ಮಾಲೂರು: ಬೆಂಗಳೂರಿನ ಕ್ರೈಸ್ಟ್ ಸ್ಕೂಲ್ ಆಫ್ ಲಾ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲೀಗಲ್ ಎಯ್ದ್ ಮತ್ತು ಅವೇರ್ನೆಸ್ ಸಮಿತಿಯ ವತಿಯಿಂದ ತಾಲೂಕಿನ ಚಿಕ್ಕಕುಂತೂರು ಗ್ರಾಮದಲ್ಲಿ ಕಾನೂನು ನೆರವು ಮತ್ತು ಕಾನೂನು ಅರಿವು ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಹಾಯಕ ಸರ್ಕಾರಿ ಅಭಿಯೋಜಕಿ ರೂಪ ಅವರು, ಕಾನೂನಿನ ಅರಿವು ಪಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಅರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಹಿಂದುಳಿದ ಯಾವುದೇ ವ್ಯಕ್ತಿಯು ನ್ಯಾಯದಿಂದ ವಂಚಿತರಾಗಬಾರದು. ಸಾರ್ವಜನಿಕರು ತಾಲೂಕು ಸೇವಾ ಸಮಿತಿ ಹಾಗೂ ಸೇವಾ ಸಮಿತಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅರ್ಹರಿಗೆ ಉಚಿತ ಕಾನೂನು ನೆರವು ಲಭ್ಯವಿದ್ದು, ಇದರ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದುವ ಜತೆಯಲ್ಲಿ ಇತರರಲ್ಲೂ ಜಾಗೃತಿ ಮೂಡಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಗ್ರಾಮದ ನಿವಾಸಿಗಳೂಂದಿಗೆ ನೇರವಾಗಿ ಸಂವಾದ ನಡೆಸಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು. ವಿಶೇಷವಾಗಿ ವೃದ್ಯಾಪ್ಯ,ವಿಧವಾ ಹಾಗೂ ಅಂಗವಿಕಲರ ಪಿಂಚಣಿ ಸೌಲಭ್ಯಗಳು ದೂರೆಯದೆ ಇರುವುದು, ಸರ್ಕಾರಿ ಯೋಜನೆ ಅನುಷ್ಠಾನದಲ್ಲಿನ ವಿಳಂಬ,ಅಗತ್ಯ ದಾಖಲೆಗಳಿಗೆ ಸಂಬಂಧಿಸಿದ ತೊಂದರೆಗಳು ಹಾಗೂ ಇತರೆ ಸಾರ್ವಜನಿಕ ತೊಂದರೆಗಳು ಕುರಿತು ಸಲ್ಲಿಸಿದ ಮನವಿಗೆ ಸೂಕ್ತ ಕಾನೂನು ಮಾರ್ಗದರ್ಶನ ನೀಡಿದರು.
ವಕೀಲ ಸಂಘದ ಶ್ರೀನಿವಾಸ್, ಕಿರಣ್, ಯುಜಿ ಸಂಯೋಜಕ ಡಾ.ಸೌಮ್ಯ ಸುರೇಶ್, ಡಾ.ಜಯಂತಿ, ಆಶೋಕ್ ರೋಡಿಗ್ರಸ್, ಆಶಿಷ್ ಪಾಠಕ್, ಶಿಬಿರದ ಸಮನ್ವಯವನ್ನು ಸಮಿತಿ ಸಂಚಾಲಕ ನಿಮಿಷ್, ಸಕಲಾ, ಮನೀಶ್, ಅದಿತಿ ವಹಿಸಿದ್ದರು.