ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ಕ್ಲಾಸ್‌ಗೆ ಚಾಲನೆ

| Published : Nov 12 2025, 01:45 AM IST

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ಕ್ಲಾಸ್‌ಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲಿಕೆ ಹಂತದಲ್ಲಿರುವ ಮಕ್ಕಳ ಮೇಲೆ ಪೋಷಕರ ಕನಸುಗಳು ಚಿಗುರುತ್ತವೆ. ಮಕ್ಕಳು ಉತ್ತಮ ಪಲಿತಾಂಶ ಪಡೆಯುವ ಮೂಲಕ ತಂದೆ ತಾಯಿಗಳ ಆಶಯವನ್ನು ಈಡೇರಿಸಬೇಕು. ಶಾಲೆ ಎನ್ನುವುದು ಕೇವಲ ಒಂದು ಕಟ್ಟಡವಲ್ಲ. ಅದು ಜ್ಞಾನ ದೇಗುಲ. ಪರಿಸರದಲ್ಲಿ ಮಕ್ಕಳು ದೇವಾಲಯದ ಪರಿಕಲ್ಪನೆಯನ್ನು ಬೆಳೆಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ತಾಲೂಕಿನ ಆಲಂಬಾಡಿ ವಲಯದ ಕಾರ್ಯಕ್ಷೇತ್ರದ ತುಂಗಾ ಜ್ಞಾನ ವಿಕಾಸ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಉಚಿತ ಟ್ಯೂಷನ್ ಕ್ಲಾಸ್‌ಗೆ ಸಂಸ್ಥೆ ತಾಲೂಕು ಯೋಜನಾಧಿಕಾರಿ ತಿಲಕ್ ರಾಜ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಗ್ರಾಮೀಣ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು ಎನ್ನುವ ಸದಾಶಯದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮತ್ತು ಅವರ ಪತ್ನಿ ಹೇಮಾವತಿ ಹೆಗ್ಗಡೆಯವರ ಆಶಯದ ಮೇರೆಗೆ ನಮ್ಮ ಸಂಸ್ಥೆ ಗ್ರಾಮೀಣ ಮಕ್ಕಳಿಗೆ ಉಚಿತ ಟ್ಯೂಷನ್ ಕ್ಲಾಸ್ ಆರಂಭಿಸಿದೆ ಎಂದರು.

ಶಿಕ್ಷಣದ ಮೂಲಕ ಮಾತ್ರ ರೈತರು ಮತ್ತು ಬಡವರ ಮಕ್ಕಳ ಅಭಿವೃದ್ಧಿ ಸಾಧ್ಯ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಲಿಕಾ ಆಸಕ್ತಿಯಿದ್ದರೂ ಶೈಕ್ಷಣಿಕ ಸೌಲಭ್ಯಗಳ ಕೊರತೆಯಿದೆ. ಗ್ರಾಮೀಣ ಮಕ್ಕಳಿಗೆ ಉಚಿತ ಟ್ಯೂಷನ್ ಕ್ಲಾಸ್ ನಡೆಸುವ ಮೂಲಕ ಅವರ ನೆರವಿಗೆ ನಮ್ಮ ಸಂಸ್ಥೆ ನಿಂತಿದೆ ಎಂದರು.

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಐಚಿಕ ವಿಷಯದ ಬಗ್ಗೆ ಮೂರು ತಿಂಗಳುಗಳ ಕಾಲ ಉಚಿತವಾಗಿ ಟ್ಯೂಷನ್ ಕ್ಲಾಸ್ ಸೌಲಭ್ಯಗಳನ್ನು ನೀಡುತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂದರ್ಭ ಉಪಯುಕ್ತ ವಾಗಲಿದೆ ಎಂದರು.

ಕಲಿಕೆ ಹಂತದಲ್ಲಿರುವ ಮಕ್ಕಳ ಮೇಲೆ ಪೋಷಕರ ಕನಸುಗಳು ಚಿಗುರುತ್ತವೆ. ಮಕ್ಕಳು ಉತ್ತಮ ಪಲಿತಾಂಶ ಪಡೆಯುವ ಮೂಲಕ ತಂದೆ ತಾಯಿಗಳ ಆಶಯವನ್ನು ಈಡೇರಿಸಬೇಕು. ಶಾಲೆ ಎನ್ನುವುದು ಕೇವಲ ಒಂದು ಕಟ್ಟಡವಲ್ಲ. ಅದು ಜ್ಞಾನ ದೇಗುಲ. ಪರಿಸರದಲ್ಲಿ ಮಕ್ಕಳು ದೇವಾಲಯದ ಪರಿಕಲ್ಪನೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಶಾಲೆ ಪರಿಸರ ಸ್ವಚ್ಚವಾಗಿಟ್ಟುಕೊಳ್ಳಬೇಕು. ಶಿಕ್ಷಕರಲ್ಲಿ ಮಕ್ಕಳು ದೇವರನ್ನು ಕಾಣಬೇಕು. ಶಿಕ್ಷಕರಿಗೆ ವಿಧೇಯರಾಗುವ ವಿದ್ಯಾರ್ಥಿಗೆ ಯಶಸ್ಸು ಖಚಿತ ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಲೆ ಮುಖ್ಯಶಿಕ್ಷಕಿ ಪುಷ್ಪಲತಾ ಮಾತನಾಡಿದರು.

ಶಾಲೆ ಸಹಶಿಕ್ಷಕರಾದ ಸಮತ, ಲಾವಣ್ಯ, ಅನುಷ, ಅರುಣಕುಮಾರಿ, ಕಿರಣ್, ಗುರುಪ್ರಸಾದ್, ಜ್ಞಾನವಿಕಾಸ ಸಮನ್ವಯಾಧಿಕಾರಿಯಾದ ಅನಿತ, ವಲಯದ ಮೇಲ್ವಚಾರಕರಾದ ಶ್ರೀ ಗಣಪತಿ, ಸೇವಾಪ್ರತಿನಿದಿ ಸಬೀಹ, ಹೀನಾ ಪರ್ವಿನ್, ಕವಿತ, ಮಮತ , ಚನ್ನಕೇಶವ ಮತ್ತು ಶಾಲೆಯ ಎಲ್ಲಾ ಮಕ್ಕಳು ಹಾಜರಿದ್ದರು.