ವಿಶ್ವ ರೇಬಿಸ್ ರೋಗ ದಿನಾಚರಣೆಯಲ್ಲಿ ಉಚಿತ ಲಸಿಕೆ

| Published : Oct 03 2025, 01:07 AM IST

ವಿಶ್ವ ರೇಬಿಸ್ ರೋಗ ದಿನಾಚರಣೆಯಲ್ಲಿ ಉಚಿತ ಲಸಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ರೇಬಿಸ್ ರೋಗದ ನಿರ್ಮೂಲನೆಗಾಗಿ ಸರ್ಕಾರವು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಉಚಿತ ಲಸಿಕೆ ಕಾರ್ಯಕ್ರಮ ಮಾಡುತ್ತ ಬಂದಿದೆ. ಅದರ ಜೊತೆಗೆ ಶಾಲಾ ಮಕ್ಕಳಿಗೆ ಈ ರೇಬಿಸ್ (ಹುಚ್ಚು ನಾಯಿ ರೋಗ)ದ ಮಾಹಿತಿ ನೀಡಿ ಇದು ಅತೀ ಮುಖ್ಯವಾದ ಮಾರಣಾಂತಿಕ ರೋಗವಾಗಿದ್ದು ಸೂಕ್ತ ಮುಂಜಾಗ್ರತೆ ವಹಿಸಿ ಲಸಿಕೆ ಹಾಕಿಸುವುದರಿಂದ ಈ ರೋಗವನ್ನು ತಡೆಗಟ್ಟಬಹುದು. ರಾಜ್ಯದ ಎಲ್ಲಾ ಪಶು ಆಸ್ಪತ್ರೆಗಳಲ್ಲಿ ಈ ಲಸಿಕೆ ಲಭ್ಯವಿದೆ. ಹಳೇಬೀಡು ಹೋಬಳಿಯಲ್ಲಿ ಸುಮಾರು ೩೫೦ ನಾಯಿಗಳ ಗಣತಿ ದೊರತಿದೆ. ಅದರಲ್ಲಿ ಹಳೇಬೀಡಿನ ವ್ಯಾಪ್ತಿಯಲ್ಲಿ ೧೬೦ ನಾಯಿಗಳು ಸಂಖ್ಯೆ ಹೊಂದಿದೆ. ಇವುಗಳ ಪೈಕಿ ಶೇ. ೯೯ಕ್ಕೆ ಇಂದು ಲಸಿಕೆಯಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ರಾಜ್ಯ ಸರ್ಕಾರದ ಆದೇಶದ ಮೇರೆಗೆ ಸೆಪ್ಟೆಂಬರ್ ೨೮ರಿಂದ ಅಕ್ಟೋಬರ್ ೨೮ರವರೆಗೆ ನೆಡೆಯುವ ರೇಬಿಸ್‌ ಲಸಿಕಾ ಕಾರ್ಯಕ್ರಮದಲ್ಲಿ ಇದೀಗ ೧೪೭ ನಾಯಿಗಳು, ೨ ಬೆಕ್ಕುಗಳಿಗೆ ಉಚಿತ ಲಸಿಕೆ ಹಾಕಲಾಯಿತು ಎಂದು ಹಳೇಬೀಡಿನ ಪಶು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ ಎಂ. ವಿನಯ್ ತಿಳಿಸಿದರು.

