ಸಂಭ್ರಮದಿಂದ ಜರುಗಿದ ಗಾದಿಲಿಂಗೇಶ್ವರ ರಥೋತ್ಸವ

| Published : Mar 15 2024, 01:15 AM IST

ಸಂಭ್ರಮದಿಂದ ಜರುಗಿದ ಗಾದಿಲಿಂಗೇಶ್ವರ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ರಥೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಕುರುಗೋಡು: ತಾಲೂಕಿನ ಸಮೀಪದ ಹೊಸಗೆಣಿಕೆಹಾಳು ಗ್ರಾಮದಲ್ಲಿ ಗಾದಿಲಿಂಗೇಶ್ವರ ಸ್ವಾಮಿ ರಥೋತ್ಸವ ಸಡಗರ ಸಂಭ್ರಮದಿಂದ ಗುರುವಾರ ಸಂಜೆ ಜರುಗಿತು.

ರಥೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಕಳೆದ 12 ದಿನಗಳಿಂದ ಗಾದಿಲಿಂಗೇಶ್ವರ ಪುರಾಣ ಜರುಗಿತು. ಪುರಾಣ ಕಾರ್ಯಕ್ರಮದಲ್ಲಿ ನಾಲ್ಕು ಜೋಡಿ ನೂತನ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.ರಥೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಹೊಸಗೆಣಿಕೆಹಾಳು ಸೇರಿದಂತೆ ಸುತ್ತಮುತ್ತಲಿನ ಕೊಂಚಿಗೇರಿ, ದಾಸಾಪುರ, ಗೆಣಿಕೆಹಾಳು, ಗೆಣಿಕೆಹಾಳು ಕ್ಯಾಂಪ್, ಮುಷ್ಟಗಟ್ಟೆ ಗ್ರಾಮಗಳ ಭಕ್ತರು ಬೆಳಿಗ್ಗೆಯಿಂದ ದೇವಸ್ಥಾನಕ್ಕೆ ಭೇಟಿನೀಡಿ ಗಾದಿಲಿಂಗೇಶ್ವರ ಸ್ವಾಮಿ ದರ್ಶನ ಪಡೆದು ಹೂ ಹಣ್ಣು ಮತ್ತು ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.ಅತ್ತ ಗ್ರಾಮದ ಕುರಿಗಳ ಹಿಂಡು ಹಟ್ಟಿ ಸೇರುತ್ತಿದ್ದಂತೆ ಇತ್ತ ಗೋಧೂಳಿ ಸಮಯದಲ್ಲಿ ಅಲಂಕೃತ ರಥವನ್ನು ದೇವಸ್ಥಾನದ ಆವರಣ ದಿಂದ ಎದುರು ಬಸವಣ್ಣ ಕಟ್ಟೆವರೆಗೆ ಎಳೆದು ಪುನಃ ಸ್ವಸ್ಥಳಕ್ಕೆ ಎಳೆದುತಂದರು.ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಅರು ಗಾದಿಲಿಂಗ ತಾತನವರಿಗೆ ಜಯಕಾರ ಕೂಗಿದರು. ರಥಕ್ಕೆ ಬಾಳೆಹಣ್ಣು ಎಸೆದು ಮನದ ಹರಕೆ ತೀರಿಸಿದರು.ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಇಲ್ಲಿನ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ತೆ ಕೈಗೊಂಡಿದ್ದರು. ತಾಲೂಕಿನ ಬಾದನಹಟ್ಟಿ, ಕುರುಗೋಡು, ಸೋಮಸಮುದ್ರ ಮತ್ತು ಏಳುಬೆಂಚಿ ಗ್ರಾಮಗಳಲ್ಲಿಯೂ ಗಾದಿಲಿಂಗೇಶ್ವರ ರಥೋತ್ಸವ ಜರುಗಿದವು.