ಸಾರಾಂಶ
ವಿಜಯಪುರ: ಸ್ವಾಮಿ ವಿವೇಕಾನಂದರ ಆಶಯಗಳನ್ನು ಸಾರ್ಥಕಗೊಳಿಸುವ ಶಕ್ತಿ ನಿಮ್ಮದಾಗಲಿ ಎಂದು ಉಪನ್ಯಾಸಕ ಬಿ.ಪಿ.ಬೈರೇಗೌಡ ಹೇಳಿದರು.
ವಿಜಯಪುರ: ಸ್ವಾಮಿ ವಿವೇಕಾನಂದರ ಆಶಯಗಳನ್ನು ಸಾರ್ಥಕಗೊಳಿಸುವ ಶಕ್ತಿ ನಿಮ್ಮದಾಗಲಿ ಎಂದು ಉಪನ್ಯಾಸಕ ಬಿ.ಪಿ.ಬೈರೇಗೌಡ ಹೇಳಿದರು.
ಪಟ್ಟಣದ ಪ್ರಗತಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿಜಯಪುರ ಟೌನ್ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯುವದಿನ ಪ್ರಯುಕ್ತ ಸ್ವಾಮಿ ವಿವೇಕಾನಂದರ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಧನಾತ್ಮಕ ಕೊಡುಗೆ ನೀಡಲು ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳು ಸ್ಫೂರ್ತಿ ತುಂಬಲಿ ಎಂದರು.ಕಾರ್ಯಕ್ರಮದಲ್ಲಿ ವಿಜಯಪುರ ಟೌನ್ ಕಸಾಪ ಅಧ್ಯಕ್ಷ ಶ್ರೀನಿವಾಸ ಮಾತನಾಡಿ, ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ. ಹೃದಯ ಹಾಗೂ ಮೆದುಳಿನ ನಡುವಿನ ಸಂಘರ್ಷದಲ್ಲಿ ನೀವು ನಿಮ್ಮ ಹೃದಯವನ್ನು ಅನುಸರಿಸಿ ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ನೀವೇ ಮಾತನಾಡಿಕೊಳ್ಳಿ. ಇಲ್ಲದಿದ್ದರೆ ಒಗತ್ತಿನಲ್ಲಿ ಒಬ್ಬ ಅದ್ಭುತ ವ್ಯಕ್ತಿಯನ್ನು ನೀವು ಕಳೆದುಕೊಳ್ಳುತ್ತೀರಿ. ನಿಮ್ಮನ್ನು ನೀವು ನಂಬುವವರೆಗೂ ನಿಮಗೆ ದೇವರ ಮೇಲೆ ನಂಬಿಕೆ ಬಾರದು. ನಾವು ಏನಾಗಿದ್ದೇವೋ ಅದು ನಮ್ಮ ವಿಚಾರಗಳಿಂದಲೇ. ನೀವು ಏನು ವಿಚಾರ ಮಾಡುತ್ತೀರಿ ಎಂಬ ಬಗ್ಗೆ ಗಮನ ಇರಲಿ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ನಾಗರಾಜ್ ಮಾತನಾಡಿದರು. ಉಪನ್ಯಾಸಕರಾದ ಶೆಟ್ಟಿ ನಾಯಕ್, ಪುರಸಭಾ ಸದಸ್ಯರಾದ ರಾಜಣ್ಣ, ಸಿ.ಎಂ.ರಾಮನಾರಾಯಣಸ್ವಾಮಿ, ರಬ್ಬನಹಳ್ಳಿ ಕೆಂಪಣ್ಣ. ವಾಸದೇವ ಹೊಸಳ್ಳಿ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಜರಿದ್ದರು.