ಇಲ್ಲಿನ ಪಶು ಆಸ್ಪತ್ರೆಯ ಆವರಣದಲ್ಲಿ ಉಚಿತ ರೇಬಿಸ್ ಲಸಿಕೆ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ರೇಬಿಸ್ ರೋಗದ ನಿರ್ಮೂಲನೆಗಾಗಿ ಸರ್ಕಾರವು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಉಚಿತ ಲಸಿಕೆ ಕಾರ್ಯಕ್ರಮ ಮಾಡುತ್ತ ಬಂದಿದೆ. ಅದರ ಜೊತೆಗೆ ಶಾಲಾ ಮಕ್ಕಳಿಗೆ ಈ ರೇಬಿಸ್ (ಹುಚ್ಚು ನಾಯಿ ರೋಗ)ದ ಮಾಹಿತಿ ನೀಡಿ ಇದು ಅತೀ ಮುಖ್ಯವಾದ ಮಾರಣಾಂತಿಕ ರೋಗವಾಗಿದ್ದು ಸೂಕ್ತ ಮುಂಜಾಗ್ರತೆ ವಹಿಸಿ ಲಸಿಕೆ ಹಾಕಿಸುವುದರಿಂದ ಈ ರೋಗವನ್ನು ತಡೆಗಟ್ಟಬಹುದು. ರಾಜ್ಯದ ಎಲ್ಲಾ ಪಶು ಆಸ್ಪತ್ರೆಗಳಲ್ಲಿ ಈ ಲಸಿಕೆ ಲಭ್ಯವಿದೆ. ಹಳೇಬೀಡು ಹೋಬಳಿಯಲ್ಲಿ ಸುಮಾರು ೩೫೦ ನಾಯಿಗಳ ಗಣತಿ ದೊರತಿದೆ. ಅದರಲ್ಲಿ ಹಳೇಬೀಡಿನ ವ್ಯಾಪ್ತಿಯಲ್ಲಿ ೧೬೦ ನಾಯಿಗಳು ಸಂಖ್ಯೆ ಹೊಂದಿದೆ. ಇವುಗಳ ಪೈಕಿ ಶೇ. ೯೯ಕ್ಕೆ ಇಂದು ಲಸಿಕೆಯಾಗಿದೆ. ಅವುಗಳಲ್ಲಿ ಮುಧೋಳ್ ನಾಯಿ-೧೯, ನಾಟಿ-೧೫, ಡ್ಯಾಶ್ ಹಂಡ್-೩೧, ಲ್ಯಾಬ್ರಡೂರ್-೧೩, ಜರ್ಮನ್ ಶೆಪರ್ಡ-೧೫, ರಾಟ್ ವೀಲರ್-೮, ಸಿಟ್ಜ್-೧೧, ಗೋಲ್ಡನ್ ರಿಟ್ರವೈರ್, ಪೊಮೇರಿಯನ್-೯, ಪಿಟ್‌ಬುಲ್-೪, ಪಗ್-೪, ದಾಲ್ ಮೇಷಿಯನ್-೨, ಮಿಶ್ರತಳಿ-೧೨ ಇದು ಹೋಬಳಿ ಮಟ್ಟದಲ್ಲಿ ಹೆಚ್ಚು ನಾಯಿಗಳ ಸಂಖೆ ಕಂಡು ಬಂದಿದೆ ತಿಳಿಸಿದ್ದಾರೆ. ನಮ್ಮ ಹೋಬಳಿಯ ಯಾವುದೇ ಗ್ರಾಮಗಳಲ್ಲಿ ನಾಯಿಗಳಿಗೆ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು. ಬೀದಿ ನಾಯಿಗಳ ಬಗ್ಗೆ ಯಾವ ರೀತಿ ಲಸಿಕೆಯನ್ನು ಹಾಕುತ್ತಿರ ಎಂಬ ಪ್ರಶ್ನೆ ಕೇಳಿದಾಗ ಗ್ರಾಮ ಪಂಚಾಯಿತಿಯವರು ಅದರ ಜವಾಬ್ದಾರಿಯನ್ನು ತೆಗೆದುಕೊಂಡು ನಮ್ಮ ಆಸ್ಪತ್ರಗೆ ಕರೆ ತಂದರೆ ನಾವುಗಳು ಮುಂದಿನ ದಿನಗಳಲ್ಲಿ ಉಚಿತ ಲಸಿಕೆಯನ್ನು ಹಾಕಲಾಗುವುದು ಎಂದು ತಿಳಿಸಿದರು. ಈಸಂದರ್ಭದಲ್ಲಿ ಜಾನುವಾರ ಅಧಿಕಾರಿ, ಪಶು ವೈಧ್ಯಾಧಿಕಾರಿ, ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.