ಕಾಟೇರಮ್ಮ ಕ್ಷೇತ್ರದಲ್ಲಿ ಉಚಿತ ಸಾಮೂಹಿಕ ವಿವಾಹ

| Published : Aug 12 2024, 01:03 AM IST

ಕಾಟೇರಮ್ಮ ಕ್ಷೇತ್ರದಲ್ಲಿ ಉಚಿತ ಸಾಮೂಹಿಕ ವಿವಾಹ
Share this Article
  • FB
  • TW
  • Linkdin
  • Email

ಸಾರಾಂಶ

ಸೂಲಿಬೆಲೆ: ದೈವೇಚ್ಚೆಯಂತೆ ಮಾನವ ನಡೆದುಕೊಳ್ಳಬೇಕು, ನಮ್ಮ ನಿವೇದನೆಗಳನ್ನು ದೇವರಲ್ಲಿ ಅರ್ಪಣೆ ಮಾಡಿಕೊಳ್ಳಬೇಕು ಎಂದು ಕಂಬಳೀಪುರ ಅಮ್ಮ ಶಕ್ತಿ ಪೀಠದ ಧರ್ಮಾಧಿಕಾರಿ ಕೆ.ರಾಮಯ್ಯ ಸ್ವಾಮೀಜಿ ಹೇಳಿದರು.

ಸೂಲಿಬೆಲೆ: ದೈವೇಚ್ಚೆಯಂತೆ ಮಾನವ ನಡೆದುಕೊಳ್ಳಬೇಕು, ನಮ್ಮ ನಿವೇದನೆಗಳನ್ನು ದೇವರಲ್ಲಿ ಅರ್ಪಣೆ ಮಾಡಿಕೊಳ್ಳಬೇಕು ಎಂದು ಕಂಬಳೀಪುರ ಅಮ್ಮ ಶಕ್ತಿ ಪೀಠದ ಧರ್ಮಾಧಿಕಾರಿ ಕೆ.ರಾಮಯ್ಯ ಸ್ವಾಮೀಜಿ ಹೇಳಿದರು.

ಹೋಬಳಿಯ ಕಂಬಳೀಪುರ-ಕೆಂಪಾಪುರ ಗ್ರಾಮದ ಕಾಟೇರಮ್ಮ ದೇವಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ೯ ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿಸಲಾಗಿದ್ದು ಮುಂದಿನ ಶ್ರಾವಣ ಮಾಸದಲ್ಲಿ ೧೦೦೮ ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳುವುದು ದೈವ ಸಂಕಲ್ಪ ಎಂದರು.

ಅಮ್ಮನ ಶಕ್ತಿ ಪೀಠದಿಂದ ೯ ಜೋಡಿಗಳಿಗೆ ಉಚಿತ ವಸ್ತ್ರ, ಕಾಲುಂಗುರ, ಮಾಂಗಲ್ಯ ಹಾಗೂ ವಧುವಿಗೆ ಚಿನ್ನದ ಉಂಗುರ ಉಡುಗೊರೆಯಾಗಿ ನೀಡಲಾಗಿದೆ. ಭಕ್ತಾದಿಗಳ ಸಹಕಾರ ಹಾಗೂ ಅಮ್ಮನ ಶಕ್ತಿಪೀಠದಿಂದ ಮತ್ತಷ್ಟು ಕಾರ್ಯಕ್ರಮಗಳನ್ನು ನಡೆಸಲು ತಾಯಿ ನಮಗೆ ಶಕ್ತಿ ನೀಡಬೇಕು ಎಂದರು.

ಕಾಟೇರಮ್ಮ ದೇವಿಗೆ ಪೂಜೆ ಹಾಗೂ ಅಲದ ಮರಕ್ಕೆ ಪೂಜೆ ಕಾರ್ಯಕ್ರಮಗಳು ನಡೆಯಿತು. ಅಮ್ಮ ಶಕ್ತಿ ಪೀಠದ ಅರ್ಜುನ್‌ ಯಾದವ್ ಹಾಗೂ ಪದಾಧಿಕಾರಿಗಳು, ಭಕ್ತಾದಿಗಳು ಹಾಜರಿದ್ದರು.