ಸಾರಾಂಶ
2025 ಜನವರಿ 5ರಂದು ನಡೆಯಲಿರುವ ಚಿತ್ರಸಂತೆಗೆ ಆಗಮಿಸುವವರಿಗಾಗಿ ಬಿಎಂಟಿಸಿ ವತಿಯಿಂದ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮಲ್ಲೇಶ್ವರ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣದಿಂದ ಆನಂದರಾವ್ ವೃತ್ತ ಮಾರ್ಗವಾಗಿ ವಿಧಾನಸೌಧಕ್ಕೆ ಸಂಚರಿಸುವಂತೆ ಫೀಡರ್ ಸೇವೆ ಒದಗಿಸಲಾಗುತ್ತಿದೆ.
ಬೆಂಗಳೂರು : ಚಿತ್ರಕಲಾ ಪರಿಷತ್‌ನಲ್ಲಿ 2025 ಜನವರಿ 5ರಂದು ನಡೆಯಲಿರುವ ಚಿತ್ರಸಂತೆಗೆ ಆಗಮಿಸುವವರಿಗಾಗಿ ಬಿಎಂಟಿಸಿ ವತಿಯಿಂದ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮಲ್ಲೇಶ್ವರ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣದಿಂದ ಆನಂದರಾವ್ ವೃತ್ತ ಮಾರ್ಗವಾಗಿ ವಿಧಾನಸೌಧಕ್ಕೆ ಸಂಚರಿಸುವಂತೆ ಫೀಡರ್ ಸೇವೆ ಒದಗಿಸಲಾಗುತ್ತಿದೆ.
ಜ.5ರ ಬೆಳಗ್ಗೆ 5ರಿಂದ ರಾತ್ರಿ 9 ಗಂಟೆಯವರೆಗೆ ಪ್ರತಿ 10 ನಿಮಿಷಕ್ಕೊಂದರಂತೆ ಫೀಡರ್ ಬಸ್ ಸಂಚರಿಸಲಿವೆ. ಈ ಬಸ್‌ನಲ್ಲಿ ಪ್ರಯಾಣಿಸುವವರಿಗೆ 15 ರು. ಪ್ರಯಾಣ ದರ ನಿಗದಿ ಮಾಡಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಕಟಣೆಯಲ್ಲಿ ತಿಳಿಸಿದೆ.
ಬನಶಂಕರಿಯಿಂದ ಹೊಸ ಮಾರ್ಗದಲ್ಲಿ ಬಸ್
ಪ್ರಯಾಣಿಕರ ಅನುಕೂಲಕ್ಕಾಗಿ ಬನಶಂಕರಿ ಬಸ್ ನಿಲ್ದಾಣದಿಂದ ಹಾರೋಹಳ್ಳಿಗೆ ಡಿ.26ರಿಂದ ನೂತನ ಬಸ್ ಸೇವೆ ಆರಂಭಿಸಲಾಗಿದ್ದು, ಈ ಬಸ್ ಬನಶಂಕರಿ ಬಸ್ ನಿಲ್ದಾಣದಿಂದ ಹೊರಟು ದಯಾನಂದ ಸಾಗರ ವೈದ್ಯಕೀಯ ಕಾಲೇಜು, ಕೋಣನಕುಂಟೆ ಕ್ರಾಸ್, ತಲಘಟ್ಟಪುರ, ಕಗ್ಗಲೀಪುರ ಮಾರ್ಗವಾಗಿ ಹಾರೋಹಳ್ಳಿಗೆ ತಲುಪಲಿದೆ. ಒಟ್ಟು 2 ಬಸ್‌ಗಳು 14 ಸುತ್ತುವಳಿಯಲ್ಲಿ ಬಸ್ ಸೇವೆ ನೀಡಲಾಗುತ್ತದೆ ಎಂದು ನಿಗಮ ತಿಳಿಸಿದೆ.