ಚನ್ನಗಿರಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಜಿ.ಪಿ.ಸತೀಶ್ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರೋಧ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಜಿ.ಪಿ.ಸತೀಶ್ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರೋಧ ಆಯ್ಕೆಯಾದರು.ಈ ಹಿಂದೆ ಅಧ್ಯಕ್ಷರಾಗಿದ್ದ ಶೋಭಾ ಉಮೇಶ್ ಕುಮಾರ್ ರಾಜೀನಾಮೆಯಿಂದ ತೆರವುಗೊಂಡಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆದಿದ್ದು ಈ ಅಧ್ಯಕ್ಷ ಸ್ಥಾನಕ್ಕೆ ನಲ್ಲೂರು ಕ್ಷೇತ್ರದ ಜಿ.ಪಿ.ಸತೀಶ್ ಇವರ ಒಂದೇ ನಾಮಪತ್ರ ಸಲ್ಲಿಕೆಯಾಗಿತ್ತು. ಆದ್ದರಿಂದ ಚುನಾವಣಾಧಿಕಾರಿ, ಬ್ಯಾಂಕಿನ ವ್ಯವಸ್ಥಾಪಕ ಜಿ.ಟಿ.ತಿಪ್ಪೇಸ್ವಾಮಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ಜಿ.ಪಿ.ಸತೀಶ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
ಬ್ಯಾಂಕ್ ನ ಚುನಾಯಿತ 15 ಸದಸ್ಯರಲ್ಲಿ 14 ಸದಸ್ಯರು ಹಾಜರಿದ್ದರು. ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಕೆ.ಆರ್.ಶಿವಕುಮಾರ್ ಆಡಳಿತ ಮಂಡಳಿ ಸದಸ್ಯರಾದ ಶೋಭಾ ಉಮೇಶ್ ಕುಮಾರ್, ಎಸ್.ಮಂಜಪ್ಪ, ಲೋಕೇಶಪ್ಪ, ಮಹದೇವಪ್ಪ, ವಾಸುದೇವ ಶಟ್ರು, ಕುಬೇಂದ್ರಪ್ಪ, ಎಂ.ಎನ್.ಉಷಾ, ಶಶಿಧರ ನಾಯ್ಕ್, ಸರ್ಜಿ ರಮೇಶ್, ದೊಡ್ಡಬಸಪ್ಪ, ಯೋಗೇಶ್ವರಪ್ಪ, ಎಂ.ಎಸ್.ಅಜ್ಜಪ್ಪ ಹಾಜರಿದ್ದರು.- - -
(ಬಾಕ್ಸ್)* ಸಹಕಾರ ಸಂಘ, ಬ್ಯಾಂಕ್‌ಗಳು ಪಕ್ಷಾತೀತವಾಗಿರಲಿ: ಮಾಡಾಳು ವಿರೂಪಾಕ್ಷಪ್ಪ
- ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಜಿ.ಪಿ.ಸತೀಶ್ ಅಭಿನಂದನಾ ಸಮಾರಂಭ- - -ಕನ್ನಡಪ್ರಭ ವಾರ್ತೆ ಚನ್ನಗಿರಿಸಹಕಾರ ಸಂಘ ಮತ್ತು ಬ್ಯಾಂಕ್‌ಗಳು ಪಕ್ಷಾತೀತವಾಗಿದ್ದಾಗ ಮಾತ್ರ ರೈತರ ಹಿತವನ್ನು ಕಾಪಾಡಲು ಸಾಧ್ಯ. ಆ ನಿಟ್ಟಿನಲ್ಲಿ ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ತಾಲೂಕಿನ ರೈತರ ಹಿತವನ್ನು ಕಾಪಾಡುತ್ತಾ ಮುನ್ನಡೆದಿದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.
ಮಂಗಳವಾರ ಇಲ್ಲಿನ ಪಿ.ಎಲ್.ಡಿ. ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡ ಜಿ.ಪಿ.ಸತೀಶ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಹಿಂದೆ ಅಧ್ಯಕ್ಷರಾಗಿದ್ದ ಶೋಭಾ ಉಮೇಶ್ ಕುಮಾರ್ ಅವರು ರಾಜ್ಯ ಸಹಕಾರ ಬ್ಯಾಂಕ್ ನಿರ್ದೇಶಕರಾದ ಮೇಲೆ ಹೆಚ್ಚು ಹೆಚ್ಚು ಹಣವನ್ನು ತಂದು ತಾಲೂಕಿನ ರೈತರಿಗೆ ಸಾಲ ಸೌಲಭ್ಯಗಳನ್ನು ನೀಡಿದ್ದರು. ಅವರ ರಾಜೀನಾಮೆಯಿಂದ ತೆರವುಗೊಂಡ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸತೀಶ್ ಅವರು ಬ್ಯಾಂಕ್ ಸದಸ್ಯರ ವಿಶ್ವಾಸ ಪಡೆದು ರೈತರ ಹಿತ ಕಾಪಾಡಬೇಕು ಎಂದರು.ಈ ಸಂದರ್ಭದಲ್ಲಿ ಪ್ರಮುಖರಾದ ಕೋಗಲೂರು ಉಮೇಶ್ ಕುಮಾರ್, ಮಲಹಾಳ್ ಡಿ.ಸಿ.ಕುಮಾರಸ್ವಾಮಿ, ಚಿಕ್ಕೂಲಿಕೆರೆ ಸಂಗಮೇಶ್, ಪಟ್ಲಿ ನಾಗರಾಜ್, ಪಾಂಡೋಮಟ್ಟಿ ಲೋಕಣ್ಣ, ಗಂಗಗೊಂಡನಹಳ್ಳಿ ಜಗದೀಶ್, ಅಂಜಿನಪ್ಪ ಸೇರಿದಂತೆ ಬ್ಯಾಂಕ್ ಆಡಳಿತ ಮಂಡಳಿಯ ಎಲ್ಲ ಚುನಾಯಿತ ಸದಸ್ಯರು ಹಾಜರಿದ್ದರು.- - --1ಕೆಸಿಎನ್ಜಿ2:
ನೂತನ ಅಧ್ಯಕ್ಷರಾಗಿ ಆವಿರೋಧ ಆಯ್ಕೆಯಾದ ಸತೀಶ್ ಅವರನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅಭಿನಂದಿಸಿದರು.- - -
-1ಕೆಸಿಎನ್ಜಿ1:ನೂತನ ಅಧ್ಯಕ್ಷ ಜಿ.ಪಿ.ಸತೀಶ್ ಅವರನ್ನು ಚುನಾವಣಾಧಿಕಾರಿ ಜಿ.ಟಿ.ತಿಪ್ಪೇಸ್ವಾಮಿ ಅಭಿನಂದಿಸಿದರು.