ಸಾರಾಂಶ
ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಪ್ರಸಾದ್ ನೇತ್ರಾಲಯ ಮಂಗಳೂರು, ಆನ್‌ಸೈಟ್ ಎಸ್ಸಿಲೋರ್ ಲಕ್ಸೋಟಿಕ ಫೌಂಡೇಶನ್ ಬೆಂಗಳೂರು ಮತ್ತು ಸೆಂಚುರಿ ಗ್ರೂಪ್ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಕೊಂಚಾಡಿ ದೇರೆಬೈಲು ಶ್ರೀರಾಮ ಭಜನಾ ಮಂದಿರ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರದಾನ ಸಂಕಲ್ಪ ನೋಂದಣಿ ಕಾರ್ಯಕ್ರಮ ನೆರವೇರಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ವಿಶ್ವ ದೃಷ್ಟಿ ದಿನದ ಅಂಗವಾಗಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಪ್ರಸಾದ್ ನೇತ್ರಾಲಯ ಮಂಗಳೂರು, ಆನ್‌ಸೈಟ್ ಎಸ್ಸಿಲೋರ್ ಲಕ್ಸೋಟಿಕ ಫೌಂಡೇಶನ್ ಬೆಂಗಳೂರು ಮತ್ತು ಸೆಂಚುರಿ ಗ್ರೂಪ್ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಕೊಂಚಾಡಿ ದೇರೆಬೈಲು ಶ್ರೀರಾಮ ಭಜನಾ ಮಂದಿರ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರದಾನ ಸಂಕಲ್ಪ ನೋಂದಣಿ ಕಾರ್ಯಕ್ರಮ ನೆರವೇರಿತು.ಕಾರ್ಯಕ್ರಮವನ್ನು ದ.ಕ. ಜಿಲ್ಲಾ ವಿಶೇಷ ಚೇತನರ ಸಬಲೀಕರಣ ಇಲಾಖೆಯ ಜಯಪ್ರಕಾಶ್ ಉದ್ಘಾಟಿಸಿದರು. ಸಕ್ಷಮ ಜಿಲ್ಲಾ ಘಟಕ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ.ಶೀತಲ್ ನೇತ್ರ ದಾನದ ವಿಧಾನಗಳನ್ನು ವಿವರಿಸಿದರು. ಈ ಸಂದರ್ಭ ಇತ್ತೀಚೆಗೆ ಸಕ್ಷಮ ಪ್ರಭಾವದಿಂದ ಪ್ರೇರಣೆಗೊಂಡು ನೇತ್ರದಾನ ಮಾಡಿದ ಕೃಷ್ಣಮೂರ್ತಿ ಅಡಿಗ ಅವರ ಕುಟುಂಬದವರನ್ನು ದಾನಮಾನ ಪತ್ರ ನೀಡಿ ಗೌರವಿಸಲಾಯಿತು.
ರಾಮ ಭಜನಾ ಮಂದಿರ ಅಧ್ಯಕ್ಷ ವಿಜಯ್ ಕುಮಾರ್, ಕಾರ್ಪೊರೇಟರ್ ರಂಜಿನಿ ಕೋಟ್ಯಾನ್, ಮಾಜಿ ಕಾರ್ಪೊರೇಟರ್ ರಾಜೇಶ್, ವಿಕಾಸಂ ಫೌಂಡೇಶನ್ ಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ, ನಿವೃತ್ತ ಮುಖ್ಯೋಪಾಧ್ಯಾಯ ಭಾಸ್ಕರ್ ಹೊಸಮನೆ, ಸಾಮಾಜಿಕ ಕಾರ್ಯಕರ್ತ ನಾರಾಯಣ ಕಂಜರ್ಪಣೆ, ಸಕ್ಷಮ ದ.ಕ. ಖಜಾಂಚಿ ಸತೀಶ್ ರಾವ್ ಮತ್ತಿತರರು ಇದ್ದರು.150ಕ್ಕೂ ಹೆಚ್ಚು ಜನ ಉಚಿತ ನೇತ್ರ ತಪಾಸಣೆಯ ಸೌಲಭ್ಯ ಪಡಕೊಂಡರು. 24 ಮಂದಿ ನೇತ್ರ ದಾನದ ಸಂಕಲ್ಪ ಕೈಕೊಂಡರು. ಹಿರಿಯ ಸಾಮಾಜಿಕ ಕಾರ್ಯಕರ್ತ ನೀಡುಗಳ ಸುಬ್ರಹ್ಮಣ್ಯ ಭಟ್ ಪ್ರಥಮ ನೇತ್ರದಾನದ ಸಂಕಲ್ಪ ಕೈಗೊಂಡರು. ನೇತ್ರದಾನ ಸಂಕಲ್ಪ ಮಾಡಿದವರಿಗೆ ಸ್ಥಳದಲ್ಲಿಯೇ ಪ್ರಮಾಣ ಪತ್ರವನ್ನು ಪ್ರಸಾದ್ ನೇತ್ರಾಲಯದಿಂದ ವಿತರಿಸಲಾಯಿತು.