ಕ್ರೀಡೆಯಿಂದಲೂ ಭವಿಷ್ಯ ಕಟ್ಟಲು ಸಾಧ್ಯ: ವಂ.ಡಾ.ರೋಕ್ ಡಿಸೋಜ

| Published : Oct 19 2024, 12:18 AM IST

ಕ್ರೀಡೆಯಿಂದಲೂ ಭವಿಷ್ಯ ಕಟ್ಟಲು ಸಾಧ್ಯ: ವಂ.ಡಾ.ರೋಕ್ ಡಿಸೋಜ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಶಿಕ್ಷಣ ಇಲಾಖೆ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಾಗು ಮೌಂಟ್ ರೋಸರಿ ಆಂಗ್ಲ ಶಾಲೆ ಸಂತೆಕಟ್ಟೆ ಆಯೋಜಿಸಿದ ಪೆರ್ಡೂರು ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟವನ್ನು ಮೌಂಟ್ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ವಂ.ಡಾ.ರೋಕ್ ಡಿ’ಸೋಜ ವಿಧ್ಯುಕ್ತವಾಗಿ ಉದ್ಘಾಟಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಒಲಂಪಿಕ್ಸ್ ಪದಕ ಪಟ್ಟಿಯನ್ನು ನೋಡಿ ದೇಶದ ಸಾಧನೆ ಉತ್ತಮವಾಗಿಲ್ಲವೆಂದು ನಾವು ವಿಮರ್ಶೆ ಮಾಡುತ್ತೇವೆ. ಆದರೇ ಬಾಲ್ಯದಿಂದ ಕ್ರೀಡೆಗಳಿಗೆ ಹೆತ್ತವರಾಗಲಿ, ಶಿಕ್ಷಕರಾಗಲಿ ಅಥವಾ ಸಮಾಜವಾಗಲಿ ಪ್ರೋತ್ಸಾಹವನ್ನು ನೀಡುವುದು ವಿರಳ. ಕ್ರೀಡೆಯಿಂದ ಮಿಂಚಿ ಭವಿಷ್ಯ ಕಟ್ಟಿದ ಭಾರತರತ್ನ, ಖೇಲ್‌ರತ್ನ, ಪದ್ಮ ಪ್ರಶಸ್ತಿಗಳನ್ನು ಪಡೆದ ನೂರಾರು ಕ್ರೀಡಾಪಟುಗಳು ನಮಗೆ ಮಾದರಿಯಾಗಬೇಕು. ನಮ್ಮ ನಿಲುವು ಕೇವಲ ಅಂಕಗಳನ್ನು ಗಳಿಸಿ ಕೆಲಸಗಿಟ್ಟಿಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಕ್ರೀಡಾ ಸಾಧನೆಯಿಂದಲೂ ನಮ್ಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ಮೌಂಟ್ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ವಂ.ಡಾ.ರೋಕ್ ಡಿ’ಸೋಜ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಾಗು ಮೌಂಟ್ ರೋಸರಿ ಆಂಗ್ಲ ಶಾಲೆ ಸಂತೆಕಟ್ಟೆ ಆಯೋಜಿಸಿದ ಪೆರ್ಡೂರು ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟವನ್ನು ವಿಧ್ಯುಕ್ತವಾಗಿ ಉದ್ಘಾಟಸಿ ಮಾತನಾಡಿದರು.

ಪೆರ್ಡೂರು ಹೋಬಳಿಯ ಹನ್ನೊಂದು ಶಾಲೆಗಳ ಕ್ರೀಡಾಪಟುಗಳ ಪಥಸಂಚಲನದಲ್ಲಿ ವಂ.ಫಾ. ಓಲಿವರ್ ನಜ್ರತ್ ಗೌರವ ವಂದನೆ ಸ್ವೀಕರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶ್ರೀ ಜಗದೀಶ್ ಕ್ರೀಡಾಜ್ಯೋತಿ ಪ್ರಜ್ವಲಿಸಿ ಕ್ರೀಡಾಪಟುಗಳನ್ನು ಹುರಿದುಂಬಿಸಿ ದಕ್ಷ ಆಯೋಜನೆಗೆ ಅಭಿನಂದಿಸಿದರು.

ಡಾ.ವಿನ್ಸೆಂಟ್ ಆಳ್ವಾ , ಪ್ರಾಂಶುಪಾಲರು, ವಿಜಯಕುಮಾರ್ ಶೆಟ್ಟಿ, ಅಶೋಕ್ ಕೆ, ಲೂಕ್ ಡಿಸೋಜ, ರೋಹಿತಾಕ್ಷ, ಪ್ರಸನ್ನ ಕುಮಾರ್, ನಾಗರಾಜ್, ಶ್ರೀಮತಿ ರತ್ನಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸಿ.ಆನ್ಸಿಲ್ಲಾ ರೋಶಿನಿ ಡಿಮೆಲ್ಲೊ ಸ್ವಾಗತಿಸಿದರು. ಅಶೋಕ್ ಚಿತ್ರಪಾಡಿ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಅನಿತಾ ವಂದಿಸಿದರು.