ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಮುತ್ತೂಟ್ ಪಿನ್‌ಕಾರ್ಪ್ ಸಂಸ್ಥೆಯು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ, ಸೀಳುತುಟಿ ಶಸ್ತ್ರಚಿಕಿತ್ಸೆ ಹಾಗೂ ಇತರೆ ಹಲವಾರು ಜನಪರ ಕಾರ್ಯಗಳನ್ನು ಮಾಡುವ ಮೂಲಕ ಸಾರ್ವಜನಿಕರ ಮನದಲ್ಲಿ ನೆಲೆಸಿದೆ ಎಂದು ಸಂಸ್ಥೆಯ ವಲಯ ಮುಖ್ಯಸ್ಥ ಪ್ರಸನ್ನ ಸಂತಸದಿಂದ ನುಡಿದರು. ಪಟ್ಟಣದ ಸುಭಾಷ್ ವೃತ್ತದಲ್ಲಿರುವ ಮುತ್ತೂಟ್ ಪಿನ್‌ಕಾರ್ಪ್ ಕಚೇರಿಯಲ್ಲಿ ೧೪ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಆಯೋಜನೆ ಮಾಡಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ೩೭೫೦ ಪಿನ್‌ಕಾರ್ಪ್ ಸಂಸ್ಥೆಯು ಕಚೇರಿಗಳನ್ನು ತೆರೆದು, ಸಾರ್ವಜನಿಕರಿಗೆ ಬ್ಯಾಂಕಿನ ರೀತಿಯಲ್ಲಿ ಸೇವಾ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿ, ಸಂಸ್ಥೆಯ ಸೌಲಭ್ಯಗಳು ಹಾಗೂ ಜನಪರ ಕಾಳಜಿಯ ಕಾರ್ಯಗಳ ಕುರಿತು ವಿವರಿಸಿದರು.ಹಾಸನದ ಐದೃಷ್ಟಿ ಕಣ್ಣಿನ ಆಸ್ಪತ್ರೆಯ ತಾಂತ್ರಿಕ ತಂತ್ರಜ್ಞ ಮಹೇಶ್ ಅವರು ೧೦೦ಕ್ಕೂ ಹೆಚ್ಚು ಜನರ ಕಣ್ಣಿನ ತಪಾಸಣೆ ನಡೆಸಿದರು. ಮುತ್ತೂಟ್ ಪಿನ್‌ಕಾರ್ಪ್ ಸಂಸ್ಥೆಯ ವ್ಯವಸ್ಥಾಪಕ ಚಂದ್ರಶೇಖರ್ ಐ.ಇ, ಪ್ರಾದೇಶಕ ವ್ಯವಸ್ಥಾಪಕ ಜಯಚಂದ್ರ, ಕ್ಲಷ್ಟರ್ ವ್ಯವಸ್ಥಾಪಕ ರವಿಕುಮಾರ್, ಅಧಿಕಾರಿಗಳಾದ ತೇಜ, ತನುಜ, ಹೇಮಾ, ಉಮಾ ಮಹೇಶ್, ಇತರರು ಇದ್ದರು.