ಸುತ್ತೂರು ಉಚಿತ ಶಾಲೆಯ ಮಕ್ಕಳಿಗಾಗಿ ತಾರಾಲಯ ಪ್ರದರ್ಶನ ಇಂದು

| Published : Feb 26 2025, 01:06 AM IST

ಸುತ್ತೂರು ಉಚಿತ ಶಾಲೆಯ ಮಕ್ಕಳಿಗಾಗಿ ತಾರಾಲಯ ಪ್ರದರ್ಶನ ಇಂದು
Share this Article
  • FB
  • TW
  • Linkdin
  • Email

ಸಾರಾಂಶ

ಈ ಪ್ರದರ್ಶನದಲ್ಲಿ ಸೌರಮಂಡಲ ಹಾಗೂ ತಾರಾಮಂಡಲ ವೀಕ್ಷಣೆ, ಗ್ರಹಣದ ಪರಿಕಲ್ಪನೆ ಉಪಗ್ರಹ ಉಡಾವಣೆ,

ಕನ್ನಡಪ್ರಭ ವಾರ್ತೆ ಸುತ್ತೂರು

ಶ್ರೀ ಸುತ್ತೂರು ಕ್ಷೇತ್ರದಲ್ಲಿರುವ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ಜ್ಞಾನ ಸಂಪನ್ಮೂಲ ಕೇಂದ್ರದಿಂದ ಬೆಂಗಳೂರಿನ ತಾರೆ ಜಮೀನ್ ಫರ್, ವರ್ನಾಜ್ ಟೆಕ್ನಾಲಜಿ ಸಂಸ್ಥೆಯ ಸಹಯೋಗದೊಡನೆ ಉಚಿತ ತಾರಾಲಯ ಪ್ರದರ್ಶನವನ್ನು ಫೆ. 26 ರಂದು ಸುತ್ತೂರಿನಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಉಚಿತ ಶಾಲೆಯ ಮಕ್ಕಳಿಗಾಗಿ ಏರ್ಪಡಿಸಿದೆ.

ಒಂದು ಪ್ರದರ್ಶನದಲ್ಲಿ 30 ರಿಂದ 40 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿರುತ್ತದೆ.

ಈ ಪ್ರದರ್ಶನದಲ್ಲಿ ಸೌರಮಂಡಲ ಹಾಗೂ ತಾರಾಮಂಡಲ ವೀಕ್ಷಣೆ, ಗ್ರಹಣದ ಪರಿಕಲ್ಪನೆ ಉಪಗ್ರಹ ಉಡಾವಣೆ, ಭೂಮಿ ಹಾಗೂ ನಕ್ಷತ್ರಗಳ ಜೀವನಚಕ್ರ, ಹವಾಮಾನ ಬದಲಾವಣೆ, ಬ್ಯ್ಲಾಕ್ ಹೋಲ್ಸ್ ಹಾಗೂ ಭೂಮಿಯ ಚಲನೆ ಮುಂತಾದವುಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿ ಬಾಹ್ಯಾಕಾಶದ ಬಗ್ಗೆ ಸಮಗ್ರ ಮಾಹಿತಿ ಪಡೆಯಬಹುದಾಗಿದೆ.

ಮುಂದಿನ ದಿನಗಳಲ್ಲಿ ಎರಡೂ ಸಂಸ್ಥೆಗಳ ವತಿಯಿಂದ ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳಲ್ಲಿ ತಾರಾಲಯ ಪ್ರದರ್ಶನಗಳನ್ನು ಮಕ್ಕಳ ಅನುಕೂಲಕ್ಕಾಗಿ ಉಚಿತವಾಗಿ ಏರ್ಪಡಿಸಲು ಉದ್ದೇಶಿಸಿದೆ.

ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗೆಗೆ ಅರಿವು, ಆಸಕ್ತಿ, ಸೃಜನಾತ್ಮಕತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೆರವಿನೊಂದಿಗೆ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ಜ್ಞಾನ ಸಂಪನ್ಮೂಲ ಕೇಂದ್ರ ಸ್ಥಾಪಿಸಿದೆ.

ಈ ಕೇಂದ್ರದ ಒಳಾಂಗಣದಲ್ಲಿ 44 ವಿಜ್ಞಾನ ಮಾದರಿಗಳು ಹಾಗೂ ಹೊರಾಂಗಣದಲ್ಲಿ 16 ವಿಜ್ಞಾನ ಮಾದರಿಗಳನ್ನು ವೈಜ್ಞಾನಿಕ ಪರಿಕಲ್ಪನೆಯಡಿ ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಹ್ಯಾಂಡ್ಸ್‌ ಆನ್‌ ಟ್ರೈನಿಂಗ್‌ ಮೂಲಕ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕದಿಂದ ತರಗತಿಗಳಲ್ಲಿ ಕಲಿಯುವ ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಯುವ ಅವಕಾಶವನ್ನು ಈ ಕೇಂದ್ರದಲ್ಲಿ ಕಲ್ಪಿಸಿದೆ. ಇದುವರೆವಿಗೆ ವಿವಿಧ ಫ್ರೌಢಶಾಲೆಗಳ ಎರಡು ಸಾವಿರಕ್ಕೂ ಮೀರಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಯೋಜಕ ವೈ.ಎಂ. ಸಾಸಲಾರಾಧ್ಯ ಅವರನ್ನು ಮೊ. 9686677234 ಸಂಪರ್ಕಿಸುವುದು.