ಕನ್ನಡಪ್ರಭ ವಾರ್ತೆ ಕೊರಟಗೆರೆ
ಸಿದ್ದರಬೆಟ್ಟದ ಮಠದಲ್ಲಿ ಪ್ರತಿವರ್ಷ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ತಾಲೂಕು ಸೇರಿದಂತೆ ಜಿಲ್ಲೆಯ ಬಡ ಕುಟುಂಬದ ಸದಸ್ಯರು ವಧುವರರು ಅಗತ್ಯ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಿ ಎಂದು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ಸಿದ್ದರಬೆಟ್ಟದ ಶ್ರೀಮಠದಲ್ಲಿ ೨೦ ನೇ ವಾರ್ಷಿಕೋತ್ಸವ, ನಡೆಸುವ ಸಲುವಾಗಿ ಭಾನುವಾರ ನಡೆದ ಪೂರ್ವಭಾವಿಯಲ್ಲಿ ಮಾತನಾಡಿದರು.ಜೂ. ೨೧ರ ಭಾನುವಾರ ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖಾ ಮಠದಲ್ಲಿ ಮಠದಲ್ಲಿ ೨೦ನೇ ವಾರ್ಷಿಕೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ಮತ್ತು ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಆಚರಿಸಲಾಗುವುದು. ಉಚಿತ ದೀಕ್ಷಾ ಸಂಸ್ಕಾರ ನೀಡವುದರೊಂದಿಗೆ ಉಚಿತ ಸಾಮೂಹಿಕ ವಿವಾಹವನ್ನು ನಡೆಸಲಾಗುವುದು. ವಧು ವರರಿಗೆ ಮಾಂಗಲ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ನೀಡಿದ್ದು, ವಧುವರರ ತಂದೆತಾಯಿಗಳು ಅಥವಾ ಸಂಬಂಧಿಕರು ಅಗತ್ಯ ದಾಖಲಾತಿಗಳನ್ನು ಶ್ರೀ ಮಠಕ್ಕೆ ಮೇ ೩೧ ರ ಒಳಗೆ ಶ್ರೀ ಮಠಕ್ಕೆ ಸಲ್ಲಿಸಬೇಕು ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಈ ಬಾರಿ ಸಿದ್ದಶ್ರೀ ಪ್ರಶಸ್ತಿಯನ್ನು ಧರ್ಮಸ್ಥಳದ ಶ್ರೀ ವೀರೇಂದ್ರ ಹಗ್ಗಡೆಯವರಿಗೆ ಪ್ರಧಾನ ಮಾಡಲಾಗುವುದು, ಈ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ರವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮಗಳು ನಡೆಯಲ್ಲಿದ್ದು, ಅಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಸೇರಿದಂತೆ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು. ಸಭೆಯಲ್ಲಿ ಪರ್ವ ಗ್ರೂಪ್ ಸಂಸ್ಥಾಪಕ ನೀಲೇಶ್, ಜೆಡಿಎಸ್ ಅಧ್ಯಕ್ಷ ಕಾಮರಾಜು, ಗೋಂದಿಹಳ್ಳಿ ರಂಗರಾಜು, ಬಿಜೆಪಿ ಅಧ್ಯಕ್ಷ ರುದ್ರೇಶ್, ನಿಕಟ ಪೂರ್ವ ಅಧ್ಯಕ್ಷ ದರ್ಶನ್, ಮುಖಂಡರುಗಳಾದ ಸೋಮಣ್ಣ, ಆರ್,ಎಸ್,ರಾಜಣ್ಣ, ಬಿಪಿಎಸ್ ಕುಮಾರ್, ಶಿವಕುಮಾರ್, ಪಂಚಾಕ್ಷರಯ್ಯ, ಅಖಂಡರಾದ್ಯ, ಹನುಮಂತರಾಯಪ್ಪ, ಸಿದ್ದಮಲ್ಲಯ್ಯ, ವೀರಭದ್ರಯ್ಯ ಮಂಜುಳಾಆರಾದ್ಯ, ಮಮತಾದಿವಾಕರ್, ಜಿಎಸ್‌ಎಮ್ ರಘು ಸೇರಿದಂತೆ ಹಲವರು ಹಾಜರಿದ್ದರು.