ಬೆಂಗಳೂರಿನ ನಾಗರಬಾವಿ ಯೂನಿಟಿ ಲೈಫ್ ಲೈನ್ ಆಸ್ಪತ್ರೆಯ ಹಲವಾರು ವೈದ್ಯರು ಪಾಲ್ಗೊಂಡು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು. ಗ್ರಾಮಸ್ಥರ ಅನಾರೋಗ್ಯದ ಹಿನ್ನೆಲೆಯಲ್ಲಿ ದೇಹದ ವಿವಿಧ ಅಂಗಾಂಗಗಳ ಆರೋಗ್ಯ ತಪಾಸಣೆ ನಡೆಸಿದರು. ಬೆಂಗಳೂರಿನ ಶ್ರೀ ಸಾಯಿ ನೇತ್ರಾಲಯ ಹಾಗೂ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವತಿಯಿಂದ ಗ್ರಾಮದ ಸಾರ್ವಜನಿಕರಿಗೆ ಉಚಿತಕಣ್ಣಿನ ತಪಾಸಣೆಯನ್ನು ಮಾಡಿ ಉಚಿತವಾಗಿ ಕನ್ನಡಕಗಳನ್ನು ವಿತರಣೆ ಮಾಡಲಾಯಿತು. ಬೆಂಗಳೂರಿನ ಜೀವ ಸ್ವಯಂ ರಕ್ತ ನಿಧಿ ಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ರಕ್ತದ ಗುಂಪುಗಳನ್ನು ಪರಿಶೀಲನೆ ಮಾಡಿ ರಕ್ತದ ಗುಂಪುಗಳನ್ನು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಬಿ. ಚೋಳೇನಹಳ್ಳಿ ಗ್ರಾಮದ ಏಕದಂತ ಗೆಳೆಯರ ಬಳಗದ ಎರಡನೇ ವರ್ಷದ ಗಣೇಶ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನ ನಾಗರಬಾವಿ ಯೂನಿಟಿ ಲೈಫ್ ಲೈನ್ ಆಸ್ಪತ್ರೆಯ ಹಲವಾರು ವೈದ್ಯರು ಪಾಲ್ಗೊಂಡು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು. ಗ್ರಾಮಸ್ಥರ ಅನಾರೋಗ್ಯದ ಹಿನ್ನೆಲೆಯಲ್ಲಿ ದೇಹದ ವಿವಿಧ ಅಂಗಾಂಗಗಳ ಆರೋಗ್ಯ ತಪಾಸಣೆ ನಡೆಸಿದರು. ಬೆಂಗಳೂರಿನ ಶ್ರೀ ಸಾಯಿ ನೇತ್ರಾಲಯ ಹಾಗೂ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವತಿಯಿಂದ ಗ್ರಾಮದ ಸಾರ್ವಜನಿಕರಿಗೆ ಉಚಿತಕಣ್ಣಿನ ತಪಾಸಣೆಯನ್ನು ಮಾಡಿ ಉಚಿತವಾಗಿ ಕನ್ನಡಕಗಳನ್ನು ವಿತರಣೆ ಮಾಡಲಾಯಿತು. ಬೆಂಗಳೂರಿನ ಜೀವ ಸ್ವಯಂ ರಕ್ತ ನಿಧಿ ಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ರಕ್ತದ ಗುಂಪುಗಳನ್ನು ಪರಿಶೀಲನೆ ಮಾಡಿ ರಕ್ತದ ಗುಂಪುಗಳನ್ನು ತಿಳಿಸಿದರು.ಗ್ರಾಮದ ಹಲವಾರು ಜನ ಯುವಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ಸಣ್ಣಪುಟ್ಟ ಕಾಯಿಲೆಗಳಿಗೆ ಸ್ಥಳದಲ್ಲಿಯೇ ಚಿಕಿತ್ಸೆಯನ್ನು ನೀಡಿ ಉಚಿತವಾಗಿ ಔಷಧಿಗಳನ್ನು ನೀಡಲಾಯಿತು. ಡಾ. ಮಂಜುನಾಥ್ ಮಾತನಾಡಿ ನಮ್ಮ ಆಸ್ಪತ್ರೆಯ ವತಿಯಿಂದ ಗ್ರಾಮಾಂತರ ಪ್ರದೇಶದ ಬಡ ಜನರಿಗೆ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಮಾಡುವ ಮೂಲಕ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ಹೊಂದುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದರು. ನಮ್ಮ ಆಸ್ಪತ್ರೆಯ ವತಿಯಿಂದ ಅತಿ ಕಡಿಮೆ ದರದಲ್ಲಿ ಆಪರೇಷನ್‌ಗಳನ್ನು ಮಾಡಲಾಗುವುದು. ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳಕ್ಕಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ಮಾಡಲಾಗುವುದು ಎಂದು ತಿಳಿಸಿದರು. ಈ ಗ್ರಾಮದ ವೇಣು ಅವರ ವಿಶೇಷ ಕಾಳಜಿಯಿಂದ ಈ ದಿನ ಗ್ರಾಮಸ್ಥರಿಗೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿಯೂ ಸಹ ಹೆಚ್ಚಿನ ರೀತಿಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು. ಉತ್ತೇನಹಳ್ಳಿ ಸಾಗರ್ ಮಾತನಾಡಿ ಶ್ರವಣಬೆಳಗೊಳ ಹೋಬಳಿಯ ಸುತ್ತಲಿನ ಗ್ರಾಮಗಳ ಜನರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಸಾರ್ವಜನಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿರುವ ಏಕದಂತ ಗೆಳೆಯರ ಬಳಗದ ಪದಾಧಿಕಾರಿಗಳಿಗೆ ಹಾಗೂ ಬೆಂಗಳೂರಿನ ಯೂನಿಟಿ ಲೈಫ್ ಲೈನ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೂ ತುಂಬು ಹೃದಯದ ಅಭಿನಂದನೆಗಳು ತಿಳಿಸಿದರು. ಈ ತರಹದ ಕಾರ್ಯಕ್ರಮಗಳನ್ನು ನಮ್ಮ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಆಯೋಜನೆ ಮಾಡುವಂತೆ ಯುವಕರಿಗೆ ಪ್ರೇರಣೆ ಸಿಗಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಡಾ. ಸಂಜಯ್, ಡಾ. ಶಶಿಕಾಂತ್, ಡಾ. ಮೇಘ, ಡಾ.ಡಿ ಸಿ ಚುಕ್ಕಿ, ಡಾ. ವಿಭಾಶ್ರೀ ಗೌಡ, ಆಸ್ಪತ್ರೆಯ ಸಿಬ್ಬಂದಿಯಾದ ಅಭಿಷೇಕ್, ಗೌತಮಿ, ನಂದಿನಿ, ದೀಪಿಕಾ, ಶಾಂತಮ್ಮ, ರಘು, ರಕ್ಷಿತಾ, ಹರ್ಷಿತ, ವಸಂತ, ಅರುಣ್, ಜವರೇಗೌಡ, ಬಿ ಚೋಳೇನಹಳ್ಳಿ ಏಕದಂತ ಗೆಳೆಯರ ಬಳಗದ ಪದಾಧಿಕಾರಿಗಳಾದ ಜಯರಾಮ ,ತಮ್ಮಯಣ್ಣ, ದಿನೇಶ್, ವೇಣುಗೋಪಾಲ್, ಬಂಡೆ ಶ್ರೀಧರ, ಜಗದೀಶ್ ಮಧು, ಶ್ರೀಧರ, ರವಿ, ಬಾಬು, ಮಧು , ಸುಧಾಕರ್ ಪ್ರದೀಪ್ ಸೇರಿದಂತೆ ಇತರರು ಹಾಜರಿದ್ದರು.
