3ರಂದು ‘ಗಬ್ಬರ್ ಸಿಂಗ್’ ಕರಾವಳಿಯಾದ್ಯಂತ ತೆರೆಗೆ

| Published : May 01 2024, 01:16 AM IST

ಸಾರಾಂಶ

ನಾಯಕ ನಟನಾಗಿ ಶರಣ್ ಶೆಟ್ಟಿ, ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ ‘ಗಬ್ಬರ್ ಸಿಂಗ್’ ತುಳು ಚಲನಚಿತ್ರ ಮೇ 3ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು, ಗಬ್ಬರ್ ಸಿಂಗ್ ಆ್ಯಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್. ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಸಿನಿಪೊಲೀಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಸುರತ್ಕಲ್‌ನಲ್ಲಿ ಸಿನಿ ಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರ ಮಂದಿರಗಳಲ್ಲಿ ‘ಗಬ್ಬರ್ ಸಿಂಗ್’ ತೆರೆಗೆ ಬರಲಿದೆ ಎಂದು ಹೇಳಿದರು.ನಟ ಭೋಜರಾಜ್‌ ವಾಮಂಜೂರು ಮಾತನಾಡಿ, ಗಬ್ಬರ್ ಸಿಂಗ್ ತುಳು ಸಿನಿಮಾ ವಿಭಿನ್ನ ಕತೆಯನ್ನೊಳಗೊಂಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಹೆಣೆಯಲಾಗಿದೆ. ಉತ್ತಮ‌ ಕತೆ, ನವಿರಾದ ಹಾಸ್ಯದೊಂದಿಗೆ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಆರು ಹಾಡು, ನಾಲ್ಕು ಫೈಟ್ಸ್ ಇವೆ. ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದರು.

ನಾಯಕ ನಟನಾಗಿ ಶರಣ್ ಶೆಟ್ಟಿ, ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಕತೆ- ಚಿತ್ರಕತೆ ಸತೀಶ್ ಪೂಜಾರಿ ಬಾರ್ಕೂರ್, ನಿರ್ದೇಶನದ ಜವಾಬ್ದಾರಿಯನ್ನು ಪ್ರದೀಪ್ ವಹಿಸಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ರಚಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಕುಸೆಲ್ದರಸೆ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಾಯಿಕೃಷ್ಣ, ಉಮೇಶ್ ಮಿಜಾರ್, ರವಿರಾಮ ಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲ್, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್ ಮೊದಲಾದವರಿದ್ದಾರೆ.

ಮಧು ಸುರತ್ಕಲ್, ಚಂದ್ರ ಶೇಖರ ನಾನಿಲ್ ಹಳೆಯಂಗಡಿ, ನಟ ಶರಣ್ ಶೆಟ್ಟಿ, ನಟಿ ವೆನ್ಸಿಟಾ ಇದ್ದರು.