ಸಾರಾಂಶ
ಬಾಗಲಕೋಟೆ: ಸ್ವಾತಂತ್ರ್ಯ ಭಾರತದ ಹೋರಾಟದಲ್ಲಿ ಅಮೂಲ್ಯ ಪಾತ್ರ ನಿರ್ವಹಿಸಿದ ಮಹಿಳೆಯರ ಗಮನದಲ್ಲಿಟ್ಟುಕೊಂಡು ಇಂದಿನ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ಅತ್ಯಗತ್ಯ ಎಂದು ಟಿಐಇಐನ ಅಧ್ಯಕ್ಷೆ ಮಾಧುರಿ ಮುಧೋಳ ತಿಳಿಸಿದರು.
ಬಾಗಲಕೋಟೆ:
ಸ್ವಾತಂತ್ರ್ಯ ಭಾರತದ ಹೋರಾಟದಲ್ಲಿ ಅಮೂಲ್ಯ ಪಾತ್ರ ನಿರ್ವಹಿಸಿದ ಮಹಿಳೆಯರ ಗಮನದಲ್ಲಿಟ್ಟುಕೊಂಡು ಇಂದಿನ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ಅತ್ಯಗತ್ಯ ಎಂದು ಟಿಐಇಐನ ಅಧ್ಯಕ್ಷೆ ಮಾಧುರಿ ಮುಧೋಳ ತಿಳಿಸಿದರು.ನಗರದ ತೇಜಸ್ ಅಂತಾರಾಷ್ಟ್ರೀಯ ಶಿಕ್ಷಣ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನೋತ್ಸವದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಪ್ರಾಚೀನ ಕಾಲದಿಂದಲೂ ಮಹಿಳೆ ಪ್ರತಿ ಕ್ಷೇತ್ರದಲ್ಲಿಯೂ ಅಗಾಧ ಸಾಧನೆಯನ್ನು ಮಾಡಿದ್ದನ್ನು ಗುರುತಿಸಬೇಕು. ಅಲ್ಲದೇ ಸ್ವಾತಂತ್ರ್ಯ ಭಾರತದಲ್ಲಿ ಮಹಿಳೆಯರಿಗೆ ಪ್ರತಿಕ್ಷೇತ್ರದಲ್ಲಿ ಪ್ರಾತಿನಿಧ್ಯ ನೀಡಿ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವುದು ಅಗತ್ಯವಿದೆ ಎಂದರು.
ಈ ಸಂದರ್ಭ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಶಿವಕುಮಾರ ಗಂಗಾಲ, ಪ್ರಾಂಶುಪಾಲರಾದ ಡಾ. ಪ್ರಹ್ಲಾದ್ ಗಂಗಾವತಿ, ಸಿಬಿಎಸ್‌ಸಿ ಪ್ರಾಂಶುಪಾಲ್ ಸಚಿನ್ ಭಾತ್ರ, ಪಿಯು ಪ್ರಾಂಶುಪಾಲ್ ಕ್ಯಾಪ್ಟನ್ ಶಶಾಂಕ ದೀಕ್ಷಿತ, ದೈಹಿಕ ಶಿಕ್ಷಕರಾದ ಸದಾಶಿವ ಹಂಚಿನಾಳ, ತೇಜಸ್ ಶಿಕ್ಷಣ ಸಮೂಹ ಸಂಸ್ಥೆಗಳ ಸಮಸ್ತ ಪ್ರಾಧ್ಯಾಪಕ ವರ್ಗ, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.