ಸಾರಾಂಶ
ಮರುಬಳಕೆ ಮಾಡಬಹುದಾದ ಉಪಯುಕ್ತ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿ ಹೊಸ ಉತ್ಪನ್ನಗಳಾಗಿ ತಯಾರಿಸುವ ಕಾರ್ಯಕ್ಕೆ ನಮ್ಮ ಸಂಸ್ಥೆ ಮುಂದಾಗಿದೆ.
ಹರಪನಹಳ್ಳಿ: ತಾಲೂಕಿನ ವ್ಯಾಸನತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬೆಂಗಳೂರಿನ ಯಾನ ಸೇವಾ ಸಂಸ್ಥೆಯಿಂದ ಉಚಿತವಾಗಿ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಕ್ಕಳಿಗೆ ಬ್ಯಾಗ್ ವಿತರಿಸಿ ಮಾತನಾಡಿದ ಯಾನ ಸೇವಾ ಸಂಸ್ಥೆ ಸಂಸ್ಥಾಪಕಿ ಸುರಭಿ ದೇಶಪಾಂಡೆ, ನಮ್ಮ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಒಂದಿಲ್ಲೊಂದು ಇಂತಹ ಸೇವಾಕಾರ್ಯಗಳನ್ನು ಮಾಡುತ್ತಾ ಬಂದಿದೆ. ಜತೆಗೆ ಮರುಬಳಕೆ ಮಾಡಬಹುದಾದ ಉಪಯುಕ್ತ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿ ಹೊಸ ಉತ್ಪನ್ನಗಳಾಗಿ ತಯಾರಿಸುವ ಕಾರ್ಯಕ್ಕೆ ನಮ್ಮ ಸಂಸ್ಥೆ ಮುಂದಾಗಿದೆ ಎಂದು ಹೇಳಿದರು.ಮುಖ್ಯ ಶಿಕ್ಷಕ ಕೆ.ಎಸ್. ಉಸ್ಮಾನ, ಸಮಾಜ ಸೇವಕಿ ನಾಗಮಣಿ, ಸೇವಾ ಸಂಸ್ಥೆಯ ಸ್ವಯಂಸೇವಕ ರಾಘವೇಂದ್ರ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಎಲ್. ಸೋಮಶೇಖರ ನಾಯ್ಕ್, ಗ್ರಾಪಂ ಸದಸ್ಯರಾದ ಹರಪನಹಳ್ಳಿ ಚೌಡಮ್ಮ ನಾಗಪ್ಪ, ಮಾಜಿ ಸದಸ್ಯ ಎಲ್. ಸಂತೋಷಕುಮಾರ, ಮುಖಂಡರಾದ ದೇವೇಂದ್ರ ನಾಯ್ಕ್, ಬಸವರಾಜ ನಾಯ್ಕ್, ಆನಂದ ನಾಯ್ಕ, ಕೊಟ್ರೇಶ ನಾಯ್ಕ್, ಕುಮಾರ ನಾಯ್ಕ್, ಚಂದ್ರ ನಾಯ್ಕ್, ಶಿಕ್ಷಕರಾದ ವೀರಣ್ಣ, ಕೊಟ್ರೇಶ, ವೆಂಕಟೇಶ ನಾಯ್ಕ್ ಇದ್ದರು.
ಹರಪನಹಳ್ಳಿ ತಾಲೂಕಿನ ವ್ಯಾಸನತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಯಾನ ಸೇವಾ ಸಂಸ್ಥೆಯಿಂದ ಉಚಿತವಾಗಿ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಲಾಯಿತು.