ಸಾರಾಂಶ
‘ತಿಥಿ’ ಸಿನಿಮಾದ ಮೂಲಕ ಪ್ರಖ್ಯಾತಿ ಪಡೆದಿದ್ದ ಗಡ್ಡಪ್ಪ (89) ಬುಧವಾರ ನಿಧನರಾದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಹತ್ತು ವರ್ಷಗಳ ಹಿಂದೆ, 2015ರಲ್ಲಿ ತೆರೆಕಂಡ ‘ತಿಥಿ’ ಸಿನಿಮಾದ ಮೂಲಕ ಪ್ರಖ್ಯಾತಿ ಪಡೆದಿದ್ದ ಗಡ್ಡಪ್ಪ (89), ದೀರ್ಘಕಾಲದ ಅನಾರೋಗ್ಯದಿಂದ ಮಂಡ್ಯ ಜಿಲ್ಲೆ ನೊದೆಕೊಪ್ಪಲುವಿನಲ್ಲಿ ಬುಧವಾರ ನಿಧನರಾದರು.ಗಡ್ಡಪ್ಪ ಅಲಿಯಾಸ್ ಚನ್ನೇಗೌಡಗೆ ಹೃದಯ ಕಾಯಿಲೆ, ಕೆಮ್ಮು ಮತ್ತು ಉಬ್ಬಸ, ಶ್ರವಣದೋಷ ಮತ್ತು ಇತರ ವಯೋಸಹಜ ಸಮಸ್ಯೆಗಳು ಬಾಧಿಸುತ್ತಿದ್ದವು. ಇದರ ಜೊತೆಗೆ ತಿಂಗಳ ಹಿಂದಷ್ಟೇ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ನಂತರ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ನೊದೆಕೊಪ್ಪಲುವಿನಲ್ಲಿ ಬುಧವಾರ ಸಂಜೆ ನೆರವೇರಿತು.
‘ತಿಥಿ’ ಸಿನಿಮಾದಿಂದ ಖ್ಯಾತಿ:ರಾಷ್ಟ್ರಪ್ರಶಸ್ತಿ ಪಡೆದ ‘ತಿಥಿ’ ಸಿನಿಮಾದಲ್ಲಿ ಪಟಾಪಟಿ ಚಡ್ಡಿ, ಹಳೇ ಬನಿಯನ್-ಶರ್ಟು ತೊಟ್ಟು ‘ಏನ್ ನಿನ್ ಪ್ರಾಬ್ಲಮ್ಮು’ ಎನ್ನುವ ಅವರ ಡೈಲಾಗ್ ಪ್ರಖ್ಯಾತಿ ಪಡೆದಿದ್ದು. ಆ ಬಳಿಕ ಅವರು, ಗಡ್ಡಪ್ಪನ ಸರ್ಕಲ್, ತಾತನ್ ತಿಥಿ ಮೊಮ್ಮಗನ ಪ್ರಸ್ಥ, ಹಾಲು -ತುಪ್ಪ, ತರ್ಲೇ ವಿಲೇಜ್, ಏನ್ ನಿನ್ ಪ್ರಾಬ್ಲಮ್ಮು, ಹಳ್ಳಿ ಪಂಚಾಯತಿ, ಗಡ್ಡಪ್ಪನ್ ದುನಿಯಾ, ಜಾನಿ ಜಾನಿ ಯೆಸ್ ಪಪ್ಪಾ ಸೇರಿ 8 ಸಿನಿಮಾಗಳಲ್ಲಿ ಅಭಿನಯಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))