ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರದೆಹಲಿಯ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ ಏಕೈಕ ಕನ್ನಡಿಗ, ರಾಜಕೀಯದ ಭೀಷ್ಮ, ರೈತರ ಆಶಾಕಿರಣ ಹಾಗೂ ಮಣ್ಣಿನ ಮಗ ಎಚ್.ಡಿ. ದೇವೇಗೌಡರ ೯೩ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದು ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ ತಿಳಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡರ ಜನ್ಮದಿನ ಪ್ರಯುಕ್ತ ತಾಲೂಕು ಜೆಡಿಎಸ್ ವತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣುಗಳು ಹಾಗೂ ಬ್ರೆಡ್ ವಿತರಿಸಿ ಮಾತನಾಡಿದರು. ಗೌಡರಿಗೆ ದೇವರು ಇನ್ನಷ್ಟು ಆರೋಗ್ಯ, ಆಯಸ್ಸು, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಹಾಗೂ ತಾಲೂಕಿನ ಎಲ್ಲಾ ನಾಗರಿಕ ಪರವಾಗಿ ಜನ್ಮ ದಿನ ಶುಭಾಶಯವನ್ನು ಕೋರುತ್ತೇವೆ ಎಂದರು. ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಚ್.ಎಸ್.ಪುಟ್ಟ ಸೋಮಪ್ಪ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷರಾದ ಎಚ್.ಎಸ್ ಸುದರ್ಶನ್ ಹಾಗೂ ಶ್ರೀಧರ್, ಜಗನ್ನಾಥ್, ಡಾ. ರಮೇಶ್, ಚಂದ್ರಶೇಖರ್, ಅನು, ಆನಂದ್, ಬಾಬು, ಜಯಪ್ರಕಾಶ್, ಜವರೇಶ, ಗೋವಿಂದ, ಗಿರೀಶ್ ಕುಮಾರ ಇತರರು ಇದ್ದರು.