ಸ್ವಾತಂತ್ರ‍್ಯ ಹೋರಾಟಗಾರರಿಗೆ ಸಮನಾದ ನಾಯಕನಿಲ್ಲ: ಸಿಪಿಐ ಮಹಾಂತೇಶ ಲಂಬಿ

| Published : Apr 04 2024, 01:03 AM IST

ಸ್ವಾತಂತ್ರ‍್ಯ ಹೋರಾಟಗಾರರಿಗೆ ಸಮನಾದ ನಾಯಕನಿಲ್ಲ: ಸಿಪಿಐ ಮಹಾಂತೇಶ ಲಂಬಿ
Share this Article
  • FB
  • TW
  • Linkdin
  • Email

ಸಾರಾಂಶ

ಹೋರಾಟಗಾರರ ನೇತೃತ್ವದಲ್ಲಿ ನಡೆದ ಭೀಕರ ದಂಗೆ, ಯುದ್ಧ ಮತ್ತು ಚಳವಳಿಗಳಲ್ಲಿ ಪಾಲ್ಗೊಂಡು ಕೊನೆಗೆ ಬ್ರಿಟೀಷರ ಗುಂಡಿಗೆ ಎದೆಗೊಟ್ಟು ಹುತಾತ್ಮರಾದವರು ಮಹದೇವ ಮೈಲಾರ. ಬ್ರಿಟಿಷ್ ಆಳ್ವಿಕೆಯಿಂದ ಭಾರತವನ್ನು ಮುಕ್ತಗೊಳಿಸಲು ಹೋರಾಡಿದ ಕೆಚ್ಚೆದೆಯ ಹೋರಾಟ ನಡೆಸಿದ ದೇಶ ಭಕ್ತರಲ್ಲಿ ಒಬ್ಬರಾಗಿದ್ದಾರೆ ಎಂದು ಸಿಪಿಐ ಮಹಾಂತೇಶ ಲಂಬಿ ಹೇಳಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ದೇಶದ ಸ್ವಾತಂತ್ರ‍್ಯಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಡುವ ಮೂಲಕ ಮತ್ತು ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿದ ಸ್ವಾತಂತ್ರ‍್ಯ ಹೋರಾಟಗಾರರಿಗೆ ಸಮನಾದ ಬೇರೊಬ್ಬ ನಾಯಕನಿಲ್ಲ ಎಂದು ಸಿಪಿಐ ಮಹಾಂತೇಶ ಲಂಬಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮೋಟೆಬೆನ್ನೂರಿನ ಮಹದೇವ ಮೈಲಾರ ಪ್ರೌಢಶಾಲೆಯಲ್ಲಿ ಹುತಾತ್ಮ ಮಹದೇವ ಮೈಲಾರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೋರಾಟಗಾರರ ನೇತೃತ್ವದಲ್ಲಿ ನಡೆದ ಭೀಕರ ದಂಗೆ, ಯುದ್ಧ ಮತ್ತು ಚಳವಳಿಗಳಲ್ಲಿ ಪಾಲ್ಗೊಂಡು ಕೊನೆಗೆ ಬ್ರಿಟೀಷರ ಗುಂಡಿಗೆ ಎದೆಗೊಟ್ಟು ಹುತಾತ್ಮರಾದವರು ಮಹದೇವ ಮೈಲಾರ. ಬ್ರಿಟಿಷ್ ಆಳ್ವಿಕೆಯಿಂದ ಭಾರತವನ್ನು ಮುಕ್ತಗೊಳಿಸಲು ಹೋರಾಡಿದ ಕೆಚ್ಚೆದೆಯ ಹೋರಾಟ ನಡೆಸಿದ ದೇಶ ಭಕ್ತರಲ್ಲಿ ಒಬ್ಬರಾಗಿದ್ದಾರೆ ಎಂದರು.

ಕ್ರಾಂತಿಕಾರಿ ವಿಚಾರಧಾರೆಗಳು:

ಭಾರತದಲ್ಲಿ ವಿದೇಶಿ ಸಾಮ್ರಾಜ್ಯ ಶಾಹಿಗಳ ಆಳ್ವಿಕೆ ಮತ್ತು ವಸಾಹತುಶಾಹಿ ನೀತಿ ಕೊನೆಗೊಳಿಸುವ ನಿಟ್ಟಿನಲ್ಲಿ ಉದ್ಭವವಾದ ಕ್ರಾಂತಿಕಾರಿ ವಿಚಾರಧಾರೆಗಳು ಮಹದೇವ ಮೈಲಾರ ಮನದಲ್ಲಿ ಹೋರಾಟದ ಕಿಚ್ಚನ್ನು ಹತ್ತಿಸಿದವು. ಪತ್ನಿ ಸಿದ್ಧಮ್ಮ ಮೈಲಾರ ಅವರೊಂದಿಗೆ ತರುಣ ಭಾರತ ಸಂಘವನ್ನು ಸೇರುವ ಮೂಲಕ ಬ್ರಿಟೀಷರ ನಿದ್ದೆಗೆಡೆಸಿದ್ದಲ್ಲದೇ ಕೊನೆಗೊಂದು ದಿವಸ ತಮ್ಮ ಪ್ರಾಣ ನೀಡಿದ್ದನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ ಎಂದರು.

ಇದಕ್ಕೂ ಮುನ್ನ ಗ್ರಾಮದೆಲ್ಲೆಡೆ ಮಹದೇವ ಮೈಲಾರ ಅವರ ಭಾವಚಿತ್ರವನ್ನು ಮೆರವಣಿಗೆ ನಡೆಸಲಾಯಿತು. ಈ ವೇಳೆ ವಿದ್ಯಾರ್ಥಿಗಳು ಮೈಲಾರ ಮಹದೇವ ಅವರ ಪರವಾದ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ನಾಗರಾಜ ಆನ್ವೇರಿ, ವಿ.ಸಿ. ಹಾವೇರಿಮಠ, ಶಿವಪುತ್ರಪ್ಪ ಅಗಡಿ, ಮಲ್ಲಿಕಾರ್ಜುನ ಬಳ್ಳಾರಿ, ವಿಜಯಭರತ ಬಳ್ಳಾರಿ, ಪ್ರವೀಣ್ ಬಳ್ಳಾರಿ, ಶಿವಕುಮಾರ ಪಾಟೀಲ, ಮಾಲತೇಶ ಕುರಿಯವರ, ಮಾರುತಿ ಬ್ಯಾಟೆಪ್ಪನವರ, ಕೆ.ಪಿ.ಬ್ಯಾಡಗಿ ಸೇರಿದಂತೆ ಇನ್ನಿತರರಿದ್ದರು.