ಸಾರಾಂಶ
ಬೆಂಗಳೂರಿನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಮಸ್ಕಿಯ ಜಾಮಿಯಾ ಮಜೀದ್ ಸಮಿತಿಯ ಸದಸ್ಯರು ಸನ್ಮಾನಿಸಿದರು. ಶಾಸಕ ಆರ್ ಬಸನಗೌಡ ತುರ್ವಿಹಾಳ ಇದ್ದರು.
ಕನ್ನಡಪ್ರಭ ವಾರ್ತೆ ಮಸ್ಕಿ
ಇಲ್ಲಿನ ಜಾಮಿಯಾ ಮಸೀದಿ ನವೀಕರಣಕ್ಕೆ ರು. 25 ಲಕ್ಷ ಬಿಡುಗಡೆ ಮಾಡಲಾಗುವುದು ಎಂದು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.ಬೆಂಗಳೂರಿನ ವಕ್ಪ ಬೋರ್ಡ್ ಕಚೇರಿಯಲ್ಲಿ ಶಾಸಕ ಆರ್ ಬಸನಗೌಡ ತುರ್ವಿಹಾಳ ನೇತೃತ್ವದಲ್ಲಿ ಮಸ್ಕಿ ಜಾಮಿಯಾ ಮಸೀದಿ ಸಮಿತಿ ಸದಸ್ಯರು ಮಸೀದಿ ನವೀಕರಣಕ್ಕಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಮುಸ್ಲಿಂ ಮುಖಂಡರು ಸಚಿವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು. ಮಸ್ಕಿ ಜಾಮಿಯಾ ಮಸೀದಿ ಹಾಗೂ ಶಾದಿ ಮಹಲ್ ಸೇರಿದಂತೆ ಕ್ಷೇತ್ರದಲ್ಲಿನ ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವಂತೆ ನಿಯೋಗ ಸಚಿವರಲ್ಲಿ ಮನವಿ ಮಾಡಿತು.
ಮನವಿಗೆ ಸ್ಪಂದಿಸಿದ ಸಚಿವರುಮಜೀದ್ ನವೀಕರಣಕ್ಕೆ 25 ಲಕ್ಷ ರು. ಅನುದಾನ ಬಿಡುಗಡೆ ಮಾಡಲು ವಕ್ಪ ಕಾರ್ಯದರ್ಶಿಗೆ ಸೂಚಿಸಿದರು. ಅಲ್ಲದೇ ತಾಲೂಕಿನ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗಾಗಿ ವಿಶೇಷ ಕಾಳಜಿಯನ್ನು ತೆಗೆದುಕೊಂಡು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಸ್ಲಿಂ ಮುಖಂಡರಿಗೆ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ್ ಅಜೀಜ್, ಅಬ್ದುಲ್ ಗನಿಸಾಬ್, ಮಹಬೂಬ್ ಸಾಬ್ ಮುದ್ದಾಪುರ್, ರಿಯಾಜ್ ಖಾಜಿ, ಫಾರೂಕ್ ಸಾಬ್, ಶಫಿ ಶೇರು, ರಾಜು ನದಾಫ್, ಇಂದರ್ ಪಾಶ ಚಿಂಚರಕಿ ಸೇರಿದಂತೆ ಇತರ ಮುಸ್ಲಿಂ ಮುಖಂಡರಿದ್ದರು.