ಸಾರಾಂಶ
ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಶಾಲೆಗಳ ಸ್ತಬ್ಧಚಿತ್ರ ಅಳವಡಿಕೆಗೆ ೧೪ ಟ್ರ್ಯಾಕ್ಟರ್ ಅನ್ನು ಟ್ರ್ಯಾಕ್ಟರ್ ಮಾಲೀಕರ ಸಂಘದವರು ಉಚಿತವಾಗಿ ನೀಡಿದರು.ಹಿಂದೆ ರೈತರು ನೀಡುವ ಟ್ರ್ಯಾಕ್ಟರ್ ಒಂದಕ್ಕೆ ೩೦೦ ರು.ನಿಂದ ೫೦೦ ರು.ಗಳವರಗೆ ಡೀಸೆಲ್ ವೆಚ್ಚ ಎಂದು ನೀಡಲಾಗುತ್ತಿತ್ತು. ಚಾಲಕರಿಗೆ ಉಪಹಾರದ ವ್ಯವಸ್ಥೆಯೂ ಇತ್ತು. ಈ ವರ್ಷ ತಹಸೀಲ್ದಾರ್ ಹಾಗೂ ಆರ್‌ಟಿಒ ಅಧಿಕಾರಿಗಳ ಮನವಿಯಂತೆ ಮಾಲೀಕರು ಉಚಿತವಾಗಿ ಟ್ರ್ಯಾಕ್ಟರ್ ನೀಡಿ ಕನ್ನಡ ಪ್ರೇಮ ಮೆರೆದಿದ್ದಾರೆ.
ಬೇಲೂರು: ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಶಾಲೆಗಳ ಸ್ತಬ್ಧಚಿತ್ರ ಅಳವಡಿಕೆಗೆ ೧೪ ಟ್ರ್ಯಾಕ್ಟರ್ ಅನ್ನು ಟ್ರ್ಯಾಕ್ಟರ್ ಮಾಲೀಕರ ಸಂಘದವರು ಉಚಿತವಾಗಿ ನೀಡಿದರು. ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಟ್ರ್ಯಾಕ್ಟರ್ ಮಾಲೀಕರ ಸಂಘಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ರಾಜ್ಯೋತ್ಸವಕ್ಕಾಗಿ ಉಚಿತವಾಗಿ ನೀಡಲಾಗಿದೆ ಎಂದು ಟ್ರ್ಯಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಮಹೇಶಗೌಡ ತಿಳಿಸಿದರು.
ಹಿಂದೆ ರೈತರು ನೀಡುವ ಟ್ರ್ಯಾಕ್ಟರ್ ಒಂದಕ್ಕೆ ೩೦೦ ರು.ನಿಂದ ೫೦೦ ರು.ಗಳವರಗೆ ಡೀಸೆಲ್ ವೆಚ್ಚ ಎಂದು ನೀಡಲಾಗುತ್ತಿತ್ತು. ಚಾಲಕರಿಗೆ ಉಪಹಾರದ ವ್ಯವಸ್ಥೆಯೂ ಇತ್ತು. ಈ ವರ್ಷ ತಹಸೀಲ್ದಾರ್ ಹಾಗೂ ಆರ್‌ಟಿಒ ಅಧಿಕಾರಿಗಳ ಮನವಿಯಂತೆ ಮಾಲೀಕರು ಉಚಿತವಾಗಿ ಟ್ರ್ಯಾಕ್ಟರ್ ನೀಡಿ ಕನ್ನಡ ಪ್ರೇಮ ಮೆರೆದಿದ್ದಾರೆ.