ಸಾರಾಂಶ
ಶಿವಮೊಗ್ಗ ನಗರದಲ್ಲಿ ಶುಕ್ರವಾರ ಯುವನಿಧಿ ಚಾಲನೆ ಕಾರ್ಯಕ್ರಮದಲ್ಲಿ ಯುವಕರ ಜನಸಾಗರವೇ ಹರಿದು ಬಂದಿದೆ. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿದೆ. ಉಪಮುಖ್ಯಮಂತ್ರಿ, ಸರ್ಕಾರದ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯುವನಿಧಿ ಕಾರ್ಯಕ್ರಮ ಸ್ವಾಮಿ ವಿವೇಕಾನಂದ ಜಯಂತಿ ದಿನವೇ ಚಾಲನೆ ಸಿಕ್ಕಿದ್ದು ಹೆಮ್ಮೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹರ್ಷದಿಂದ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ ನಗರದಲ್ಲಿ ನಡೆದ ಯುವನಿಧಿ ಚಾಲನೆ ಕಾರ್ಯಕ್ರಮದಲ್ಲಿ ಯುವಕರ ಜನಸಾಗರವೇ ಹರಿದು ಬಂದಿತ್ತು. ಫ್ರೀಡಂ ಪಾರ್ಕ್‌ನ ಬಹುದೊಡ್ಡ ಮೈದಾನ ತುಂಬಿತುಳುಕುತ್ತಿತ್ತು. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಶಿವಮೊಗ್ಗದಲ್ಲಿ ಜರುಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಯುವಕರಲ್ಲಿ ಆತ್ಮವಿಶ್ವಾಸ ಮೂಡಿಸಿದ ಅವರ ಬದುಕಿಗೆಗೆ ಭದ್ರತೆ ನೀಡುವ ಸರ್ಕಾರದ ಯುವನಿಧಿ ಯೋಜನೆಗೆ ಶಿವಮೊಗ್ಗದಲ್ಲೊ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ, ಸರ್ಕಾರದ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯುವನಿಧಿ ಕಾರ್ಯಕ್ರಮ ಸ್ವಾಮಿ ವಿವೇಕಾನಂದ ಜಯಂತಿ ದಿನವೇ ಚಾಲನೆ ಸಿಕ್ಕಿದ್ದು ಹೆಮ್ಮೆ ಎಂದರು.
ಶಿವಮೊಗ್ಗದ ಫ್ರೀಡಂ ಪಾರ್ಕ್ ಆವರಣಕ್ಕೆ ಯಾವ ಅಧಿಕೃತ ಹೆಸರು ಇರಲಿಲ್ಲ. ಈಗ ಮುಖ್ಯಮಂತ್ರಿಗಳು ಸಚಿವ ಮಧು ಬಂಗಾರಪ್ಪ ಸಲಹೆ ಮೇರೆಗೆ 12ನೇ ಶತಮಾನದ ವಿಶ್ವಗುರು ಬಸವಣ್ಣನವರ ಸ್ಥಾಪಿಸಲ್ಪಟ್ಟ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮ ಪ್ರಭು ಅವರ ಹೆಸರನ್ನು ಇಡಲು ಒಪ್ಪಿದ್ದಾರೆ. ಇದು ಅತ್ಯಂತ ಸ್ವಾಗತಾರ್ಹ. ಅಲ್ಲಮಪ್ರಭು ಪ್ರಜಾಪ್ರಭುತ್ವದ ರುವಾರಿ ಮತ್ತು ಅನುಭವ ಮಂಟಪದ ಪ್ರತಿರೂಪವಾಗಿಯೇ ಇಂದು ಸಂಸತ್‌ನ ಪರಿಕಲ್ಪನೆ ಬಂದಿದೆ. ಅಂತಹ ಮಹಾಶರಣರ ಹೆಸರನ್ನು ಇಡಲು ಮೊದಲು ಸೂಚಿಸಿದವರೇ ಸುತ್ತೂರು ಜಗದ್ಗುರು. ಅದಕ್ಕೆ ಎಲ್ಲ ಮಠಾಧೀಶ್ವರರು ಒಪ್ಪಿದ್ದರೂ. ಈಗ ಶಾಸಕ ಎಸ್.ಎನ್. ಚನ್ನಬಸಪ್ಪ ಅದೇಕೆ ವ್ಯತಿರಿಕ್ತ ಹೇಳಿಕೆ ನೀಡದ್ದಾರೋ ಗೊತ್ತಿಲ್ಲ. ಆದರೆ, ಸಂಸದರೇ ಇದಕ್ಕೆ ಒಪ್ಪಿದ್ದಾರೆ ಎಂದು ಹೇಳಿದರು.ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ರಮೇಶ್, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಸ್.ಟಿ. ಚಂದ್ರಶೇಖರ್ ಇತರರಿದ್ದರು.
- - - -13ಎಸ್ಎಂಜಿಕೆಪಿ06: