ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚುರುತೀವ್ರ ಕುತೂಹಲ ಕೆರಳಿಸಿದ್ದ ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಹಿಂದಿನ ಸಂಸದ, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಭರ್ಜರಿ ಗೆಲವು ದಾಖಲಿಸಿದ್ದಾರೆ.ಸ್ಥಳೀಯ ಎಸ್‌ಆರ್‌ಪಿಎಸ್ ಹಾಗೂ ಎಲ್‌ವಿಡಿ ಕಾಲೇಜಿನಲ್ಲಿ ಮಂಗಳವಾರ ನಡೆದ ಮತ ಎಣಿಕೆ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ನಾಯಕ ಅವರು ಅತೀ ಹೆಚ್ಚು ಮತಗಳನ್ನು ಪಡೆದ ಕಾಂಗ್ರೆಸ್ ಜಿ.ಕುಮಾರ ನಾಯಕ ಅವರು ಜಯಶಾಲಿಗಳಾಗಿದ್ದಾರೆ ಎಂದು ಘೋಷಿಸಿ ಪ್ರಮಾಣ ಪತ್ರ ವಿತರಿಸಿದರು.ರಾಯಚೂರು ಕ್ಷೇತ್ರದ ಚುನಾವಣೆ ಕಣದಲ್ಲಿ ಒಟ್ಟು 8 ಜನರು ಸ್ಪರ್ಧಿಸಿದ್ದು, ಚಲಾವಣೆಗೊಂಡ ಒಟ್ಟು 13,00,655 ಮತಗಳಲ್ಲಿ ಕಾಂಗ್ರೆಸ್ ಜಿ.ಕುಮಾರ ನಾಯಕ 6,70,966 ಮತ್ತು ಬಿಜೆಪಿಯ ರಾಜಾ ಅಮರೇಶ್ವರ ನಾಯಕ 5,91,185 ಮತಗಳನ್ನು ಪಡೆದು 79,781 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ. ಉಳಿದಂತೆ ಬಿಎಸ್‌ಪಿ ಅಭ್ಯರ್ಥಿ ಎಸ್.ನರಸಣ್ಣ ಗೌಡ ನಾಯಕ 9,289, ಕರ್ನಾಟಕ ರಾಷ್ಟ್ರ ಸಮಿತಿಯ ಬಸವಪ್ರಭು ಮೇದಾ 5,181, ಸೋಷಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ರಾಮಲಿಂಗಪ್ಪ 2,409, ಭಾರತೀಯ ಜನ ಸಾಮ್ರಾಟ ಪಕ್ಷದ ಮೇದಾರ ಶಾಮರಾವ್ 2,640, ಪಕ್ಷೇತರ ಅಭ್ಯರ್ಥಿಗಳಾದ ಅಮರೇಶ 4,465 ಹಾಗೂ ಯಲ್ಲಮ್ಮ ದಳಪತಿ ಅವರು 3,634 ಮತಗಳನ್ನು ಪಡೆದುಕೊಂಡಿದ್ದರೇ, 9,850 ನೋಟಾ ಮತಗಳು ಬಿದ್ದಿವೆ.ಕಳೆದ 2019 ರ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಯ ರಾಜಾ ಅಮರೇಶ್ವರ ನಾಯಕ ಅವರು 5,98,337 ಮತಗಳನ್ನು ಗಳಿಸಿ 4,80,621 ಮತಗಳನ್ನು ಪಡೆದಿದ್ದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬಿ.ವಿ.ನಾಯಕ ಅವರನ್ನು 1,17,716 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದರು. ಅಂದು ಮೋದಿ ಅಲೆ, ಕ್ಷೇತ್ರದಲ್ಲಿ ಪಕ್ಷದ ಶಾಸಕರು, ಕಾರ್ಯಕರ್ತರ ಸಂಘಟಿತ ಶ್ರಮದಿಂದ ಗೆಲವು ಕಂಡಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಆರಂಭದಿಂದಲೂ ಕಾಂಗ್ರೆಸ್‌ಗೆ ಗಟ್ಟಿ ಪೈಪೋಟಿ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾದ ಹಿನ್ನೆಲೆ ಸ್ಥಾನ ಕಳೆದುಕೊಳ್ಳುವಂತಾಗಿದೆ.
2024 ರ ಫಲಿತಾಂಶಜಿ.ಕುಮಾರ ನಾಯಕ (ಕಾಂಗ್ರೆಸ್) 6,70,966 ರಾಜಾ ಅಮರೇಶ್ವರ ನಾಯಕ (ಬಿಜೆಪಿ) 5,91,185ಗೆಲುವಿನ ಅಂತರ 79,7812019 ರ ಫಲಿತಾಂಶರಾಜಾ ಅಮರೇಶ್ವರ ನಾಯಕ (ಬಿಜೆಪಿ) 5,98,337ಬಿ.ವಿ.ನಾಯಕ (ಕಾಂಗ್ರೆಸ್) 4,80,621ಗೆಲುವಿನ ಅಂತರ 1,17,716