ಸ್ನೇಹ ಎಂಬುದು ಯಾವುದೇ ಜಾತಿ, ಧರ್ಮ, ಅಂತಸ್ತಿನ ಭೇದವಿಲ್ಲದೇ ಅರಳುವ ಪರಿಶುದ್ಧ, ಪರಿಪೂರ್ಣ ಮಾನವೀಯ ಸಂಬಂಧ. ಇದು ಕೇವಲ ಒಡನಾಟವಲ್ಲ, ಬದಲಿಗೆ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸದ ಸಂಕೇತವಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಪ್ರೊ. ಸಿ.ವಿ.ಪಾಟೀಲ್ ಹೇಳಿದ್ದಾರೆ.
- ರಾಷ್ಟ್ರೀಯ ಸ್ನೇಹಿತರ ದಿನ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ. ಸಿ.ವಿ.ಪಾಟೀಲ್
- - -ಕನ್ನಡಪ್ರಭ ವಾರ್ತೆ ಹರಿಹರ
ಸ್ನೇಹ ಎಂಬುದು ಯಾವುದೇ ಜಾತಿ, ಧರ್ಮ, ಅಂತಸ್ತಿನ ಭೇದವಿಲ್ಲದೇ ಅರಳುವ ಪರಿಶುದ್ಧ, ಪರಿಪೂರ್ಣ ಮಾನವೀಯ ಸಂಬಂಧ. ಇದು ಕೇವಲ ಒಡನಾಟವಲ್ಲ, ಬದಲಿಗೆ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸದ ಸಂಕೇತವಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಪ್ರೊ. ಸಿ.ವಿ.ಪಾಟೀಲ್ ಹೇಳಿದರು.ನಗರದ ಶ್ರೀ ಕಾಳಿದಾಸ ವಿದ್ಯಾ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಪರಸ್ಪರ ಬಳಗದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ನೇಹಿತರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎರಡು ಪವಿತ್ರ ಆತ್ಮಗಳ ಅನುಸಂಧಾನವೇ ಸ್ನೇಹವಾಗಿದೆ. ಸ್ವಾರ್ಥವಿಲ್ಲದ ಸ್ನೇಹವನ್ನು ದೈವಿಕಶಕ್ತಿ ಎಂದು ವರ್ಣಿಸಬಹುದು ಎಂದರು.
ತಂದೆ, ತಾಯಿ, ಮಕ್ಕಳು, ಒಡಹುಟ್ಟಿದವರ ಬಳಿ ಹೇಳಿಕೊಳ್ಳಲಾಗದ ದುಃಖ- ದುಮ್ಮಾನಗಳನ್ನು ಸ್ನೇಹಿತರ ಜೊತೆ ಹಂಚಿಕೊಳ್ಳತ್ತೇವೆ. ಸ್ನೇಹಕ್ಕೆ ಅಷ್ಟೊಂದು ಶಕ್ತಿ ಹಾಗೂ ಮಹತ್ವವಿದೆ ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ ಮಾತನಾಡಿ, ಮಾನವ ಮೂಲತಃ ಸಂಘಜೀವಿ. ಒಂಟಿಯಾಗಿ ಬಾಳಲಾರ. ಸಮಾಜದಲ್ಲಿದ್ದು ಎಲ್ಲರೊಂದಿಗೆ ಬೆರೆತು ತಮ್ಮ ತಮ್ಮ ಬದುಕಗಳನ್ನು ಸುಂದರಗೊಳಿಸಿಕೊಳ್ಳಬೇಕಾಗಿದೆ ಎಂದರು.
ಹಿರಿಯ ಕ್ರೀಡಾಪಟು ಎಚ್.ನಿಜಗುಣ ಮಾತನಾಡಿ, ಇಲ್ಲಿ ಸೇರಿರುವ ಸ್ನೇಹಿತರು, ಕೇವಲ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಆಲೋಚನೆ ಜೊತೆಗೆ ಸಮಾಜದ ಏಳಿಗೆಗಾಗಿ ಚಿಂತಿಸುವ, ಹೋರಾಟ ಮಾಡುವ ಮನೋಭಾವದ ಜನರು ಇರುವುದೇ ಸಂತೋಷವೆಂದರು.ಪತ್ರಕರ್ತ ಶೇಖರ್ ಗೌಡ ಪಾಟೀಲ್ ಮಾತನಾಡಿ, ಸ್ನೇಹವೂ, ರಕ್ತಸಂಬಂಧ ಮೀರಿದ ಅತ್ಯ ಅಮೂಲ್ಯವಾದ ಬಾಂಧವ್ಯ. ಇದಕ್ಕೆ ಕಳಂಕ ಬರದಂತೆ ಎಲ್ಲರೂ ಕಾಪಾಡಿಕೊಳ್ಳೋಣ ಎಂದರು.
ಶ್ರೀ ಕಾಳಿದಾಸ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ರಾಜಶೇಖರ್, ಯಶಸ್ವಿನಿ ವಿದ್ಯಾ ಸಂಸ್ಥೆಯ ಚೇರ್ಮನ್ ವೈ. ಕೃಷ್ಣಮೂರ್ತಿ, ಜನಪದ ತಾಲೂಕ ಅಧ್ಯಕ್ಷ ಬಿ.ಬಿ. ರೇವಣ್ ನಾಯಕ್, ಪರಸ್ಪರ ಬಳಗದ ಸಂಚಾಲಕ ಎ. ರಿಯಾಜ್ ಅಹಮದ್, ವೈ.ಜಿ. ಅಬ್ದುಲ್ ಖಯೂಮ್, ಇಮ್ಮು ರಾಜು, ಆಂಟೋನಿ ಜೋಸೆಫ್, ಮಹಮದ್ ಅಫಾಕ್, ಮಹಮ್ಮದ್ ಉಸ್ಮಾನ್ ಇತರರು ಭಾಗವಹಿಸಿದ್ದರು.- - -
-09HRR.01:ಹರಿಹರದ ಶ್ರೀ ಕಾಳಿದಾಸ ವಿದ್ಯಾ ಸಂಸ್ಥೆ ಸಭಾಂಗಣದಲ್ಲಿ ಪರಸ್ಪರ ಬಳಗದಿಂದ ರಾಷ್ಟ್ರೀಯ ಸ್ನೇಹಿತರ ದಿನ ಕಾರ್ಯಕ್ರಮ ನಡೆಯಿತು.