ಸಾರಾಂಶ
ಸಮೀಪದ ಕುರಡಗಿ ಗ್ರಾಮದಲ್ಲಿ ಶನಿವಾರ ಸ್ಥಳೀಯ ಗ್ರಾಮ ಪಂಚಾಯಿತಿ, ರೋಣ ವೆಡ್ಸ್ ಸಂಸ್ಥೆ, ಪಶು ಇಲಾಖೆಯ ಸಹಯೋಗದೊಂದಿಗೆ ಗದಗ ರಿಲಯನ್ಸ್ ಫೌಂಡೇಶನ್ ವತಿಯಿಂದ ಜಾನುವಾರುಗಳ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ನರೇಗಲ್ಲ: ಸಮೀಪದ ಕುರಡಗಿ ಗ್ರಾಮದಲ್ಲಿ ಶನಿವಾರ ಸ್ಥಳೀಯ ಗ್ರಾಮ ಪಂಚಾಯಿತಿ, ರೋಣ ವೆಡ್ಸ್ ಸಂಸ್ಥೆ, ಪಶು ಇಲಾಖೆಯ ಸಹಯೋಗದೊಂದಿಗೆ ಗದಗ ರಿಲಯನ್ಸ್ ಫೌಂಡೇಶನ್ ವತಿಯಿಂದ ಜಾನುವಾರುಗಳ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಈ ವೇಳೆ ಡ.ಸ. ಹಡಗಲಿಯ ಪಶು ವೈದ್ಯಾಧಿಕಾರಿ ಸಂತೋಷ ಕುಂದರಗಿ ಮಾತನಾಡಿ, ಗ್ರಾಮೀಣ ರೈತರ ಜೀವನಾಡಿಯಾಗಿರುವ ಜಾನುವಾರುಗಳಿಗಾಗಿ ಏರ್ಪಡಿಸುವ ಉಚಿತ ಪಶು ಆರೋಗ್ಯ ತಪಾಸಣಾ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು. ಜಾನುವಾರುಗಳ ಆರೈಕೆ ಬಗ್ಗೆ ರೈತರು ನಿರ್ಲಕ್ಷ್ಯ ತೋರಬಾರದು, ಹತ್ತಿರದ ಆಸ್ಪತ್ರೆಯಲ್ಲಿ ಕಾಲ ಕಾಲಕ್ಕೆ ಚಿಕಿತ್ಸೆ ಕೊಡಿಸಬೇಕು ಎಂದರು.ಶಿಬಿರದಲ್ಲಿ ಎತ್ತು, ಎಮ್ಮೆ, ಕುರಿ, ಕೋಳಿ, ಶ್ವಾನ ಸೇರಿದಂತೆ ನೂರಾರು ಜಾನುವಾರುಗಳಿಗೆ ಲಸಿಕೆ ಕೂಡ ಹಾಕಲಾಯಿತು. ಬಳಿಕ ಔಷಧ ಮೇವು ತಿನ್ನುವ ಔಷಧ ಮತ್ತು ನಾನಾ ಖನಿಜಾಂಶ ಲವಣಾಂಶವುಳ್ಳ ಔಷಧಿಗಳನ್ನು ರೈತರಿಗೆ ವಿತರಿಸಲಾಯಿತು. ರೈತರು ಮತ್ತು ಜಾನುವಾರುಗಳ ಮಾಲೀಕರು ಪಶು ವೈದ್ಯರಿಂದ ಸೂಕ್ತವಾದ ಸಲಹೆ ಸೂಚನೆಯನ್ನು ಪಡೆದುಕೊಂಡರು.
ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ವೀರಪ್ಪ ರಾಮಣ್ಣವರು ವಹಿಸಿದ್ದರು. ಗ್ರಾಪಂ ಸದಸ್ಯ ಶೌಕತಅಲಿ ನದಾಫ್, ರಿಲಾಯನ್ಸ್ ಫೌಂಡೇಶನ್ ಮುಖ್ಯಸ್ಥ ಶಹಾಬುದ್ದೀನ್ ನರೇಗಲ್ಲ, ಗ್ರಾಮ ಪಂಚಾಯ್ತಿ ಮಟ್ಟದ ಪಶು ಸಖಿ ಬಸಮ್ಮ ಅಯ್ಯನಗೌಡ್ರ, ಕೃಷಿ ಸಖಿ ಚೈತ್ರ ಅಯ್ಯನಗೌಡ್ರ, ಯಲ್ಲಪ್ಪ ರಿತ್ತಿ, ಸಿದ್ದು ಹಿರೇಗೌಡ್ರು, ರಘುನಾಥ್ ಜಾಧವ್, ಸಂಗಪ್ಪ ರಾಮಣ್ಣವರ, ನೇತಾಜಿ ಜಾಧವ್, ಸಂಗನಗೌಡ ದೊಡ್ಡ ರುದ್ರಗೌಡ, ಯಲ್ಲಪ್ಪ ಕುರಿಯವರ್, ವೀರೇಶ್ ಕಲಹಾಳ್, ಗುರುಪಾದಪ್ಪ ಕುಂದಗೋಳ, ರಮ್ಜಾನ್ ಚೋಪಾದರ್, ಪ್ರಶಾಂತಕುಮಾರ್ ಕಾಡರ್, ಹನಮಪ್ಪ ಬೇವಿನಮರದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.