ಉಚಿತ ಮಂಡಿನೋವಿನ ಚಿಕಿತ್ಸಾ ಶಿಬಿರ

| Published : Sep 26 2025, 01:00 AM IST

ಸಾರಾಂಶ

ಬೆಂಗಳೂರಿನ ಕಾವೇರಿ ಆಸ್ಪತ್ರೆಯ ವೈದ್ಯ ಜಗದೀಶ್ ಮಾತನಾಡಿ, ಇಂದು ಬದಲಾದ ಜೀವನ ವಿಧಾನ ಹಾಗೂ ಕ್ಯಾಲ್ಸಿಯಂ ಕೊರತೆಯಿಂದ ಬಾಲಕರಿಂದ ಹಿಡಿದು ವೃದ್ದರವರಗೆ ಕೀಲ ಸಮಸ್ಯೆಗಳು ಭಯಾನಕವಾಗಿ ಕಾಡುತ್ತಿದೆ. ಆರಂಭದಲ್ಲೆ ಇವುಗಳಿಗೆ ಚಿಕಿತ್ಸೆ ಪಡೆದರೆ ಶಸ್ತ್ರಚಿಕಿತ್ಸೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ಇಂದು ವೈದ್ಯಕೀಯ ರಂಗ ಸಾಕಷ್ಟು ಆಧುನೀಕತೆಗೆ ತೆರೆದುಕೊಂಡಿದ್ದು ರೋಬೋಟ್ ಮೂಲಕ ಕೀಲು ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಆದ್ದರಿಂದ ಸಮಸ್ಯೆಯಿಂದ ಬಳಲುತ್ತಿರುವ ಸಾರ್ವಜನಿಕರು ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಕಲೇಶಪುರ: ಸಮಾಜಕ್ಕೆ ಸೇವಾ ಸಂಸ್ಥೆಗಳ ಅಗತ್ಯ ಹೆಚ್ಚಿದೆ ಎಂದು ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು. ಗುರುವಾರ ಪಟ್ಟಣದ ಪುರಭವನದಲ್ಲಿ ಸನಾತನ ಸೇವಾ ಟ್ರಸ್ಟ್ ಹಾಗೂ ಬೆಂಗಳೂರಿನ ಕಾವೇರಿ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಮಂಡಿನೋವಿನ ಚಿಕಿತ್ಸಾ ಶಿಭಿರ ಉದ್ಘಾಟಿಸಿ ಮಾತನಾಡಿ, ಇಂದು ಸಮಾಜ ಹಲವು ರಂಗಗಳಲ್ಲಿ ಸಮಸ್ಯೆಗಳು ಸಾಕಷ್ಟಿದ್ದು ಸರ್ಕಾರ ಎಲ್ಲ ಕಾರ್ಯಗಳನ್ನು ನಡೆಸುವುದು ಅಸಾಧ್ಯ. ಆದ್ದರಿಂದ ಇಂತಹ ಸೇವಾ ಸಂಸ್ಥೆಗಳ ಅಗತ್ಯ ಸಮಾಜಕ್ಕೆ ಅಗತ್ಯವಿದೆ ಎಂದರು.

ಬೆಂಗಳೂರಿನ ಕಾವೇರಿ ಆಸ್ಪತ್ರೆಯ ವೈದ್ಯ ಜಗದೀಶ್ ಮಾತನಾಡಿ, ಇಂದು ಬದಲಾದ ಜೀವನ ವಿಧಾನ ಹಾಗೂ ಕ್ಯಾಲ್ಸಿಯಂ ಕೊರತೆಯಿಂದ ಬಾಲಕರಿಂದ ಹಿಡಿದು ವೃದ್ದರವರಗೆ ಕೀಲ ಸಮಸ್ಯೆಗಳು ಭಯಾನಕವಾಗಿ ಕಾಡುತ್ತಿದೆ. ಆರಂಭದಲ್ಲೆ ಇವುಗಳಿಗೆ ಚಿಕಿತ್ಸೆ ಪಡೆದರೆ ಶಸ್ತ್ರಚಿಕಿತ್ಸೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ಇಂದು ವೈದ್ಯಕೀಯ ರಂಗ ಸಾಕಷ್ಟು ಆಧುನೀಕತೆಗೆ ತೆರೆದುಕೊಂಡಿದ್ದು ರೋಬೋಟ್ ಮೂಲಕ ಕೀಲು ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಆದ್ದರಿಂದ ಸಮಸ್ಯೆಯಿಂದ ಬಳಲುತ್ತಿರುವ ಸಾರ್ವಜನಿಕರು ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಈ ವೇಳೆ ನೂರಾರು ಜನರು ಶಿಭಿರದಲ್ಲಿ ಚಿಕಿತ್ಸೆಪಡೆದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್,ಬಿಜೆಪಿ ಮುಖಂಡ ಜೈಮಾರುತಿ ದೇವರಾಜ್, ಸನಾತನ ಸೇವಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಸಂಘಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.