನೆಗಾಗಿ ೧೦೨ ಎಕರೆ. ಸಂಪೂರ್ಣ ಭೂಮಿಯನ್ನು ೨೦೨೧ ರಲ್ಲಿ ಸರ್ಕಾರದ ಮೂಲಕ ಸ್ವಾಧೀನಪಡಿಸಿಕೊಳ್ಳಲಾಯಿತು. ಜುಲೈ ೨೨ರಲ್ಲಿ ಯೋಜನೆ ಪ್ರಾರಂಭವಾಯಿತು ಈಗ ನವೆಂಬರ್ ೨೪ರಿಂದ ಸ್ಥಾವರವನ್ನು ಕಾರ್ಯಾರಂಭ ಮಾಡುತ್ತಿದ್ದೇವೆ ಎಂದರು.ಪ್ರಸ್ತುತ ಉದ್ಯೋಗಿ ಸಾಮರ್ಥ್ಯ:

೨೫೦ ನೋಂದಾಯಿಸಲಾಗಿದೆ ಭವಿಷ್ಯದಲ್ಲಿ ಇದು ೩೦೦ಕ್ಕೆ ಏರುತ್ತದೆ. ೩೦೦ ಗುತ್ತಿಗೆ ನೌಕರರಿದ್ದು ಭವಿಷ್ಯದಲ್ಲಿ ಇದನ್ನು ೫೦೦ಕ್ಕೆ ಹೆಚ್ಚಿಸಲಾಗುತ್ತದೆ ಎಂದರು. ೩೫೦ ಉದ್ಯೋಗಿಗಳಲ್ಲಿ, ೧೫% ಮಹಿಳಾ ಉದ್ಯೋಗಿಗಳು ಶೇ.೭೦ರಷ್ಟು ಕನ್ನಡಿಗರು ನಮ್ಮ ಕಾರ್ಯಪಡೆಯ ಭಾಗವಾಗಿದ್ದಾರೆ. ಸರ್ಕಾರಿ ನೀತಿಗೆ ಅನುಗುಣವಾಗಿ ಮತ್ತು ಸರ್ಕಾರದ ಪ್ರಕಾರ ಭೂಮಿ ಕಳೆದುಕೊಳ್ಳುವವರಿಗೆ ಉದ್ಯೋಗ ನೀಡಲಾಗುತ್ತಿದೆ. ನೀತಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಲಾಗುತ್ತಿದೆ ಎಂದರು.

ಕಬಿನಿ ನದಿಯ ಮೂಲಕ ನೀರನ್ನು ಪಡೆಯಲಾಗುತ್ತದೆ, ಕೆಪಿಟಿಸಿಎಲ್‌ನಿಂದ ವಿದ್ಯುತ್ ಪಡೆಯುತ್ತೇವೆ. ಎಲ್ಲಾ ಚಿಕಿತ್ಸಾ ಸೌಲಭ್ಯಗಳೊಂದಿಗೆ ೧೦೦% ಶೂನ್ಯ ದ್ರವ ವಿಸರ್ಜನೆ ವ್ಯವಸ್ಥೆಯು ಜಾರಿಯಲ್ಲಿದೆ. ಭಾರತೀಯ ಅಲಂಕಾರಿಕ ಬಣ್ಣಗಳ ವಲಯದಲ್ಲಿ 2ನೇ ಬ್ರ್ಯಾಂಡ್ ಆಗುವ ಮಹತ್ವಾಕಾಂಕ್ಷೆ ಹೊಂದಿದ್ದು ಗ್ರೀನ್‌ಫೀಲ್ಡ್ ಸಸ್ಯಗಳು ಶೂನ್ಯ ದ್ರವ ವಿಸರ್ಜನೆ ನೀತಿಯನ್ನು ಅನುಸರಿಸಲಾಗುತ್ತಿದ್ದು, ಪ್ರಸ್ತುತ ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ವಾಣಿಜ್ಯ ಸಾಮರ್ಥ್ಯದ ೧೦೯೬ ಎಂಎಲ್‌ಪಿಎ ಹೆಚ್ಚಿಸುವ ಗುರಿ ಇದೆ ಎಂದರು.

ನಾವು ಸ್ವಾಧೀನಪಡಿಸಿಕೊಂಡ ೧೦೨ ಎಕರೆಗಳಲ್ಲಿ ೩ವರೆ ಎಕರೆಯಲ್ಲಿ ಒಂದು ಕೆರೆ ಇದೆ. ಇದು ಸಾರ್ವಜನಿಕರಿಗೆ ಉಪಯೋಗವಾಗುವುದರಿಂದ ಇದನ್ನು ಸರ್ಕಾರ ಹಾಗೆಯೇ ಉಳಿಸಿಕೊಂಡು ನಮಗೆ ಬೇರೆ ಮೂರುವರೆ ಎಕರೆ ಕೊಟ್ಟಿದೆ, ಆದ್ದರಿಂದ ಯಾವುದೆ ಒತ್ತುವರಿಯಾಗಿಲ್ಲ. ನಾವೇ ೩೧ ಎಕರೆಯನ್ನು ಹಸಿರುವಲಯವನ್ನಾಗಿ ಮಾಡುತ್ತೇವೆ, ಜೊತಗೆ ಉಚಿತ ಅರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಹಲವು ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕ ಹಿಮಾಂಶು ಕಪಾನಿಯಾ ಸ್ಥಳೀಯ ಕಂಪನಿಯ ಮ್ಯಾನೇಜರ್ ಪ್ರೀತ್‌ಕುಮಾರ್ ಇದ್ದರು.

4ನೇ ಫ್ಯಾಕ್ಟರಿ ಕರ್ನಾಟಕದಲ್ಲಿ ಆರಂಭ ಪೇಯಿಂಟ್ ಉದ್ಯಮದಲ್ಲಿ 10 ಸಾವಿರ ಕೋಟಿ ರು. ಹೂಡಿಕೆ ಮಾಡಿರುವ ಆದಿತ್ಯ ಬಿರ್ಲಾ ಗ್ರೂಪ್‌ನ ಓಪಸ್ ಪೇಯಿಂಟ್‌ನ ನಾಲ್ಕನೇ ಕಾರ್ಖಾನೆ ಚಾಮರಾಜನಗರದಲ್ಲಿ ಕಾರ್ಯಾರಂಭ ಮಾಡಿದೆ.

102 ಎಕರೆ ವಿಶಾಲ ಪ್ರದೇಶದಲ್ಲಿ ನೂತನ‌ ತಂತ್ರಜ್ಞಾನದಿಂದ ಸ್ಮಾರ್ಟ್ ಕಾರ್ಖಾನೆ ನಿರ್ಮಾಣ ಮಾಡಿದ್ದು ಮಂಗಳವಾರದಿಂದ ಉತ್ಪಾದನೆ ಆರಂಭಗೊಂಡಿದೆ. ಸಿಮೆಂಟ್, ವೈಟ್ ಸಿಮೆಂಟ್ ಬಳಿಕ ಪೇಯಿಂಟ್‌ ಕ್ಷೇತ್ರಕ್ಕೆ 2021ರಲ್ಲಿ ಕಾಲಿಟ್ಟ ಆದಿತ್ಯ ಬಿರ್ಲಾ ಸಂಸ್ಥೆಯು ದೇಶದ ನಾಲ್ಕು ದಿಕ್ಕುಗಳಲ್ಲೂ ಒಟ್ಟು 6 ಕಾರ್ಖಾನೆ ಆರಂಭಿಸಲಿದೆ. ಇವುಗಳಲ್ಲಿ ದಕ್ಷಿಣ ಭಾರತದಲ್ಲಿ ಚೆನ್ನೈ ಮತ್ತು ಕರ್ನಾಟಕವಿದ್ದು ಚಾಮರಾಜನಗರದಲ್ಲಿ ನಾಲ್ಕನೇ ಕಾರ್ಖಾನೆ ಕಾರ್ಯಾರಂಭ ಮಾಡಿದೆ. ಪಾಣಿಪತ್, ಲೂದಿಯಾನ, ಚೆನ್ನೈ ಬಳಿಕ ಚಾಮರಾಜನಗರದಲ್ಲಿ ಕಾರ್ಖಾನೆ ಆರಂಭಗೊಂಡಿದ್ದು ಪ್ರತ್ಯಕ್ಷವಾಗಿ 500ಕ್ಕೂ ಅಧಿಕ ಮಂದಿಗೆ ಮತ್ತು ಪರೋಕ್ಷವಾಗಿ ಸಾವಿರಾರು ಮಂದಿಗೆ ಉದ್ಯೋಗ ಸಿಗಲಿದೆ.

ಕಾರ್ಖಾನೆ ಕಾರ್ಯಾರಂಭ ಕುರಿತು ಬಿರ್ಲಾ ಓಪಸ್ ಪೇಯಿಂಟ್ಸ್‌ನ ಬಿಸಿನೆಸ್ ಹೆಡ್ ಹಿಮಾಂಶು ಕಪಾನಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಪಸ್ ಪೇಯಿಂಟ್ ಬೃಹತ್ ಕಾರ್ಖಾನೆಯಾಗಿದ್ದು 230 ಮಿಲಿಯನ್ ಲೀ. ಪೇಯಿಂಟ್‌ನ್ನು ದೇಶಾದ್ಯಂತ ಸರಬರಾಜು ಮಾಡಲಿದ್ದು ಎನಾಮೆಲ್ ಸೇರಿದಂತೆ ಎರಡು ವಿಭಿನ್ನ ಪೇಯಿಂಟ್‌ಗಳು ವಿಶೇಷವಾಗಿ ಚಾಮರಾಜನಗರದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಜೀರೋ ಲಿಕ್ವಿಡ್ ಡಿಸ್ಚಾರ್ಚ್ ಇರಲಿದ್ದು ಸುಧಾರಿತ ತಂತ್ರಜ್ಞಾನ ಬಳಸಿದ್ದೇವೆ, ಸ್ಥಳೀಯರಿಗೂ ಉದ್ಯೋಗ ಕೊಟ್ಟಿದ್ದು 70% ಕನ್ನಡಿಗರು ಉದ್ಯೋಗ ಹೊಂದಿದ್ದಾರೆ ಎಂದರು.