ಗ್ರಾಹಕರಿಗೆ ವಂಚನೆ: ತನಿಖೆಗೆ ತಂಡ ರಚನೆ

| Published : Dec 15 2023, 01:30 AM IST

ಸಾರಾಂಶ

ಗ್ರಾಹಕರಿಗೆ ವಂಚನೆ: ತನಿಖೆಗೆ ತಂಡ ರಚನೆ

ಕನ್ನಡಪ್ರಭವಾರ್ತೆ ಕೆರೂರ

ಫೋರ್ಜರಿ ಪ್ರಕರಣ ತಮ್ಮನ್ನು ಘಾಸಿಗೊಳಿಸಿದೆ. ಹಾಗೆಂದು ತಾಳ್ಮೆ ಕಳೆದುಕೊಳ್ಳಬಾರದು. ಸಹನೆಯಿಂದ ಸಿಬ್ಬಂದಿಯ ಜೊತೆ ಸಹಕರಿಸಿ ತಮ್ಮ ಖಾತೆ ಪರಿಶೀಲಿಸಿಕೊಂಡು ಫೋರ್ಜರಿಯಾಗಿದ್ದರೆ ವ್ಯವಸ್ಥಾಪಕರಿಗೆ ಅರ್ಜಿ ಕೊಡಬೇಕು. ಈ ಪ್ರಕರಣ ವಿಚಾರಣೆಗೆ ಒಂದು ಟೀಮ್‌ ನೇಮಕ ಮಾಡಲಾಗಿದೆ. ತನಿಖೆ ನಡೆಸಲಾಗುವುದು ಎಂದು ಕೆರೂರ ಪಿ.ಎಸ್.ಐ. ಕುಮಾರ ಹಿತ್ತಲಮನಿ ಹೇಳಿದರು.

ಅವರು ಗುರುವಾರ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗೆ ಮುಗಿಬಿದ್ದ ಗ್ರಾಹಕರನ್ನುದ್ದೇಶಿಸಿ ಮಾತನಾಡಿದ ಅವರು, ಇಷ್ಟೆಲ್ಲ ಅವ್ಯವಹಾರ ನಡೆಯುತ್ತಿದ್ದರೂ ತಮ್ಮ ಗಮನಕ್ಕೆ ಬಂದಿಲ್ಲವೆಂದರೆ ಏನರ್ಥ? ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದ ಪಿ.ಎಸ್.ಐ ಅವರು, ಗ್ರಾಹಕರು ಕೇಳುವ ಮಾಹಿತಿಯನ್ನು ಸಹನೆಯಿಂದ ಒದಗಿಸಬೇಕೆಂದು ಸಲಹೆ ನೀಡಿದರು.

ಬ್ಯಾಂಕ್‌ನ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರು ವಿಚಾರಣೆಗೆ ಒಂದು ಟೀಮ್‌ ನೇಮಕ ಮಾಡಿದ್ದಾರೆ. ಅವರು ಫೋರ್ಜರಿ ಅಪಾದನೆ ಹೊತ್ತ ಯಲ್ಲಪ್ಪ ಸುರಪಗ ಸೇರಿದಂತೆ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಅವರು ಕರೆದಾಗ ಗ್ರಾಹಕರು ಸರಿಯಾದ ಮಾಹಿತಿ ಕೊಡಿ ಎಂದರು

ಈಗಿನ ವ್ಯವಸ್ಥಾಪಕ ಶಿವಮಾಧವರಾವ್ ಗ್ರಾಹಕರೊಡನೆ ಸಂಯಮದಿಂದ ವರ್ತಿಸಲು ತಿಳಿಸಿದ್ದೇನೆ. ಅವರೊಡನೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕೆಂದರು. ಸೂಕ್ತ ಪೊಲೀಸ್‌ ಬಂದೋಬಸ್ತ್‌ನಲ್ಲಿ ಗ್ರಾಹಕರು ಸಿಬ್ಬಂದಿಯೊಂದಿಗೆ ತಮ್ಮ ಖಾತೆಗಳ ವಿವರಗಳನ್ನು ಪಡೆಯುತ್ತಿದ್ದರು.

--

ಚಿತ್ರ ಮಾಹಿತಿ : 14 ಕೆರೂರ 1 ಪಿಎಚ್ 1