ಇಂದು ಉಚಿತ ಆರೋಗ್ಯ ತಪಾಸಣೆ ಶಿಬಿರ

| Published : Jan 28 2024, 01:15 AM IST

ಸಾರಾಂಶ

ಹುನಗುಂದ: ಲಿಂ.ಶ್ರೀ ಗುರುಬಸವಾರ್ಯ ಮಠ ಗುರುಗಳ 45ನೇ ಪುಣ್ಯಸ್ಮರಣೆ ಸಮಾವೇಶ ಪ್ರಯುಕ್ತ ಹುನಗುಂದದ ವಿಜಯ ಮಹಾಂತೇಶ ಪ್ರೌಢಶಾಲೆ ಸಭಾಭವನದಲ್ಲಿ ಜ.28ದಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ತಜ್ಞವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಔಷಧ ವಿತರಣೆ ನಡೆಯಲಿದ್ದು, ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ವಿ.ಮ. ಸಂಘದ ಗೌರವ ಕಾರ್ಯದರ್ಶಿ ಡಾ, ಮಹಾಂತೇಶ ಕಡಪಟ್ಟಿ ಮನವಿ ಮಾಡಿದರು.

ಹುನಗುಂದ: ಪ್ರತಿ ವರ್ಷದಂತ್ತೆ ಲಿಂಗೈಕ್ಯ ಶ್ರೀ ಗುರುಬಸವಾರ್ಯ ಮಠ ಗುರುಗಳ 45ನೇ ಪುಣ್ಯಸ್ಮರಣೆ ಸಮಾವೇಶ ಪ್ರಯುಕ್ತ ಹುನಗುಂದದ ವಿಜಯ ಮಹಾಂತೇಶ ಪ್ರೌಢಶಾಲೆ ಸಭಾಭವನದಲ್ಲಿ ಜ.28ದಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ತಜ್ಞವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಔಷಧ ವಿತರಣೆ ನಡೆಯಲಿದ್ದು, ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ವಿ.ಮ. ಸಂಘದ ಗೌರವ ಕಾರ್ಯದರ್ಶಿ ಡಾ, ಮಹಾಂತೇಶ ಕಡಪಟ್ಟಿ ಮನವಿ ಮಾಡಿದರು.

ನಗರದ ವಿ.ಮ. ಸಂಘದ ಆಡಳಿತ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುರುಮಹಾಂತ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಡಾ.ಬಸವಲಿಂಗ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು, ದಾವಣಗೆರೆ ವಿವಿ ಉಪಕುಲಪತಿ ಡಾ.ಬಿ.ಡಿ. ಕುಂಬಾರ, ಹುನಗುಂದ ಮೆಮೋರಿಯಲ್ ‌ಟ್ರಸ್ಟ್ ಸದಸ್ಯರಾದ ‌ ಎಸ್.ಎಸ್. ಬೆಳ್ಳಿಹಾಳ ಅತಿಥಿಗಳಾಗಿ ಆಗಮಿಸುವರು. ವಿವಿಧ ಗಣ್ಯರಿಗೆ ಗೌರವ ಸನ್ಮಾನ ನಡೆಯಲಿದೆ ಎಂದು ಹೇಳಿದರು. ಪ್ರಸಾದ ನಿಲಯದ ಕಾರ್ಯಧ್ಯಕ್ಷ ಸಂಗನ್ನ ಚಿನಿವಾಲರ, ವಿ.ಮ. ಸಂಘದ ನಿರ್ದೇಶಕರಾದ ಅರುಣ ದುದ್ಗಿ, ಡಾ.ಎಸ್.ಎಚ್.ಮುದಗಲ್, ಎಂ.ಎಸ್.ಮಠ, ರವಿ ಹೂಚನೂರ, ಡಾ. ಡಿ.ಎಸ್.ಹೂಲಗೇರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.