ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡರ ಪ್ರಯತ್ನದಿಂದ ಸದ್ಯ ನಿಗಮವು ಪ್ರತಿವರ್ಷ ₹400 ಕೋಟಿಗೂ ಅಧಿಕ ಲಾಭಾಂಶದೊಂದಿಗೆ ಮುನ್ನಡೆದಿದೆ. ಕೆಎಸ್‌ಡಿಎಲ್‌ನ ವಿವಿಧ ಉತ್ಪನ್ನಗಳು ದೇಶದ ಪ್ರತಿ ಮೂಲೆ ಮೂಲೆಯಲ್ಲಿ ಗುರುತಿಸುವುದರೊಂದಿಗೆ ಬಳಕೆಯಲ್ಲಿ ಬರಬೇಕೆಂಬ ಕನಸಿಗೆ ಶಾಸಕರ ಪುತ್ರಿ ಪಲ್ಲವಿ ನಾಡಗೌಡ ಅವರು ತಮ್ಮ ಫೌಂಡೇಶನ್ ಮೂಲಕ ಸೋಪ್ ಅನ್ನು ಖರೀದಿಸಿ ಪ್ರತಿ ಮನೆ ಮನೆಗೆ ಉಚಿತವಾಗಿ ವಿತರಿಸಲು ಮುಂದಾಗಿದ್ದಾರೆ. ಅವರ ಸಮಾಜಮುಖಿ ಕಾರ್ಯ ಮೆಚ್ಚುವಂತಹದ್ದು ಎಂದು ಪುರಸಭಾ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಹೇಳಿದರು.ಪಟ್ಟಣದ ಭೋವಿ ವಡ್ಡರ ಓಣಿಯಲ್ಲಿ ಶನಿವಾರ ದೇವಿಕಾ ಸುಬ್ಬರಾವ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಮೈಸೂರು ಸ್ಯಾಂಡಲ್ ಸೋಪ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಫೌಂಡೇಶನ್ ಮೂಲಕ ಪಲ್ಲವಿ ನಾಡಗೌಡ ಅವರು ಹಲವಾರು ಸಮಾಜಮುಖಿ ಕಾರ್ಯಗಳೊಂದಿಗೆ ಬಡವರಿಗೆ ಅನುಕೂಲ ಕಲ್ಪಿಸುವಂತಹ ಕಾರ್ಯ ಮಾಡುತ್ತಾ ಬಂದಿದ್ದಾರೆ. ಇದೀಗ ಲಕ್ಷಾಂತರ ಮೈಸೂರ್ ಸ್ಯಾಂಡಲ್ ಸೋಪ್‌ಗಳನ್ನು ಖರೀದಿಸಿ ಕ್ಷೇತ್ರದ ಪ್ರತಿ ಮನೆಗೂ ಉಚಿತವಾಗಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ ನಾಡಗೌಡರ ಕುಟುಂಬದ ಕಾರ್ಯ ಮೆಚ್ಚುವಂತಹದ್ದು ಎಂದರು.ಪುರಸಭೆ ಮಾಜಿ ಅಧ್ಯಕ್ಷೆ ನೀಲಮ್ಮ ಪಾಟೀಲ ಮಾತನಾಡಿ, ಅಪ್ಪಾಜಿ ನಾಡಗೌಡರು ಕೆಎಸ್‌ಡಿಎಲ್ ಅಧ್ಯಕ್ಷರಾಗುವ ಮೊದಲು ನಷ್ಟದಲ್ಲಿದ್ದ ಕೆಎಸ್‌ಡಿಎಲ್ ಉದ್ಯಮ ಇಂದು ಅವರ ಅಧ್ಯಕ್ಷತೆಯಲ್ಲಿ ₹450 ಕೋಟಿ ಲಾಭವನ್ನು ಮಾಡಿದೆ. ಇದನ್ನು ಇನ್ನಷ್ಟು ಪ್ರಗತಿಯೆಡೆಗೆ ತೆಗೆದುಕೊಂಡು ಹೋಗಬೇಕೆನ್ನುವ ಉದ್ದೇಶ ದೇವಿಕಾ ಸುಬ್ಬರಾವ್ ಫೌಂಡೇಶನ್‌ದ ಉದ್ದೇಶವಾಗಿದೆ. ಈ ಉದ್ಯಮವು ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಎಂಬ ಉದ್ದೇಶದೊಂದಿಗೆ ಲಕ್ಷಾಂತರ ಮೈಸೂರ್ ಸ್ಯಾಂಡಲ್ ಸಾಬೂನುಗಳನ್ನು ಖರೀದಿಸುವುದರೊಂದಿಗೆ ಉಚಿತವಾಗಿ ವಿತರಿಸುವಂತಹ ಕಾರ್ಯಕ್ರಮ ಉತ್ತಮವಾಗಿದೆ ಎಂದರು.ಈ ಸಮಯದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಸಂಗನಗೌಡ ಅಸ್ಕಿ, ಸಿದ್ದನಗೌಡ ಪಾಟೀಲ (ನಾವದಗಿ), ಜುಬೇದಾಬೇಗಂ ಜಮಾದಾರ, ಗೌರಮ್ಮ ಕುಂಬಾರ, ಅಕ್ಕಮಹಾದೇವಿ ಕಟ್ಟಿಮನಿ, ಬಸವರಾಜ ಕುಂಬಾರ, ಸದಾಶಿವ ರೆಡ್ಡಿ (ಇಬ್ರಾಹಿಂಪುರ), ಅಪ್ಪುಗೌಡ ಮಾಡಗಿ, ಹುಸೇನ್ ಜಮಾದಾರ, ಮಹೆಬೂಬ ಕೆಂಭಾವಿ, ಪರಶುರಾಮ ತಂಗಡಗಿ, ಬಸವರಾಜ ಮಾಲಿಪಾಟೀಲ, ಗೋಪಾಲ ಕಟ್ಟಿಮನಿ, ಮೊದಲಾದವರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))