ವಂಚನೆ - ಇಬ್ಬರು ಆರೋಪಿಗಳಿಗೆ ದಂಡದ ಜೊತೆ ಶಿಕ್ಷೆ

| Published : Oct 10 2023, 01:00 AM IST

ವಂಚನೆ - ಇಬ್ಬರು ಆರೋಪಿಗಳಿಗೆ ದಂಡದ ಜೊತೆ ಶಿಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ತಾನು ಸೇವೆ ಸಲ್ಲಿಸುತ್ತಿದ್ದ ಬ್ಯಾಂಕ್‌ಗೆ ವಂಚಿಸಿದ ಪ್ರಕರಣವೊಂದರಲ್ಲಿ ಬ್ಯಾಂಕ್‌ ಸಹಾಯಕ ವ್ಯವಸ್ಥಾಪಕ ಹಾಗೂ ಬಟ್ಟೆ ಅಂಗಡಿ ಮಾಲೀಕನಿಗೆ ದಂಡದ ಜತೆಗೆ ಶಿಕ್ಷೆಯನ್ನು ಪ್ರಕಟಿಸಿ ಇಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಮಾಡಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ತಾನು ಸೇವೆ ಸಲ್ಲಿಸುತ್ತಿದ್ದ ಬ್ಯಾಂಕ್‌ಗೆ ವಂಚಿಸಿದ ಪ್ರಕರಣವೊಂದರಲ್ಲಿ ಬ್ಯಾಂಕ್‌ ಸಹಾಯಕ ವ್ಯವಸ್ಥಾಪಕ ಹಾಗೂ ಬಟ್ಟೆ ಅಂಗಡಿ ಮಾಲೀಕನಿಗೆ ದಂಡದ ಜತೆಗೆ ಶಿಕ್ಷೆಯನ್ನು ಪ್ರಕಟಿಸಿ ಇಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಮಾಡಿದೆ.

2007-08ರಲ್ಲಿ ನಡೆದ ವಂಚನೆ ಪ್ರಕರಣ ಇದಾಗಿದ್ದು, ಎಸ್‌ಬಿಎಂ ಇಳಕಲ್‌ ಶಾಖೆಯ ಬ್ಯಾಂಕ್‌ ಸಹಾಯಕ ವ್ಯವಸ್ಥಾಪಕರಾಗಿದ್ದ ಗುರುರಾಜ ರಾವ್‌ ಅವರು ಹೆಸ್ಕಾಂ ಮತ್ತು ಗಣಿ ಇಲಾಖೆಯಿಂದ ಬ್ಯಾಂಕರ್ಸ್‌ ಚೆಕ್‌ ಮೂಲಕ ಬಂದಿದ್ದ ₹2.70 ಕೋಟಿ ಹಣವನ್ನು ಆಯಾ ಇಲಾಖೆ ಖಾತೆಗಳಿಗೆ ವರ್ಗಾಯಿಸದೇ ರಾಮಕೃಷ್ಣ ಎಕ್ಸಪೋರ್ಟ್‌ ಮಾಲೀಕ ಪ್ರವೀಣ ಕಾಟ್ವಾ ಅವರ ಖಾತೆಗೆ ವರ್ಗಾಯಿಸಿ ವಂಚಿಸಿದ್ದರು. ಗಣಿ ಮತ್ತು ಹೆಸ್ಕಾಂ ಖಾತೆಗಳಿಗೆ ಹಣ ಜಮೆಯಾಗದೇ ಇದ್ದಾಗ ಈ ಕುರಿತು ಇಲಾಖೆಗಳು ದೂರು ದಾಖಲಿಸಿದ್ದವು. ಈ ಕುರಿತು ಆಗ ಬ್ಯಾಂಕ್‌ ಆಂತರಿಕ ತನಿಖೆ ನಡೆಸಿದ ವೇಳೆ ಗುರುರಾಜ್‌ ರಾವ್‌ ವಂಚಿಸಿರುವುದು ಬೆಳೆಕಿಗೆ ಬಂದಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ಸಿಬಿಐ ಆರೋಪಿಗಳ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸಿತ್ತು. ಗುರುರಾಜ್‌ ರಾವ್‌ ಹಾಗೂ ಪ್ರವೀಣ ಕಾಟ್ವಾ ಅವರು ವಂಚಿಸಿದ್ದು ಸಾಕ್ಷಿಗಳಿಂದ ಸಾಬೀತಾಗಿದ್ದು, ನ್ಯಾಯಾಧೀಶರಾದ ಎನ್‌. ಸುಬ್ರಹ್ಮಣ್ಯ ಅವರು ಆರೋಪಿಗಳಿಗೆ ವಂಚಿಸಿದ ಹಣದ ಜೊತೆ ₹1.20 ಲಕ್ಷ ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿದ್ದಾರೆ. ಸಿಬಿಐ ಪರವಾಗಿ ವಕೀಲ ಶಿವಾನಂದ ಪೆರ್ಲ ವಾದ ಮಂಡಿಸಿದ್ದರು.