ಸಾರಾಂಶ
ಬೆಂಗಳೂರಿನ ಕರ್ನಾಟಕ ದ್ವಿಚಕ್ರ ವಾಹನಗಳ ಮಾಲೀಕರು ಮತ್ತು ತಂತ್ರಜ್ಞರ ಸಂಘ, ದಾವಣಗೆರೆ ಜಿಲ್ಲಾ ದ್ವಿಚಕ್ರ ವಾಹನಗಳ ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ನಗರದ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲೆಯ ಎಲ್ಲ ಗ್ಯಾರೇಜ್ ಮೆಕ್ಯಾನಿಕ್‌ಗಳಿಗೆ ಜುಲೈ 20ರಂದು ಉಚಿತ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಿ.ಮೇಲುಗಿರೀಶ್ ಹೇಳಿದ್ದಾರೆ.
ದಾವಣಗೆರೆ: ಬೆಂಗಳೂರಿನ ಕರ್ನಾಟಕ ದ್ವಿಚಕ್ರ ವಾಹನಗಳ ಮಾಲೀಕರು ಮತ್ತು ತಂತ್ರಜ್ಞರ ಸಂಘ, ದಾವಣಗೆರೆ ಜಿಲ್ಲಾ ದ್ವಿಚಕ್ರ ವಾಹನಗಳ ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ನಗರದ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲೆಯ ಎಲ್ಲ ಗ್ಯಾರೇಜ್ ಮೆಕ್ಯಾನಿಕ್‌ಗಳಿಗೆ ಜುಲೈ 20ರಂದು ಉಚಿತ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಿ.ಮೇಲುಗಿರೀಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಜಿಲ್ಲೆಯ ಎಲ್ಲ ಗ್ಯಾರೇಜ್ ಮೆಕ್ಯಾನಿಕ್‌ಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಗೌರವಾಧ್ಯಕ್ಷ ಸಿ.ದಾವಲ್ (98445- 77000), ಅಧ್ಯಕ್ಷ ಬಿ.ಮೇಲುಗಿರೀಶ್ (96863- 36044), ಉಪಾಧ್ಯಕ್ಷ ಸಿದ್ದಲಿಂಗಪ್ಪ (98443- 63475), ಕಾರ್ಯದರ್ಶಿ ಎನ್.ವಿಶ್ವನಾಥ (96633- 44832), ಖಜಾಂಚಿ ಕೆ.ರಾಜು ಜಾಧವ್ (98440- 56960), ಸಂಚಾಲಕ ಗಜೇಂದ್ರ ಚೌಧರಿ (97415- 95820), ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಮುಸ್ತಾಫ (99803- 90303), ನಿರ್ದೇಶಕರಾದ ಎಸ್. ರೇವಣಸಿದ್ದಯ್ಯ (99862- 34752), ಕೆ.ನಾಗರಾಜ (99019- 33835), ಎಸ್.ಕುಮಾರ್ (94811- 81809), ಎಂ.ಆರ್. ಮರುಳಸಿದ್ದಪ್ಪ (99454- 37113) ಅವರನ್ನು ಸಂಪರ್ಕಿಸಬಹುದು ಎಂದರು.ಸುದ್ದಿಗೋಷ್ಠಿಯಲ್ಲಿ ಸಿ.ದಾವಲ್, ಸಿದ್ದಲಿಂಗಪ್ಪ, ಎನ್.ವಿಶ್ವನಾಥ, ಕೆ.ರಾಜು ಜಾಧವ್, ಮಹಮ್ಮದ್ ಮುಸ್ತಾಫ, ಗಜೇಂದ್ರ ಚೌಧರಿ, ಎಸ್.ರೇವಣಸಿದ್ದಯ್ಯ, ಎಂ.ಆರ್.ಮರುಳಸಿದ್ದಪ್ಪ ಇತರರು ಇದ್ದರು.
- - --16ಕೆಡಿವಿಜಿ33.ಜೆಪಿಜಿ:
ದಾವಣಗೆರೆಯಲ್ಲಿ ಗ್ಯಾರೇಜ್ ಮೆಕ್ಯಾನಿಕ್‌ಗಳಿಗೆ ಉಚಿತ ತರಬೇತಿ ಶಿಬಿರ ಕುರಿತು ಬಿ.ಮೇಲುಗಿರೀಶ್ ಮಾಹಿತಿ ನೀಡಿದರು.